ಮನೆ ಅಪರಾಧ ಮಂಗಳೂರು: ಐವನ್ ಡಿಸೋಜಾ ಮನೆ ಮೇಲೆ ಕಲ್ಲು ತೂರಾಟ

ಮಂಗಳೂರು: ಐವನ್ ಡಿಸೋಜಾ ಮನೆ ಮೇಲೆ ಕಲ್ಲು ತೂರಾಟ

0

ಮಂಗಳೂರು(ದಕ್ಷಿಣ ಕನ್ನಡ): ಎಂಎಲ್ ಸಿ ಐವನ್ ಡಿಸೋಜಾರ ಮಂಗಳೂರಿನ ಕಂಕನಾಡಿ ವೆಲೆನ್ಸಿಯಾದಲ್ಲಿರೋ ಮನೆಗೆ ಕಲ್ಲು ತೂರಾಟ ನಡೆಸಲಾಗಿದೆ. ರಾತ್ರಿ ಈ ಘಟನೆ ನಡೆದಿದ್ದು ಈ ಸಂದರ್ಭ ಐವನ್ ಡಿಸೋಜಾ ಅವರು ಮನೆಯಲ್ಲಿ ಇರಲಿಲ್ಲ. ಬೆಂಗಳೂರಲ್ಲಿ ಪಕ್ಷದ ಮೀಟಿಂಗ್ ಗೆ ಹೋಗಿದ್ದರು.

Join Our Whatsapp Group

ಸುಮಾರು 5 ರಿಂದ ಆರು ಜನರ ತಂಡ ರಾತ್ರಿ 11 ರ ಸುಮಾರಿಗೆ ನಗರದ ವೆಲೆನ್ಸಿಯದಲ್ಲಿರುವ ಐವನ್ ಡಿಸೋಜಾರ ಮನೆಗೆ ಕಲ್ಲು ತೂರಾಟ ನಡೆಸಿ ಘೋಷಣೆಗಳನ್ನು ಕೂಗಿ ಬಳಿಕ ಪರಾರಿಯಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.