ಮನೆ ದೇವಸ್ಥಾನ ಮಾಸ್ತೇನಹಳ್ಳಿ ಶ್ರೀ ವೀರಭದ್ರ ಸ್ವಾಮಿ ದೇವಾಲಯ

ಮಾಸ್ತೇನಹಳ್ಳಿ ಶ್ರೀ ವೀರಭದ್ರ ಸ್ವಾಮಿ ದೇವಾಲಯ

0

       ಈ ಪುಣ್ಯಕ್ಷೇತ್ರವು ಬಹಳ ಪುರಾತನವಾದದ್ದು ಭಕ್ತರ ಹಾಗೂ ಗ್ರಾಮಸ್ಥರ ಸಹಾಯದಿಂದ ಪುನರ್ ನಿರ್ಮಾಣವಾಗಿದೆ. ರೂಪಗೊಂಡಿದೆ  ರಾಜಾಪುರ ಮತ್ತು ಮಾಸ್ತೇನಹಳ್ಳಿ ಈ 2 ಗ್ರಾಮಗಳು ಹಿಂದೆ ಈ ಗ್ರಾಮದ ಸಂಸ್ಥಾನ ಮಠದಲ್ಲಿ ಶಿವ ದೀಕ್ಷೆ ನಡೆಯುತ್ತಿದ್ದಂತೆ.

Join Our Whatsapp Group

      ವೀರಭದ್ರಸ್ವಾಮಿಯ ಶ್ರೀ ಆಂಜನೇಯನ ಲೋಕ ಸಂಚಾರಕೆಂದು ಬಂದಿದ್ದಾರಂತೆ ರಾಜಾಪುರ ಎಂಬ ಗ್ರಾಮದಲ್ಲಿ ಬರುವಾಗ ಅಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ವಾದ್ಯಗೋಷ್ಠಿಗಳು ಅವರ ಕಿವಿಗೆ ಬಿದ್ದಾಗ ಇಲ್ಲಿ ಯಾವುದೋ  ಸಮಾರಂಭ ನಡೆಯುತ್ತಿದೆ ನೋಡೋಣ ಎಂದು ಹೋದರಂತೆ.

     ಅಲ್ಲಿ ದ್ವಾರಪಾಲಕರು ಶ್ರೀ ವೀರಭದ್ರಸ್ವಾಮಿಯನ್ನು ನೋಡಿ  ಅವರನ್ನು ಒಳಗೆ ಬಿಡಲಿಲ್ಲವಂತೆ  ವೀರಭದ್ರ ನೋಡಲು ಕಪ್ಪಾಗಿದ್ದ ಕಾರಣ  ಅವರನ್ನು ಒಳಗೆ ಹೋಗಲು ತಡೆದಾಗ ಶ್ರೀ ವೀರಭದ್ರಸ್ವಾಮಿಯು ರಾಜಾಪುರ ಮಠ ಒಳಗೆ ಕೂತು ಕಾರ್ಯಕ್ರಮ ನೋಡುತ್ತಿದ್ದರಂತೆ. ಅಲ್ಲಿದ್ದಂತಹ ಸ್ವಾಮಿಗಳು ಆ ಕಪ್ಪು ಬಣ್ಣದ ವಿರಭದ್ರಸ್ವಾಮಿಯನ್ನು ನೋಡಿ ನೀನು ಯಾಕೆ ಇಲ್ಲಿ ಕೂತಿದ್ದೀಯ? ಹೊರಗೆ ಹೋಗು ಎಂದರಂತೆ

       ಆದರೆ ವೀರಭದ್ರ ಸ್ವಾಮಿ ಹೋಗಲಿಲ್ಲವಂತೆ ದೂತರು ಬಂದು ಅವರನ್ನು ಹೊರಗೆ ಕರೆದುಕೊಂಡು ಹೋಗಿ ಬಿಟ್ಟರಂತೆ ಇದೇ ರೀತಿ ಎರಡು ಮೂರು ಸಾರಿ ನಡೆದರೂ ಮತ್ತೆ ವೀರಭದ್ರ ಅದೇ ಸ್ಥಳದಲ್ಲಿ ಕುಳಿತಿದ್ದರಂತೆ ಇದನ್ನು ನೋಡಿದ ಸ್ವಾಮಿಗಳಿಗೆ ಇವರು ಯಾವುದೂ ದೈವ ಶಕ್ತಿ ಇರುವ ಮಹಾತ್ಮೆರಿ ರಬೇಕು ಅವರನ್ನು ಯಾರು ಎಂದು ವಿಚಾರಿಸಿದಾಗ ನಾವು ಅಣ್ಣ-ತಮ್ಮಂದಿರು ಇಬ್ಬರು ಹೀಗೆ ಲೋಕ ಸಂಚಾರಕ್ಕೆ ಬಂದಿದ್ದೇವೆ.

      ನಮಗೂ ದೀಕ್ಷೆ ನೀಡಿ ಎಂದು ಎಂದಿರಂತೆ ನಂತರ ಸ್ವಾಮಿಗಳು ಹೇಳಿದರಂತೆ ಸುಮ್ಮನೆ ಕೊಡುವುದಿಲ್ಲ ಅದನ್ನು ಪಾಲನೆ ಮಾಡಬೇಕು.ದೀಕ್ಷೆ ಪಡೆದ ನೀವು ಊರೂರಿಗೆ ಹೋಗಿ ಭಿಕ್ಷೆ ತಂದು ನನಗೆ 101 ವರ ಕೊಡಬೇಕು ಎಂದರಂತೆ ಆಗ ವೀರಭದ್ರ ಸ್ವಾಮಿ ಆಗಬಹುದು  ಎಂದು ಒಪ್ಪಿಕೊಂಡರಂತೆ

        ಸ್ವಾಮಿಗಳು ವೀರಭದ್ರ ಸ್ವಾಮಿಗೆ ದೀಕ್ಷೆಯನ್ನು ಕೊಟ್ಟರಂತೆ ದೀಕ್ಷೆ ಪಡೆದ ಅಂತರ ಸ್ವಾಮಿಗಳು ಹೇಳಿದ ಹಾಗೆ ಊರೂರಿಗೆ ಹೋಗಿ ಭಿಕ್ಷೆ ಪಡೆದು ಬಂದದ್ದನ್ನು ಮಠಕ್ಕೆ ಸಮರ್ಪಣೆ ಮಾಡಿದರಂತೆ 101 ರೂಪಾಯಿ ವರಹ ಸ್ವಾಮಿಗಳು ಕೇಳಿದರಂತೆ,ರಾತ್ರಿ ಸ್ವಾಮಿಗಳು ಮಲಗಿದ್ದಾಗ ಸುಮಾರು 12 ಘಂಟೆಯೊಂದಿಗೆ ಸ್ವಾಮಿಯ ತಲೆಯ ಪಕ್ಕದಲ್ಲಿ ಏನು ಸದ್ದು ಕೇಳಿಸಿ ಕಣ್ಣು ಬಿಟ್ಟು ನೋಡಿದಾಗ ತಲೆಯ ಪಕ್ಕದಲ್ಲಿ 101 ವರಹ ಬಿದ್ದಿರುವುದನ್ನು ಕಂಡು ಸ್ವಾಮಿಗಳು ಇವನು ಪವಾಡ ಪುರುಷ ಎಂದು ಅಂದುಕೊಂಡರಂತೆ.

       ಶ್ರೀ ವೀರಭದ್ರ ಸ್ವಾಮಿ ಅವರ ಕನಸಿಯಲ್ಲಿ ಬಂದು ನಾನು ಇಂಥ ದಿಕ್ಕಿನಲ್ಲಿ ಹೋಗುತ್ತೇನೆ ನನಗೆ ಒಂದು ಗುಡಿಯನ್ನು ಕಟ್ಟಿಕೊಡಿ ಅಲ್ಲೇ ನಾನು ನೆಲೆಕೊಳ್ಳುತ್ತೇನೆ.ಎಂದರಂತೆ ಆಗ ವೀರಭದ್ರ ಸ್ವಾಮಿಯ ಆಂಜನೇಯ ಸ್ವಾಮಿಯನ್ನು ಕುರಿತು ನಾನು ಇಲ್ಲೇ ನೆಲೆಗೊಳ್ಳುತ್ತೇನೆ ನೀನು ಈ ದಿಕ್ಕಿಗೆ ಹೋಗು ಎಂದು ಮಾಯಸಂದ್ರ ಕಡೆಗೆ ತೋರಿಸಿದಾಗ ಆಂಜನೇಯ ಸ್ವಾಮಿ ಹೋದರಂತೆ.

     ವೀರಭದ್ರ ಸ್ವಾಮಿಯು ಇಲ್ಲಿಯೇ ನೆಲೆಗೊಂಡರಂತೆ.ಇಂದಿಗೂ ಮಾಯಾಸಂದ್ರದ ಆಂಜನೇಯ ತಮ್ಮ ಅಣ್ಣ ವೀರಭದ್ರ ಸ್ವಾಮಿಯ ಬರುತ್ತಾರೆ. ಎಂದು ನೋಡುತ್ತಿದ್ದಾರೆ ವೀರಭದ್ರಸ್ವಾಮಿಯು ತಮ್ಮನಾದ ಆಂಜನೇಯ ನೆಲೆಗೊಂಡಿರುವ ಕಡೆಗೆ ನೋಡುತ್ತಿದ್ದಾರೆ.

       ಈ ರೀತಿಯಾದ ಪುಣ್ಯಕರವಾದ ಇತಿಹಾಸವನ್ನು ಹೊಂದಿದ ಈ ಕ್ಷೇತ್ರದಲ್ಲಿ ಭೂತ ಪ್ರೇತಗಳ ಕಾಟ ಕೆಟ್ಟ ಸ್ವಪ್ನಗಳಿಗೆ ಇಲ್ಲಿ ಬಂದು ಮೂರು ಮಂಗಳವಾರ ಅಥವಾ ಮೂರು ಅಮಾವಾಸ್ಯೆ ಬಂದು ತೀರ್ಥ ಪ್ರೋಕ್ಷಿಸಿಕೊಂಡರೆ ಎಲ್ಲ ತೊಂದರೆಗಳು ಪರಿಹಾರವಾಗುತ್ತದೆ. ಮತ್ತು ಸಂತಾನಭಾಗ್ಯವಿಲ್ಲದವರು ಇಲ್ಲಿ ಬಂದು ಸೇವೆ ಸಲ್ಲಿಸಿ ಸಂತಾನ ಭಾಗ್ಯವನ್ನು ಪಡೆಯಬಹುದು.

       ಈ ಕ್ಷೇತ್ರದಲ್ಲಿ ಬೆಳಗಿನ ಜಾವ ಐದು ಗಂಟೆಗೆ ಪಂಚಾಭಿಷೇಕ 10:00 ಗಂಟೆಗೆ ರುದ್ರಾಭಿಷೇಕ 12 ಗಂಟೆಗೆ ಮಹಾಮಂಗಳಾರತಿ ನಡೆಯುತ್ತದೆ ಇದಾದನಂತರ ಅನ್ನದಾಸೋಹ ಕಾರ್ಯಕ್ರಮವು ಪ್ರತಿದಿನ ನಡೆಯುತ್ತದೆ.ಇಲ್ಲಿ ಸಮುದಾಯ ಭವನ ಇದೆ ನಿರ್ಗತಿಕರು ಇಲ್ಲಿ ಮದುವೆಗಳನ್ನು ಮಾಡುತ್ತಾರೆ.ಪ್ರತಿ ಅಮಾವಾಸ್ಯಯಂದು ಧರ್ಮ ಗುರುಗಳನ್ನು ಕರೆಯಿಸಿ ಪ್ರವಚನ ಕಾರ್ಯಕ್ರಮವನ್ನು ಏರ್ಪಡಿ.

       ಈ ವೀರಭದ್ರ ಸ್ವಾಮಿಯ ಪ್ರಧಾನ ಅರ್ಚಕರಾದ ದಿವಂಗತ ಮರಿಸಿದ್ದಪ್ಪ ಪುಟ್ಟಪ್ಪ ವೀರಭದ್ರಪ್ಪನವರ ಕುಟುಂಬದವರು ಸ್ವಾಮಿಯ ಸೇವೆಯನ್ನು ವಾರಕ್ಕೆ 9ರಂತೆ ಒಬ್ಬರಂತೆ ಅರ್ಚಕರ ವೃತ್ತಿಯನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ವಂಶಪರಂಪರೆಯಾಗಿ ಮಾಡಿಕೊಂಡು ಹೋಗಿರುತ್ತಾರೆ. ಮತ್ತು 2002ರಿಂದ ವೀರಭದ್ರ ಸ್ವಾಮಿ ಟ್ರಸ್ಟ್ ಸ್ಥಾಪನೆಯಾಗಿದ್ದು ಅಂದಿನಿಂದ ನಿತ್ಯ ದಾಸೋಹ ನಿತ್ಯ ರುದ್ರಾಭಿಷೇಕ ನಡೆಯುತ್ತದೆ.

       ಹಳೆ ದೇವಸ್ಥಾನವನ್ನು ಕೆಡವಿ ಹೊಸದಾಗಿ ಪುನರ್ ನಿರ್ಮಾಣ ಮಾಡಿ ಭಕ್ತಾದಿತಗಳ ಸಹಕಾರದಿಂದ ಎಲ್ಲಾ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನಡೆದುಕೊಂಡು ಬಂದಿರುತ್ತದೆ.

      ದೇವಸ್ಥಾನದಲ್ಲಿ ಯಾವುದೇ ಅಭಿವೃದ್ಧಿ ಇಲ್ಲದ ಕಾಲದಲ್ಲಿ ಪ್ರಥಮ ಅರ್ಚಕರಾದ ಮರಿ ಸಿದ್ದಪ್ಪನವರು 1965 ರಥೋತ್ಸವ ಪ್ರಾರಂಭ ಮಾಡಿದ್ದು ಈಗ ಭಕ್ತಾದಿಗಳಿಂದ ಸಹಕಾರದಿಂದ ದೇವಸ್ಥಾನ ಅಭಿವೃದ್ಧಿಯಾಗಿ ಯಾಗುತ್ತಿದೆ.

      ಅರ್ಚಕರ ಜೊತೆಯಲ್ಲಿ ದಿವಂಗತ ಹೂವಿನ ತೋಟದ ಮಲ್ಲಪ್ಪನವರ ಮಕ್ಕಳಾದರೇವಣ್ಣ, ಮರಿಯಪ್ಪ ಈಗಲೂ ಸಹ ಇವರಿಗೆ ಹೂವನ್ನು ತಂದು ಕೊಡುತ್ತಾರೆ ಮತ್ತು ದೇವಸ್ಥಾನದ ಮುಂಭಾಗದಲ್ಲಿ ಸ್ವಚ್ಛತೆ ಮಾಡುತ್ತಾರೆ.