ಮನೆ ಅಪರಾಧ ಪಾರಿವಾಳ ಕದ್ದ ವಿಚಾರಕ್ಕಾಗಿ ಗಲಾಟೆ: ಕೊಲೆಯಲ್ಲಿ ಅಂತ್ಯ

ಪಾರಿವಾಳ ಕದ್ದ ವಿಚಾರಕ್ಕಾಗಿ ಗಲಾಟೆ: ಕೊಲೆಯಲ್ಲಿ ಅಂತ್ಯ

0

ಮೈಸೂರು: ತಮ್ಮ ಪಾರಿವಾಳಗಳನ್ನು ಎದುರು ಮನೆಯವರು ಕದ್ದಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೋರ್ವನ ಮಗ ಗಲಾಟೆ ಆರಂಭಿಸಿದ್ದ ಜಗಳ ವಿಕೋಪಕ್ಕೆ ತಿರುಗಿ ಪಾರಿವಾಳಗಳನ್ನು ಸಾಕಿದ್ದ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಕೆ. ಆರ್. ಮೊಹಲ್ಲಾದ ಸುಣ್ಣದ ಕೇರಿ ರಸ್ತೆಯಲ್ಲಿ ನಡೆದಿದೆ.
ಗೋವಿಂದರಾಜು (೪೯) ಕೊಲೆಗೀಡಾದ ವ್ಯಕ್ತಿಯಾಗಿದ್ದು, ಮನೋಜ್ನಾಯಕ್, ಜಯಶಂಕರ್ ಕೊಲೆ ಆರೋಪಿಗಳಾಗಿದ್ದು, ಇವರನ್ನು ಬಂಧಿಸಲಾಗಿದೆ. ಮತ್ತಿಬ್ಬರು ಆರೋಪಿಗಳಾದ ವಿನಾಯಕ್, ಪ್ರಮೋದ್ನಾಯಕ್ ಎಸ್ಕೇಪ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಎದುರು-ಬದುರು ಮನೆಯಲ್ಲಿ ಯುವಕರು ಪಾರಿವಾಳ ಸಾಕಿಕೊಂಡಿದ್ದರು.
ಸಂಕ್ರಾAತಿ ಹಬ್ಬದ ರಾತ್ರಿಯಂದು ಉಲ್ಲಾಸ್ ಎಂಬಾತನ ೩೮ ಪಾರಿವಾಳಗಳು ಕಳ್ಳತನವಾಗಿದ್ದವು. ಈ ವೇಳೆ ಪಾರಿವಾಳ ಕಳ್ಳತನವಾಗಿದ್ದಕ್ಕೆ ಬೈದುಕೊಂಡು ಉಲ್ಲಾಸ್ ಮತ್ತು ಮನೆಯವರು ಸುಮ್ಮನಾಗಿದ್ದರು.
ಎದುರು ಮನೆಯಲ್ಲಿದ್ದ ವಿನಾಯಕ್, ಪ್ರಮೋದ್ನಾಯಕ್, ಜಯಶಂಕರ್, ಮನೋಜ್ನಾಯಕ್, ವಿಜಯ್(ಕುಪ್ಪ), ಪಾರಿವಾಳ ಕದ್ದಿದ್ದಾರೆಂದು ಕೊಲೆಯಾದ ಗೋವಿಂದರಾಜು ಪುತ್ರ ಉಲ್ಲಾಸ್ ಆರೋಪ ಮಾಡಿದ್ದ. ಮಂಗಳವಾರ ವಿನಾಯಕ್ ಮನೆಯಲ್ಲಿ ಪಾರಿವಾಳಗಳಿರಬಹುದೆಂದು ಪರಿಶೀಲನೆ ಮಾಡಲು ಉಲ್ಲಾಸ್ ಸ್ನೇಹಿತ ಪ್ರಮೋದ್ ತೆರಳಿದ್ದ. ಈ ವೇಳೆ ಪ್ರಮೋದ್ ಮೇಲೆ ವಿನಾಯಕ್, ಜಯಶಂಕರ್, ಪ್ರಮೋದ್ನಾಯಕ್, ಮನೋಜ್ನಾಯಕ್ ಹಲ್ಲೆ ಮಾಡಿದ್ದರು ಎನ್ನಲಾಗ್ತಿದೆ.
ಆತನ ಮೇಲೆ ಹಲ್ಲೆ ನಡೆಸಿದ್ದನ್ನ ಉಲ್ಲಾಸ್ ತಂದೆ ಗೋವಿಂದರಾಜು ಈ ನಾಲ್ವರಿಗೆ ಪ್ರಶ್ನೆ ಮಾಡಿದ್ದಾರೆ. ನಂತರ ಗೋವಿಂದರಾಜು ಮನೆ ಬಳಿ ಬಂದ ನಾಲ್ವರು ಗೋವಿಂದರಾಜು ಮತ್ತು ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಗೋವಿಂದರಾಜು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ಬುಧವಾರ ಮೃತಪಟ್ಟಿದ್ದಾರೆ. ಕೆ. ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ.

ಹಿಂದಿನ ಲೇಖನರಸ್ತೆ ಅಪಘಾತದಲ್ಲಿ ಗಾಯಗೊಂಡ ನಟಿ ದಿವ್ಯಾ ಸುರೇಶ್
ಮುಂದಿನ ಲೇಖನತನ್ವೀರ್ ಸೇಠ್ ಗೆ ಡಿಸಿಎಂ ಸ್ಥಾನ ಸಿಗಲಿ: ಅಭಿಮಾನಿಗಳಿಂದ ಅಭಿಯಾನ