ಮನೆ ರಾಷ್ಟ್ರೀಯ ಮಧ್ಯಪ್ರದೇಶ: ಹಳಿ ತಪ್ಪಿದ ಎಲ್’​ಪಿಜಿ ಸಾಗಿಸುತ್ತಿದ್ದ ಗೂಡ್ಸ್​ ರೈಲು

ಮಧ್ಯಪ್ರದೇಶ: ಹಳಿ ತಪ್ಪಿದ ಎಲ್’​ಪಿಜಿ ಸಾಗಿಸುತ್ತಿದ್ದ ಗೂಡ್ಸ್​ ರೈಲು

0

ಮಧ್ಯಪ್ರದೇಶ: ಜಬಲ್​ ಪುರ ಜಿಲ್ಲೆಯ ಗ್ಯಾಸ್​ ಫ್ಯಾಕ್ಟರಿಯೊಂದರಲ್ಲಿ ಗೂಡ್ಸ್​ ರೈಲೊಂದು ಹಳಿ ತಪ್ಪಿರುವ ಘಟನೆ ಜಿಲ್ಲೆಯ ಶಹಪುರ ಭಿಟೋನಿ ನಿಲ್ದಾಣದ ಭಾರತ್ ಪೆಟ್ರೋಲಿಯಂ ಡಿಪೋ ಬಳಿ ನಡೆದಿದೆ.

Join Our Whatsapp Group

ಈ ಅಪಘಾತದಲ್ಲಿ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಮಾಹಿತಿ ಪಡೆದ ಕೂಡಲೇ ರೈಲ್ವೆ ಅಧಿಕಾರಿಗಳು ಅಪಘಾತ ಪರಿಹಾರ ವಾಹನದೊಂದಿಗೆ ತಡರಾತ್ರಿ ಸ್ಥಳಕ್ಕೆ ತಲುಪಿದರು. ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ ಗ್ಯಾಸ್ ಫ್ಯಾಕ್ಟರಿಯೊಂದರೊಳಗೆ ರೇಕ್‌ ಗಳನ್ನು ಖಾಲಿ ಮಾಡಲು ಹೋದಾಗ ಗೂಡ್ಸ್ ರೈಲಿನಿಂದ ಎರಡು ವ್ಯಾಗನ್‌ ಗಳು ಎಲ್‌ಪಿಜಿ ರೇಕ್‌ ಗಳು ಹಳಿತಪ್ಪಿದವು.

ಜೂನ್ 2 ರಂದು ಒಡಿಶಾದ ಬಾಲಸೋರ್​ನಲ್ಲಿ ತ್ರಿವಳಿ ರೈಲು ಅಪಘಾತ ಸಂಭವಿಸಿ ಇದುವರೆಗೆ 288 ಮಂದಿ ಮೃತಪಟ್ಟಿದ್ದು, ಸಾವಿರಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಈ ಅಪಘಾತದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ.

ಹಿಂದಿನ ಲೇಖನ“ಉಚಿತ ಗ್ಯಾರಂಟಿ ಚುನಾವಣಾ ಗಿಮಿಕ್ ಅಷ್ಟೇ”: ವೈರಲ್​ ಹೇಳಿಕೆಗೆ ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ
ಮುಂದಿನ ಲೇಖನಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಲಾರಿ: ಚಾಲಕ, ಕ್ಲೀನರ್ ಪಾರು