ಮನೆ ತಂತ್ರಜ್ಞಾನ ಮಾರುತಿ ಬ್ರೆಜ್ಜಾ ಸಿಎನ್’ಜಿ ಬಿಡುಗಡೆ

ಮಾರುತಿ ಬ್ರೆಜ್ಜಾ ಸಿಎನ್’ಜಿ ಬಿಡುಗಡೆ

0

ಮಾರುತಿ ಸುಜುಕಿ ಕಂಪನಿಯು ಮಾರುತಿ ಬ್ರೆಜ್ಜಾ ಸಿಎನ್’ಜಿ ಬಿಡುಗಡೆಗೊಳಿಸಿದ್ದು, ಆರಂಭಿಕ ಎಕ್ಸ್  ಶೋರೂಮ್ ಬೆಲೆ 9.14 ಲಕ್ಷ ರೂ. ಇದೆ. ಎಸ್ ಯುವಿ ಮಾದರಿಯಲ್ಲಿ ಸಿಎನ್ ಜಿ ತಂತ್ರಜ್ಞಾನ ಹೊಂದಿರುವ ಮೊದಲ ಕಾರು ಬ್ರೆಜ್ಜಾ ಸಿಎನ್’ಜಿ ಆಗಿದೆ.

ಒಂದು ಕಿಲೋ ಸಿಎನ್ ಜಿ ಗೆ 25.51 ಕಿ.ಮೀ. ಮೈಲೇಜ್ ಬರಲಿದೆ. ಎಲ್ಎಕ್ಸ್ಐ, ವಿಎಕ್ಸ್ ಐ, ಜೆಡ್ ಎಕ್ಸ್ ಐ ಮತ್ತು ಜೆಡ್ ಎಕ್ಸ್ ಐ ಡ್ನೂಯಲ್ ಟೋನ್ ವೇರಿಯಂಟ್ಗಳಲ್ಲಿ ಕಾರು ಲಭ್ಯವಿದೆ. 1.5 ಲೀ. ಡ್ನೂಯಲ್ ಜೆಟ್, ಡ್ನೂಯಲ್ ವಿವಿಟಿ ಎಂಜಿನ್ ಹೊಂದಿದೆ.

ಟಾಪ್ ವೇರಿಯಂಟ್ ನಲ್ಲಿ ಎಲೆಕ್ಟ್ರಾನಿಕ್ ಸನ್ ರೂಫ್, ಕೀಲೆಸ್ ಪುಶ್ ಸ್ಟಾರ್ಟ್ ಸೇರಿದಂತೆ ಅನೇಕ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಹಿಂದಿನ ಲೇಖನದೇಶದಲ್ಲಿ  3095 ನೂತನ ಕೋವಿಡ್ ಪ್ರಕರಣ ಪತ್ತೆ
ಮುಂದಿನ ಲೇಖನಬೆಂಗಳೂರು- ಮೈಸೂರು ದಶಪಥ ಹೆದ್ದಾರಿ: ಟೋಲ್ ದರ ಏರಿಕೆ