ದೇಶದ ಐದನೇ ಹಾಗೂ ರಾಜ್ಯದ ಮೊದಲ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲಿಗೆ ನ.11 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
ವಂದೇ ಭಾರತ್ ಎಕ್ಸ್’ಪ್ರೆಸ್ ರೈಲು ಮೈಸೂರು ಹಾಗೂ ಚೆನ್ನೈ ನಡುವೆ ಸಂಚಾರ ಮಾಡಲಿದೆ. ಈ ರೈಲು 16 ಬೋಗಿಗಳನ್ನು ಒಳಗೊಂಡಿದ್ದು, ಸಂಚಾರ ದರ ಎಕಾನಮಿ ಕ್ಲಾಸ್’ಗೆ 921 ರೂ ಆಗಿರಲಿದೆ.
ಉಭಯ ನಗರಗಳ ನಡುವಿನ ಪ್ರಯಾಣ 6 ಗಂಟೆ 40 ನಿಮಿಷ ಬೇಕಾಗುತ್ತದೆ. ಮೈಸೂರಿನಿಂದ ಬೆಂಗಳೂರಿನ ನಡುವಿನ ಪ್ರಯಾಣ 2 ಗಂಟೆಯಾಗಲಿದೆ. ವಂದೇ ಭಾರತ್ ರೈಲಿನ ವೇಗ 170 ಕಿ.ಮೀ ಇದೆಯಾದರೂ ಉಭಯ ನಗರಗಳ ಮಧ್ಯೆ 75 ಕಿ.ಮೀ ವೇಗದಲ್ಲಿ ರೈಲು ಸಂಚರಿಸಲಿದೆ.
ಟಿಕೆಟ್ ದರದ ಮಾಹಿತಿ:
ಮೈಸೂರಿನಿಂದ ಚೆನ್ನೈಗೆ ಎಕಾನಮಿ ಕ್ಲಾಸ್ ದರ 921 ರೂ.ಇರಲಿದೆ. ಎಕ್ಸಿಕ್ಯೂಟಿವ್ ದರ 1880 ರೂ ಇರಲಿದೆ. ಇನ್ನೂ ಮೈಸೂರಿನಿಂದ ಬೆಂಗಳೂರಿಗೆ ಎಕಾನಮಿ ಕ್ಲಾಸ್ ದರ 368 ರೂ ಹಾಗೂ ಎಕ್ಸಿಕ್ಯೂಟಿವ್ 768 ರೂ ನಿಗದಿಪಡಿಸಲಾಗಿದೆ. ಶತಾಬ್ದಿಗೆ ಹೋಲಿಸಿದರೆ ಟಿಕೆಟ್ ದರ ಶೇ.39 ರಷ್ಟು ಹೆಚ್ಚು ಇರಲಿದೆ.
ರೈಲು ಸಂಚಾರದ ಸಮಯ
20607 ನಂಬರ್’ನ ವಂದೇ ಭಾರತ್ ಎಕ್ಸ್’ಪ್ರೆಸ್ ವಾರದಲ್ಲಿ ಬುಧವಾರ ಹೊರತುಪಡಿಸಿ ಉಳಿದ 6 ದಿನ ಸಂಚಾರ ಮಾಡಲಿದೆ. ಪ್ರತಿದಿನ ಚೆನ್ನೈ ಸೆಂಟ್ರಲ್ ನಿಂದ ಬೆಳಿಗ್ಗೆ 5.50ಕ್ಕೆ ಹೊರಟು ಬೆಂಗಳೂರು ಸಿಟಿ ಜಂಕ್ಷನ್’ಗೆ 10.25ಕ್ಕೆ ಸೇರಲಿದೆ. 5 ನಿಮಿಷಗಳ ಕಾಲ ನಿಲ್ದಾಣದಲ್ಲಿ ನಿಲ್ಲಲಿದ್ದು, 10.30ಕ್ಕೆ ಹೊರಟು 12.30ಕ್ಕೆ ಮೈಸೂರು ತಲುಪಲಿದೆ. ಬಳಿಕ ವಾಪಾಸ್ ಮೈಸೂರಿನಿಂದ 1.05ಕ್ಕೆ ಹೊರಡಲಿದೆ. ಬೆಂಗಳೂರಿಗೆ ಮಧ್ಯಾಹ್ನ 2.55ಕ್ಕೆ ಸೇರಲಿದೆ. ಬೆಂಗಳೂರಿನಿಂದ 3 ಗಂಟೆಗೆ ಹೊರಟು ಚೆನ್ನೈಗೆ 7.35ಕ್ಕೆ ತಲುಪಲಿದೆ. 20607 ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ಜಂಕ್ಷನ್ ನಡುವೆ ವಂದೇ ಭಾರತ್ ಎಕ್ಸ್’ಪ್ರೆಸ್ ಬೆಂಗಳೂರು ಸಿಟಿ ಜಂಕ್ಷನ್ ನಲ್ಲಿ ಕೇವಲ 1 ಕಡೆ ನಿಲುಗಡೆಯನ್ನು ಹೊಂದಿರುತ್ತದೆ.