ಮನೆ ಆರೋಗ್ಯ ಮೈಗ್ರೇನ್ : ಭಾಗ ಮೂರು

ಮೈಗ್ರೇನ್ : ಭಾಗ ಮೂರು

0

 ಮೈಗ್ರೇನ್ ನಿಂದ ಬಾಧೆ ಪಡುವವರಿಗೆ ಸೂಚನೆಗಳು :-

Join Our Whatsapp Group

    1.ಮೈ ಗ್ರೇನ್ ಯಾವಾಗ ಬರುತ್ತದೆ ಎಂಬ ವಿಷಯದಲ್ಲಿ ಒಂದು ಡೈರಿಯನ್ನಿಡಬೇಕು. ಈ ಡೈರಿಯನ್ನು ಸ್ವಲ್ಪ ದಿನಗಳವರೆಗೆ ಮಾತ್ರವಲ್ಲದೆ, ಕೆಲವು ತಿಂಗಳುಗಳವರೆಗೆ ಇಡಬೇಕು. ಮೈಗ್ರೇನ್ ನಿದ್ರೆಯಿಂದೆದ್ದ ಕೂಡಲೇ ಬರುವುದೇ, ಮಲಗಿಕೊಳ್ಳುಲು ಹೋಗುವಾಗ ಬರುವುದೇ, ಇಲ್ಲವೇ ಊಟದ ವೇಳೆಯಲ್ಲಿ ;ಅಥವಾ ನೀವು ಯಾವ ಆಹಾರ ತೆಗೆದುಕೊಳ್ಳುತ್ತಿರುವಿರಿ, ಯಾವ ಪಾನೀಯ ತೆಗೆದುಕೊಳ್ಳುತ್ತಿರುವಿರಿ, ಆ ಸಮಯದಲ್ಲಿ  ವಾತಾವರಣ ಹೇಗಿದೆ ಆಯಾ ದಿನಗಳಲ್ಲಿ ನೀವು ಶಾರೀರಿಕವಾಗಿಯಾಗಲಿ ಮಾನಸಿಕವಾಗಿಯಾಗಲಿ ಅಧಿಕ ಶ್ರಮ ಅಥವಾ ಒತ್ತಡಕ್ಕೆ ಒಳಗಾಗುತ್ತಿರುವಿರಾ, ಇಂತಹ ವಿಷಯವನ್ನು ಡೈರಿಯಲ್ಲಿ ಬರೆದುಕೊಳ್ಳಬೇಕು.ಅವುಗಳಿಂದ ನಿಮಗೆ ಮೈಗ್ರೇನನ್ನು ಪ್ರೇರೇಪಿಸುತ್ತಿರುವ ಅಂಶಗಳೇನೆಃಬುದು ತಿಳಿದು ಬರುತ್ತದೆ.

2. ಚಾಕಲೇಟ್ ಗಳು, ಜೇನುತುಪ್ಪ,ಹುಳಿಹಣ್ಣುಗಳು, ಆಲ್ಕೋಹಾಲ್ ಗಳಂತಹವುಗಳ  ಸೇವನೆಯಿಂದ ಮೈಗ್ರೇನ್ ಬರುತ್ತಿದೆಯೆಂದು ತಿಳಿದು ಬಂದರೆ.ಅವುಗಳನ್ನು ತ್ಯಜಿಸಬೇಕು.

3. ಬೆಳಗಿನ ಊಟ ಮಾಡದೇ ಹೋದರೆ ರಕ್ತದಲ್ಲಿ ಸಕ್ಕರೆಯ ಕೊರತೆಯಿಂದಾಗಿ ಸಾಯಂಕಾಲದೊಳಗೆ ಮೈಗ್ರೇನ್ ಬರಬಹುವುದು. ಆದ್ದರಿಂದ ಊಟದ ಅಭ್ಯಾಸಗಳು ಕ್ರಮಬದವಾಗಿ ಇರುವಂತೆ ನೋಡಿಕೊಳ್ಳಬೇಕು.

4. ಗರ್ಭನಿರೋಧಕ ಮಾತ್ರೆಗಳನ್ನು ಮೈಗ್ರೇನ್ ಗೆ ಕಾರಣವಾಗಬಹುದು ಅಂತಹ ಮಾತ್ರೆಗಳನ್ನು ಬಳಸುತ್ತಿದ್ದು,ಮೈಗ್ರೇನ್ ಬರುತ್ತಿದ್ದಲ್ಲಿ ಡಾಕ್ಟರನ್ನು ಸಂಪರ್ಕಿಸಬಹುದು.

5. ನಿಮಗೆ ಮೈಗ್ರೇನ್ ಇದ್ದು ಡಾಕ್ಟರು ಒಂದು ಔಷಧವನ್ನು ಸೂಚಿಸಿದಾಗ ಆ  ಔಷಧಿಯ ಜೊತೆಗಿರುವ ಮಾಹಿತಿಯನ್ನು  ಪೂರ್ತಿಯಾಗಿ  ಬರೆದು ಕೊಟ್ಟಿರುವ ಔಷಧಿಯ  ಕಾರಣವಾಗಿ ಮಂಪರು ಬರುವುದೇ ಎಂದು ಡಾಕ್ಟರನ್ನು ಕೇಳಿ ಹಾಗಾಗುವುದೆಂದು ಹೇಳಿದರೆ ವಾಹನಗಳನ್ನು ನಡೆಸಲು ಹೋಗಬೇಡಿ. ಮೈಗ್ರೇನ್ ಅಟ್ಯಾಕ್ ಸಮಯದಲ್ಲಿ ವಾಹನ ನಡೆಸಬಾರದು.ಏಕೆಂದರೆ ಆ ವೇಳೆಯಲ್ಲಿ ನಿಮ್ಮ ಮನಸ್ಸು Disturb ಆಗುವ ಸಂಭವವಿದೆ

6. ಮೈಗ್ರೇನ್ ನನಗೆ ಆಹಿತಕರವಾಗಿರುವುದೇ ಹೊರತು, ಪ್ರಮಾದಕರ ಮಾತ್ರವಲ್ಲ. ನಿಮ್ಮ ತಲೆ ನೋವಿಗೆ ಬೇರಾವುದೇ ಸೀರಿಯಸ್ ಕಾರಣವಿರಬಹುದೆಂಬ ಚಿಂತೆ ನಿಮಗಿದ್ದರೆ ಆ ವಿಷಯವನ್ನು ವೈದ್ಯರಿಗೆ ತಿಳಿಸಬೇಕು. ಹಾಗೆ ಹೇಳುವುದರಿಂದ ಅವರು ನಿಮ್ ನ್ನೆನೂ ಹೀನಾಯವಾಗಿ ಕಾಣುವುದಿಲ್ಲ.ನಿಮ್ಮ ಸಂದೇಹಗಳನ್ನು ನಿವಾರಿಸಿ ನಿಮ್ಮ ಮನಸ್ಸಿಗೆ ಪ್ರಶಾಂತತೆಯನ್ನು ದೊರಕಿಸುತ್ತಾರೆ.

7. ನಿಯಮಿತವಾಗಿ ವ್ಯಾಯಾಮ ಮಾಡುವುದು ಈಜಾಡುವುದು, ಯೋಗ ಮುಂತಾದವು ನಿಮ್ಮ ಶರೀರವನ್ನು ರಿಲಾಕ್ಸ್ ಗೊಳಿಸಿ, ಮೈಗ್ರೇನ್ ಬರದಂತೆ ನೋಡಿಕೊಳ್ಳುತ್ತವೆ ಈ ವಿಷಯದಲ್ಲಿ ಧ್ಯಾನ ಕೂಡಾ ಬಹಳ ಸಹಾಯ ಮಾಡುತ್ತದೆ.

ಹಿಂದಿನ ಲೇಖನಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು: ಕುಸಿಯುವ ಭೀತಿ
ಮುಂದಿನ ಲೇಖನಮುಡಾ ಅಕ್ರಮ ಆರೋಪ: ಆರ್ ಅಶೋಕ್, ವಿಜೆಯೇಂದ್ರ ಅವರಿಂದ ಸಿದ್ದರಾಮಯ್ಯ ಪತ್ನಿಯ ತೇಜೋವಧೆ: ಎಂ ಲಕ್ಷ್ಮಣ್ ಆರೋಪ