ಮನೆ ಕ್ರೀಡೆ ಶ್ರೀಲಂಕಾ ಸರಣಿಗೂ ಮುನ್ನವೇ ಭಾರತ ತಂಡದಿಂದ ಇಬ್ಬರು ಸ್ಟಾರ್ ಆಟಗಾರರು ಔಟ್

ಶ್ರೀಲಂಕಾ ಸರಣಿಗೂ ಮುನ್ನವೇ ಭಾರತ ತಂಡದಿಂದ ಇಬ್ಬರು ಸ್ಟಾರ್ ಆಟಗಾರರು ಔಟ್

0

ನವದೆಹಲಿಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಟಿ20 ಸರಣಿ ಆರಂಭಕ್ಕೂ ಮೊದಲೇ ಟೀಂ ಇಂಡಿಯಾಗೆ ಆಘಾತ ಎದುರಾಗಿದ್ದು, ತಂಡದ ಇಬ್ಬರು ಸ್ಟಾರ್ ಆಟಗಾರರು ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ.

ಫೆಬ್ರವರಿ 24 ರಿಂದ ಭಾರತ ಮತ್ತು ಶ್ರೀಲಂಕಾ ನಡುವೆ ಟಿ20 ಸರಣಿ ಲಕ್ನೋದಲ್ಲಿ ಆರಂಭವಾಗಲಿದ್ದು, ತಂಡದ ಪ್ರಮುಖ ಆಟಗಾರರಾದ ಸೂರ್ಯ ಕುಮಾರ್ ಯಾದವ್ ಮತ್ತು ಆಲ್ ರೌಂಡರ್ ದೀಪಕ್ ಚಹರ್ ಗಾಯದ ಸಮಸ್ಯೆಗೆ ತುತ್ತಾಗಿ ತಂಡದಿಂದ ಹೊರಬಿದ್ದಿದ್ದಾರೆ.

ಇನ್ನು ಸ್ಟಾರ್ ಆಲ್ ರೌಂಡರ್ ದೀಪಕ್ ಚಹರ್ ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಗುಳಿದಿದ್ದು, ಚಹರ್ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಆಯ್ಕೆಯಾಗಿದ್ದರು. ಇತ್ತೀಚೆಗೆ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಟಿ20 ಪಂದ್ಯದ ವೇಳೆ ಚಹಾರ್ ಗಾಯಗೊಂಡಿದ್ದರು. ಪಂದ್ಯದ ಎರಡನೇ ಓವರ್ ಬೌಲಿಂಗ್ ಮಾಡುವಾಗ ಚಹರ್ ಬಲ ತೊಡೆಯ ಸ್ನಾಯು ಸೆಳೆತದಿಂದ ಮೈದಾನವನ್ನು ಹೊರನಡೆದಿದ್ದರು. ವೈದ್ಯರ ಪರೀಕ್ಷೆಯ ನಂತರ ಗಾಯದ ತೀವ್ರತೆ ಹೆಚ್ಚಿದೆ ಎಂದು ತಿಳಿದುಬಂದಿದೆ. ಚೇತರಿಸಿಕೊಳ್ಳಲು 5-6 ವಾರಗಳು ತೆಗೆದುಕೊಳ್ಳಬಹುದು ಎಂಬ ವೈದ್ಯರು ತಿಳಿಸಿದ್ದಾರೆ.

ಫೆಬ್ರವರಿ 26 ಮತ್ತು 27 ರಂದು ಧರ್ಮಶಾಲಾದಲ್ಲಿ ಎರಡು ಮತ್ತು ಮೂರನೇ ಟಿ20 ಪಂದ್ಯಗಳು ನಡೆಯಲಿವೆ. ಮೊದಲ ಟೆಸ್ಟ್ ಮಾರ್ಚ್ 4-8 ರಂದು ಮೊಹಾಲಿಯಲ್ಲಿ ಮತ್ತು ಎರಡನೇ ಟೆಸ್ಟ್ (ಹಗಲು ಮತ್ತು ರಾತ್ರಿ) ಮಾರ್ಚ್ 12-16 ರಂದು ಬೆಂಗಳೂರಿನಲ್ಲಿ ನಡೆಯಲಿದೆ

ಹಿಂದಿನ ಲೇಖನಮಂಡ್ಯದ ಉದ್ಯಮಿ ಮನೆ ಮೇಲೆ ಐಟಿ  ದಾಳಿ
ಮುಂದಿನ ಲೇಖನಮೈಸೂರು: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆಯ ಬಂಧನ, ಇಬ್ಬರ ರಕ್ಷಣೆ