ಮನೆ ಸುದ್ದಿ ಜಾಲ ಸಚಿವ ವಿ.ಸೋಮಣ್ಣರಿಂದ ಸಂಸದರ ಭೇಟಿ: ಜಿಲ್ಲೆಯ ಅಭಿವೃದ್ಧಿ ಕುರಿತು ಸುದೀರ್ಘ ಚರ್ಚೆ

ಸಚಿವ ವಿ.ಸೋಮಣ್ಣರಿಂದ ಸಂಸದರ ಭೇಟಿ: ಜಿಲ್ಲೆಯ ಅಭಿವೃದ್ಧಿ ಕುರಿತು ಸುದೀರ್ಘ ಚರ್ಚೆ

0

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅಧಿಕೃತ ಜಿಲ್ಲಾ ಪ್ರವಾಸದ ಬಳಿಕ ಮೈಸೂರಿನಲ್ಲಿರುವ ಚಾಮರಾಜನಗರ ಕ್ಷೇತ್ರದ ಸಂಸದರು ಹಾಗೂ ಕೇಂದ್ರದ ಮಾಜಿ ಸಚಿವ ಹಾಲಿ ಸಂಸದ ವಿ. ಶ್ರೀನಿವಾಸಪ್ರಸಾದ್ ರವರನ್ನು ಭೇಟಿಯಾಗಿ ಜಿಲ್ಲೆಯ ಅಭಿವೃದ್ದಿಯ ಬಗ್ಗೆ ಚರ್ಚೆ ಮಾಡಿದರು.
ಮೈಸೂರಿನ ಭೀಮಾಸದನಕ್ಕೆ ಭೇಟಿ ನೀಡಿದ ವಿ. ಸೋಮಣ್ಣ ಅವರು ಶ್ರೀನಿವಾಸಪ್ರಸಾದ್ ಅವರಿಗೆ ಶಾಲು ಹೊದಿಸಿ, ಪುಷ್ಪಗುಚ್ಚ ನೀಡಿ ಅಭಿನಂದಿಸಿದರು. ಸಂಸದರ ಆರೋಗ್ಯ ವಿಚಾರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಕ್ಷೇತ್ರದ ಸಂಸದರಾದ ವಿ. ಶ್ರೀನಿವಾಸಪ್ರಸಾದ್ ಅವರನ್ನು ಭೇಟಿ ನೀಡಿ ಜಿಲ್ಲೆಯ ಅಭಿವೃದ್ದಿ ಕುರಿತು ಒಂದು ಗಂಟೆಗೂ ಹೆಚ್ಚು ಕಾಲ ಸಂಸದರೊAದಿಗೆ ಚರ್ಚೆ ಮಾಡಿದರು. ಜಿಲ್ಲೆಯಲ್ಲಿ ಸದ್ಯಕ್ಕೆ ನಡೆಯಬೇಕಾಗಿರುವ ಕಾರ್ಯಕ್ರಮಗಳು ಕೇಂದ್ರ ಹಾಗು ರಾಜ್ಯ ಸರ್ಕಾರ ಅನುದಾನದ ಸದ್ಬಳಕೆ ಬಗ್ಗೆ ಸಂಸದರಾದ ವಿ. ಶ್ರೀನಿವಾಸಪ್ರಸಾದ್ ಅವರಿಗೆ ವಿವರಿಸುವ ಮೂಲಕ ಜಿಲ್ಲೆಯ ಅಭಿವೃದ್ದಿಗೆ ಸಹಕಾರ ನೀಡಬೇಕೆಂದು ಸೋಮಣ್ಣ ಕೋರಿದರು.
ಈ ಸಂದರ್ಭದಲ್ಲಿ ಶಾಸಕ. ಹರ್ಷವರ್ಧನ್, ಮಾಜಿ ಶಾಸಕ ಜಿ.ಎನ್. ನಂಜುAಡಸ್ವಾಮಿ, ಮುಖಂಡರಾದ ಸಿ. ಬಸವೇಗೌಡ, ಕೋಡಿಮೋಳೆ ರಾಜಶೇಖರ್, ಕೂಡ್ಲುರು ಹನುಮಂತಶೆಟ್ಟಿ, ಶಿವಕುಮಾರ್, ಮಾಂಬಳ್ಳಿ ನಂಜುAಡಸ್ವಾಮಿ, ಶಿವುಪುರ ಸುರೇಶ್, ಕೆ. ವೀರಭದ್ರಸ್ವಾಮಿ, ಉಮ್ಮತ್ತೂರು ನಾಗೇಶ್, ನಟರಾಜು, ಮಾಲಂಗಿ ಮೂರ್ತಿ ಮೊದಲಾದವರು ಇದ್ದರು.

Advertisement
Google search engine
ಹಿಂದಿನ ಲೇಖನಹರವೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಿರಂಜನ್‌ಕುಮಾರ್ ಚಾಲನೆ
ಮುಂದಿನ ಲೇಖನಅಸ್ವಸ್ಥಗೊಂಡಿದ್ದ ಕಾಡಾನೆ ಸಾವು