ಮನೆ ಮನರಂಜನೆ ನಟ ವಿಕ್ರಮ್ ಹಾಗೂ ಅವರ ಮಗ ಧ್ರುವ ವಿಕ್ರಮ್ ನಟನೆಯ ಮಹಾನ್ ಚಿತ್ರದ ಟೀಸರ್ ರಿಲೀಸ್

ನಟ ವಿಕ್ರಮ್ ಹಾಗೂ ಅವರ ಮಗ ಧ್ರುವ ವಿಕ್ರಮ್ ನಟನೆಯ ಮಹಾನ್ ಚಿತ್ರದ ಟೀಸರ್ ರಿಲೀಸ್

0

ಬೆಂಗಳೂರು: ನಟ ಚಿಯಾನ್ ವಿಕ್ರಮ್ ಹಾಗೂ ಅವರ ಮಗ ಧ್ರುವ ವಿಕ್ರಮ್ ಕೂಡಿ ನಟಿಸಿರುವ  ‘ಮಹಾನ್’ ಸಿನಿಮಾದ ಟೀಸರ್ ಇಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

ಈ ಸಿನಿಮಾ ಫೆಬ್ರುವರಿ 10 ರಂದು ಅಮೆಜಾನ್‌ ಫ್ರೈಮ್‌ನಲ್ಲಿ ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲೆಯಾಳಂನಲ್ಲಿ ಬಿಡುಗಡೆಯಾಗಲಿದ್ದು, ಕನ್ನಡದಲ್ಲಿ ‘ಮಹಾ ಪುರುಷ್‌ ಆಗಿ ಕಾಣಿಸಿಕೊಳ್ಳಲಿದೆ.

ಮಹಾತ್ಮಾ ಗಾಂಧೀಜಿ ಬಗ್ಗೆ ಭಿನ್ನ ದೃಷ್ಟಿಕೋನವನ್ನು ಇಟ್ಟುಕೊಂಡು ಈ ಸಿನಿಮಾ ಬರುತ್ತಿದ್ದು, ಸಿನಿಪ್ರಿಯರಲ್ಲಿ ತೀವ್ರ ಕುತೂಹಲ ಮನೆ ಮಾಡಿದೆ. ‘ಪಿಜ್ಜಾ’, ‘ಜಿಗರ್‌ಥಂಡಾ’, ‘ಪೆಟ್ಟಾ’ದಂತಹ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಟೀಸರ್‌ನಲ್ಲಿ ವಿಕ್ರಮ್ ಗ್ಯಾಂಗ್‌ಸ್ಟರ್ ಹಾಗೂ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧ್ರುವ ವಿಕ್ರಮ್ ಅವರ ಪಾತ್ರವೂ ರಿವೀಲ್ ಆಗಿದ್ದು ‘ದಾದಾ’ ಆಗಿ ಮಿಂಚಿದ್ದಾರೆ. ಆದರೆ, ಆ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರ್ದೇಶಕರು ಬಿಟ್ಟು ಕೊಟ್ಟಿಲ್ಲ. ಈ ಸಿನಿಮಾವನ್ನು ಲಲಿತ್ ಕುಮಾರ್ ಅವರು ‘ಸೆವೆನ್‌ ಸ್ಕ್ರೀನ್ ಸಿನಿಮಾಸ್’ ಬ್ಯಾನರ್‌ ಅಡಿ ನಿರ್ಮಾಣ ಮಾಡಿದ್ದಾರೆ. ‘ಮಹಾನ್’ ವಿಕ್ರಮ್ ಅವರ 60 ನೇ ಸಿನಿಮಾವಾಗಿದ್ದು, ನಟಿ ಸಿಮ್ರನ್ ಜೊತೆಯಾಗಿದ್ದಾರೆ.