ಮನೆ ತಂತ್ರಜ್ಞಾನ 5-ಡೋರ್ ವರ್ಷನ್’ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಮಹೀಂದ್ರಾ ಥಾರ್

5-ಡೋರ್ ವರ್ಷನ್’ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಮಹೀಂದ್ರಾ ಥಾರ್

0

ಮಹೀಂದ್ರಾ ಥಾರ್ ಎಸ್’ಯುವಿಯು ಬಹಳ ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಆಫ್ ರೋಡರ್ ಎಸ್ಯುವಿಯಾಗಿದ್ದು, ಸದ್ಯ ಭಾರತೀಯ ಮಾರುಕಟ್ಟೆಯಲ್ಲಿರುವ ಪ್ರಸ್ತುತ ಜನರೇಷನ್ ಮಹೀಂದ್ರಾ ಥಾರ್ ಮಾದರಿಯು ಬಹುಬೇಡಿಯೊಂದಿಗೆ ಭರ್ಜರಿಯಾಗಿ ಮಾರಾಟವಾಗುತ್ತಿದ್ದು, ಬೇಡಿಕೆ ಹೆಚ್ಚಾಗಿರುವುದರಿಂದ ಈ ಮಹೀಂದ್ರಾ ಥಾರ್ ಎಸ್ಯುವಿಯ ಕಾಯುವ ಅವಧಿಯು ಕೂಡ ಹೆಚ್ಚಿದೆ.

Join Our Whatsapp Group

ಇದೀಗ ಮಹಿಂದ್ರಾ ಕಂಪನಿಯು ಬಹುಬೇಡಿಕೆಯ ಥಾರ್ ಎಸ್ಯುವಿಯ 5-ಡೊರಿನ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಹೀಂದ್ರಾ ಥಾರ್ 5-ಡೊರಿನ ಆವೃತ್ತಿಯು ಕಳೆದ ಕೆಲವು ತಿಂಗಳುಗಳಿಂದ ಅಗಾಗ ರೋಡ್ ಟೆಸ್ಟ್ ‘ನಲ್ಲಿ ಕಾಣಿಸಿಕೊಳ್ಳುತ್ತಿದೆ. ಮಹೀಂದ್ರಾ ಥಾರ್ ಎಸ್’ಯುವಿಯು ಇನ್ನಷ್ಟು ಆಕರ್ಷಕವಾಗಿಸಲು ಸಿದ್ಧವಾಗಿದೆ. ಥಾರ್ ಅನ್ನು ಪ್ರಸ್ತುತ 3-ಡೋರಿನ ಲೇಔಟ್’ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದೀಗ ಮಹಿಂದ್ರಾ ಥಾರ್ ಎಸ್ಯುವಿಯು 5-ಡೋರ್ ಆವೃತ್ತಿಯಾಗಿ ಬರಲು ಸಜ್ಜಾಗಿದೆ.

ಈ ಮಹೀಂದ್ರಾ ಥಾರ್ 5-ಡೋರಿನ ಎಸ್ಯುವಿಯು ಇತ್ತೀಚೆಗೆ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡಿದೆ. ಈ 5-ಡೋರಿನ ಆವೃತ್ತಿಯು 3-ಡೋರಿನ ಥಾರ್ಗೆ ಹೋಲುತ್ತದೆ. ಈ ಹೊಸ ಮಹೀಂದ್ರಾ ಥಾರ್ ಎಸ್ಯುವಿಯು ಉದ್ದವಾದ ವೀಲ್’ಬೇಸ್ ಮತ್ತು ಹಿಂಭಾಗದ ಡೋರುಗಳನ್ನು ಹೊಂದಿವೆ.

 3-ಡೋರಿನ ಥಾರ್’ನಂತೆಯೇ ಥಾರ್ 5-ಡೋರ್ ಆವೃತ್ತಿಯು ಆಗಸ್ಟ್ 15 ರಂದು ಅನಾವರಣಗೊಳ್ಳುವ ನಿರೀಕ್ಷೆಯಿದೆ. ಈ ಹೊಸ ಎಸ್’ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗಿದೆ.

ಹೆಚ್ಚು ಪ್ರಯಾಣಿಕರನ್ನು ಸಾಗಿಸಲು ಭಾರವಾದ ಮತ್ತು ಕಾರ್ಯವನ್ನು ನಿರ್ವಹಿಸುವ ಕಾರಣ, 5-ಡೋರ್ ಥಾರ್ 2-0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಅನ್ನು ನೀಡಬಹುದು.ಇನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ನೊಂದಿಗೆ 370 ಎನ್’ಎಂ ಮತ್ತು 6-ಸ್ಪೀಡ್ ಎಟಿಯೊಂದಿಗೆ 380 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಡೀಸೆಲ್ ಎಂಜಿನ್ 130 ಎಚ್’ಪಿ ಮತ್ತು 172 ಎಚ್’ಪಿ ಎಂಬ ಎರಡು ಸ್ಥಿತಿಗಳಲ್ಲಿ ನೀಡಲಾಗುತ್ತದೆ.

ಮೊದಲನೆಯದು ಕೇವಲ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ ಲಭ್ಯವಿದೆ ಮತ್ತು 300 ಎನ್ಎಂ ಟಾರ್ಕ್ ಅನ್ನು ನೀಡುತ್ತದೆ. ಟ್ಯೂನ್ನ ಉನ್ನತ ಸ್ಥಿತಿಯಲ್ಲಿ, ಟಾರ್ಕ್ ಔಟ್’ಪುಟ್ ಮ್ಯಾನುಯಲ್’ನೊಂದಿಗೆ 370 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮಹೀಂದ್ರಾ ಥಾರ್ ಡೀಸೆಲ್ 130 ಬಿಹೆಚ್’ಪಿ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬೈಕ್’ನಂತೆ ಮೈಲೇಜ್ ನೀಡಲಿದೆ

ಇನ್ನು ಥಾರ್ ಪೆಟ್ರೋಲ್ 150 ಬಿಹೆಚ್ಪಿ ಪವರ್  ಮತ್ತು ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 300 ಎನ್’ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, 6-ಸ್ಪೀಡ್ ಟಾರ್ಕ್ ಕರ್ನವಾಟರ್ ನೊಂದಿಗೆ 320 ಎನ್’ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಮಹೀಂದ್ರಾ ಥಾರ್ ಎಸ್ಯುವಿಯು ಅದ್ಭುತ ಯಶಸ್ಸನ್ನು ಕಂಡಿದೆ ಮತ್ತು ಇದು ಒಂದೆರಡು ತಿಂಗಳ ಹಿಂದೆ ಒಂದು ಲಕ್ಷ ಉತ್ಪಾದನಾ ಮೈಲಿಗಲ್ಲನ್ನು ದಾಟಿದೆ.

ಇನ್ನು ಈ ಹೊಸ ಮಹೀಂದ್ರಾ ಥಾರ್ 5-ಡೋರ್ ಎಸ್’ಯುವಿಯು ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸಬಹುದು. ಇದು ಪ್ರಸ್ತುತ ಥಾರ್ 3 ಬಾಗಿಲಿನಂತೆಯೇ ಡ್ಯಾಶ್ಬೋರ್ಡ್ ವಿನ್ಯಾಸವನ್ನು ಹೊಂದಿದೆ. ಮುಂಭಾಗದ ಸೀಟ್ ವಿನ್ಯಾಸವೂ ಹೋಲುತ್ತದೆ. ಈ 5 ಡೋರ್ ಆವೃತ್ತಿಯಾಗಿರುವುದರಿಂದ ಹಿಂದಿನ ಸೀಟ್’ಗಳು ಯೋಗ್ಯವಾದ ಲೆಗ್’ರೂಮ್ ಅನ್ನು ನೀಡುತ್ತವೆ. ಇನ್ನು ಸಾಕಷ್ಟು ಉತ್ತಮವಾದ ಬೂಟ್ ಸ್ಪೇಸ್ ಇದೆ ಎಂದು ಎಂದು ತೋರುತ್ತದೆ.

ಹಿಂದಿನ ಸೀಟುಗಳು 50:50 ಸ್ಪ್ಲಿಟ್’ನಲ್ಲಿವೆ. ಪ್ರಸ್ತುತ ಥಾರ್ ಈಗಾಗಲೇ ಸಮಗ್ರ ಫೀಚರ್ಸ್ ಗಳೊಂದಿಗೆ ಉತ್ತಮ ಅನುಭವವನ್ನು ನೀಡುತ್ತದೆ. ಈ 5-ಡೋರ್ ಥಾರ್ ಫ್ಯಾಮಿಲಿ ಆಧಾರಿತ ಎಸ್’ಯುವಿಯಾಗಿ ಅದರ ಸ್ಥಾನವನ್ನು ಇನ್ನಷ್ಟು ಸುಧಾರಿಸಲು ಕೆಲಸ ಮಾಡುತ್ತದೆ. ಪ್ರಮುಖ ಅಪ್’ಡೇಟ್’ಗಳಲ್ಲಿ ಒಂದು ಸಿಂಗಲ್-ಪೇನ್ ಸನ್’ರೂಫ್ ಆಗಿದೆ ಎಂದು ಹೇಳಲಾಗುತ್ತಿದೆ,

ಆದರೆ ಇದು ಇನ್ನು ಖಚಿತವಾಗಿಲ್ಲ. ಈ ಸನ್’ರೂಫ್ ಒಂದು ಭಿನ್ನ-ನಿರ್ದಿಷ್ಟ ವೈಶಿಷ್ಟ್ಯವಾಗಿರಬಹುದು ಮತ್ತು ಎಲ್ಲಾ ಟ್ರಿಮ್ ಹಂತಗಳಲ್ಲಿ ಲಭ್ಯವಿಲ್ಲದಿರಬಹುದು. ಪ್ರಸ್ತುತ ಥಾರ್ ಸನ್’ರೂಫ್ ಅನ್ನು ಹೊಂದಿಲ್ಲ ಮತ್ತು ಅದರ ಅಗತ್ಯವಿಲ್ಲ,

ಹಿಂದಿನ ಲೇಖನಪ್ರೀತಿ ನಿರಾಕರಿಸಿದ ಬಾಲಕಿ ಮೇಲೆ ಮಚ್ಚಿನಿಂದ ಹಲ್ಲೆ: ಸ್ಥಿತಿ ಗಂಭೀರ
ಮುಂದಿನ ಲೇಖನಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಹಾಗೂ ದೆಹಲಿ ಅಧಿಕಾರ ಸಂಘರ್ಷ ಪ್ರಕರಣಗಳ ಕುರಿತಾದ ತೀರ್ಪನ್ನು ನಾಳೆ ನೀಡಲಿದೆ ಸುಪ್ರೀಂ