ಮನೆ ಕ್ರೀಡೆ ಏಷ್ಯಾ ಲಯನ್ಸ್ ನ ಬೇಟೆಯಾಡಿದ ಇಂಡಿಯಾ

ಏಷ್ಯಾ ಲಯನ್ಸ್ ನ ಬೇಟೆಯಾಡಿದ ಇಂಡಿಯಾ

0

ಬೆಂಗಳೂರು: ಅಮಾನ್‌ ಆತಿಥ್ಯದಲ್ಲಿ ನಡೆ ಲೆಜೆಂಡ್ಸ್‌ ಲೀಗ್‌ ಕ್ರಿಕೆಟ್‌ ಟೂರ್ನಿಯ ಉದ್ಭಾಟಗನಾ ಪಂದ್ಯದಲ್ಲಿ ಇಂಡಿಯಾ ಮಹಾರಾಜಾಸ್‌ ತಂಡ ಭರ್ಜರಿ ಪ್ರದರ್ಶನ ನೀಡಿದ್ದು, ಏಷ್ಯಾ ಲಯನ್ಸ್ ಎದುರು 6 ವಿಕೆಟ್‌ಗಳ ಜಯ ದಾಖಲಿಸಿದೆ.

ತಿಲಕರತ್ನೆ ದಿಲ್ಷಾನ್‌, ಮಿಸ್ಬಾ ಉಲ್‌ ಹಕ್‌, ಶೊಯೇಬ್‌ ಅಖ್ತರ್‌ ಹಾಗೂ ಮುತ್ತಯ್ಯ ಮುರಳೀಧರನ್‌ ಅವರಂತಹ ದಿಗ್ಗಜರ ದಂಡನ್ನೇ ಹೊಂದಿದ್ದ ಏಷ್ಯಾ ಲಯನ್ಸ್‌ ತಂಡ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವ ಮೂಲಕ ದೊಡ್ಡ ಮೊತ್ತವನ್ನೇ ಬಾರಿಸಿತು.

ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಕಮ್ರಾನ್‌ ಅಕ್ಮಲ್‌ (17 ಎಸೆತಗಳಲ್ಲಿ 25 ರನ್) ಉತ್ತಮ ಆರಂಭ ಕೊಟ್ಟರೆ, ಉಪುಲ್‌ ತರಂಗ 46 ಎಸೆತಗಳಲ್ಲಿ 7 ಫೋರ್‌ ಮತ್ತು 2 ಸಿಕ್ಸರ್‌ಗಳನ್ನು ಒಳಗೊಂಡ 66 ರನ್‌ ಸಿಡಿಸಿ ತಂಡದ ದೊಡ್ಡ ಮೊತ್ತಕ್ಕೆ ಅಡಿಪಾಯ ಹಾಕಿದರು. ಇನಿಂಗ್ಸ್‌ನ ಅಂತ್ಯದ ಓವರ್‌ಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿದ ಕಪ್ತಾನ ಮಿಸ್ಬಾ ಉಲ್‌ ಹಲ್‌ 30 ಎಸೆತಗಳಲ್ಲಿ 1 ಫೋರ್‌ ಮತ್ತು 4 ಭರ್ಜರಿಯ ಸಿಕ್ಸರ್‌ಗಳ ಮೂಲಕ 44 ರನ್‌ ಬಾರಿಸಿ ಔಟ್‌ ಆದರು.


ಪರಿಣಾಮ ಏಷ್ಯಾ ಲಯನ್ಸ್‌ ತನ್ನ 20 ಓವರ್‌ಗಳಲ್ಲಿ 175/5 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ಭಾರತದ ಪರ 4 ಓವರ್‌ಗಳಲ್ಲಿ 45 ರನ್‌ ಹೊಡೆಸಿಕೊಂಡರೂ ಮಬ್‌ಪ್ರೀತ್‌ ಗೂನಿ 3 ವಿಕೆಟ್‌ ಕಿತ್ತರು. ಇರ್ಫಾನ್‌ ಪಠಾಣ್‌ ಕೂಡ ತಮ್ಮ ಸ್ವಿಂಗ್‌ ಬೌಲಿಂಗ್‌ ಮೂಲಕ 22ಕ್ಕೆ 2 ವಿಕೆಟ್‌ ಉರುಳಿಸಿ ಗಮನ ಸೆಳೆದರು.



ಯೂಸುಫ್ಪಠಾಣ್ ಅಬ್ಬರ
ಗುರಿ ಬೆನ್ನತ್ತಿದ ಇಂಡಿಯಾ ಮಹಾರಾಜಾಸ್‌ ತಂಡ ಆರಂಭದಲ್ಲೇ ಸ್ಟುವರ್ಟ್‌ ಬಿನ್ನಿ (10), ನಮನ್‌ ಓಜಾ (20) ಮತ್ತು ಎಸ್‌ ಬದ್ರಿನಾಥ್‌ (0) ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಆಲ್‌ರೌಂಡರ್‌ ಯೂಸುಫ್‌ ಪಠಾಣ್‌ ಎದುರಾಳಿ ಬೌಲರ್‌ಗಳನ್ನು ಬಡಿದು ಬೆಂಡೆತ್ತಿದರು. 40 ಎಸೆತಗಳಲ್ಲಿ 9 ಫೋರ್‌ ಮತ್ತು 5 ಸಿಕ್ಸರ್‌ಗಳೊಂದಿಗೆ 80 ರನ್‌ ಚೆಚ್ಚಿದ ಯೂಸುಫ್‌ ಇಂಡಿಯಾ ತಂಡಕ್ಕೆ ಜಯ ಖಾತ್ರಿ ಪಡಿಸಿದರು.


ಯೂಸುಫ್‌ಗೆ ಉತ್ತಮ ಸಾಥ್‌ ಕೊಟ್ಟು ಬ್ಯಾಟ್‌ ಮಾಡಿದ ಕ್ಯಾಪ್ಟನ್‌ ಮೊಹಮ್ಮದ್‌ ಕೈಫ್‌ 37 ಎಸೆತಗಳಲ್ಲಿ ಅಜೇಯ 42 ರನ್‌ಗಳನ್ನು ಗಳಿಸಿ ತಂಡವನ್ನು ಜಯದ ದಡ ಮುಟ್ಟಿಸುವ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಇನಿಂಗ್ಸ್‌ನ ಕೊನೆಯ ಓವರ್‌ಗಳಲ್ಲಿ ಬ್ಯಾಟ್‌ ಮೂಲಕವೂ ಕೊಡುಗೆ ಕೊಟ್ಟ ಇರ್ಫಾನ್‌ ಪಠಾಣ್‌ 10 ಎಸೆತಗಳಲ್ಲಿ ಅಜೇಯ 21 ರನ್‌ಗಳನ್ನು ಗಳಿಸಿದರು.

ಯುವರಾಜ್‌ ಸಿಂಗ್ ಮತ್ತು ವೀರೇಂದ್ರ ಸೆಹ್ವಾಗ್‌ ಅವರಂತಹ ಸ್ಟಾರ್‌ಗಳ ಅನುಪಸ್ಥಿತಿಯಲ್ಲಿ ಆಡಿದರೂ ಇಂಡಿಯಾ ಮಹಾರಾಜಾಸ್‌ ತಂಡ 6 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಏಷ್ಯಾ ಲಯನ್ಸ್‌ ಪರ ಶೊಯೇಬ್‌ ಅಖ್ತರ್‌ ಮತ್ತು ಉಮರ್‌ ಗುಲ್‌ ತಲಾ ವಿಕೆಟ್‌ ಕಿತ್ತು ಗಮನ ಸೆಳೆದರು.


ಸಂಕ್ಷಿಪ್ತ ಸ್ಕೋರ್
ಏಷ್ಯಾ ಲಯನ್ಸ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 175 ರನ್‌ (ಕಮ್ರಾನ್‌ ಅಕ್ಮಲ್‌ 25, ಉಪುಲ್ ತರಂಗ 66, ಮಿಸ್ಬಾ ಉಲ್‌ ಹಕ್‌ 44; ಮನ್‌ಪ್ರೀತ್‌ ಗೂನಿ 45ಕ್ಕೆ 3, ಇರ್ಫಾನ್‌ ಪಠಾಣ್ 22ಕ್ಕೆ 2, ಮುನಾಫ್‌ ಪಟೇಲ್ 25ಕ್ಕೆ 1, ಸ್ಟುವರ್ಟ್‌ ಬಿನ್ನಿ 41ಕ್ಕೆ 1).
ಇಂಡಿಯಾ ಮಹಾರಾಜಾಸ್‌: 19.1 ಓವರ್‌ಗಳಲ್ಲಿ 4 ವಿಕೆಟ್‌ಗೆ 179 ರನ್‌ (ನಮನ್‌ ಓಜಾ 20, ಮೊಹಮ್ಮದ್‌ ಕೈಫ್‌ ಅಜೇಯ 42, ಯೂಸುಫ್‌ ಪಠಾಣ್ 80, ಇರ್ಫಾನ್‌ ಪಠಾಣ್ ಅಜೇಯ 21; ಶೊಯೇಬ್‌ ಅಖ್ತರ್‌ 21ಕ್ಕೆ 1, ಉಮರ್‌ ಗುಲ್ 30ಕ್ಕೆ 1).

ಹಿಂದಿನ ಲೇಖನಹನುಮಂತನ ವಿಗ್ರಹವನ್ನು ಯಾವ ದಿಕ್ಕಿನಲ್ಲಿಟ್ಟರೆ ಸೂಕ್ತ? ಇಲ್ಲಿದೆ ಮಾಹಿತಿ
ಮುಂದಿನ ಲೇಖನಹಣದ ಸಮಸ್ಯೆ: ಈ ಗಿಡ ಮನೆಯಲ್ಲಿ ನೆಟ್ಟರೆ ಪರಿಹಾರ