ಮಳವಳ್ಳಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಬಾಬು, ಡಿವೈಎಸ್‌ಪಿ ಟಿ.ಸುನೀಲ್ ಕುಮಾರ್, ಇನ್ ಸ್ಪೆಕ್ಟರ್ ಜಯರತ್ನ ತಂಡ ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀದರು.
ಆಸ್ಪತ್ರೆಗೆ ಹೆರಿಗೆ ವಾರ್ಡ್, ಡಯಾಲೀಸ್ ಸೆಂಟರ್, ಆಪರೇಷನ್ ಕೊಠಡಿ, ಔಷಧ ಉಗ್ರಾಣ ಸೇರಿದಂತೆ ವಿವಿಧೆಡೆಗೆ ತೆರಳಿ ಪರಿಶೀಲನೆ ನಡೆಸಿದರು.
ಇದೇ ವೇಳೆ ಸಾರ್ವಜನಿಕರು ಹಾಗೂ ರೋಗಿಗಳಿಂದ ಆಸ್ಪತ್ರೆಗೆ ಸೌಲಭ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸಾರ್ವಜನಿಕ ದೂರಿನ ಬಗ್ಗೆ ವೈದ್ಯರಿಗೆ ಕೆಲ ಸಲಹೆ ಸೂಚನೆ ನೀಡಿದರು.
ಸಾರ್ವಜನಿಕ ಆಸ್ಪತ್ರೆಯ ಅಧಿಕಾರಿ ಶ್ರೀಲತಾ ಅವರಿಂದ ಆಸ್ಪತ್ರೆಯಲ್ಲಿ ಸಿಗುವ ಸವಲತ್ತು ಬಗ್ಗೆ ಮಾಹಿತಿ ಪಡೆದರು.















