ಮನೆ ಅಪರಾಧ ಎಂ.ಪಿ.  ರೇಣುಕಾಚಾರ್ಯಗೆ ಕೊಲೆ ಬೆದರಿಕೆ: ಸದಾಶಿವನಗರ ಪೊಲೀಸ್ ಠಾಣೆಗೆ ದೂರು

ಎಂ.ಪಿ.  ರೇಣುಕಾಚಾರ್ಯಗೆ ಕೊಲೆ ಬೆದರಿಕೆ: ಸದಾಶಿವನಗರ ಪೊಲೀಸ್ ಠಾಣೆಗೆ ದೂರು

0

ಬೆಂಗಳೂರು: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಅನಾಮಧೇಯ ವ್ಯಕ್ತಿ ಯೊಬ್ಬ ಕೊಲೆ ಬೆದರಿಕೆ ಹಾಕಿದ್ದಾನೆ.

ಬುಧವಾರ ಬೆಳಗ್ಗೆಯಿಂದ ಸಂಜೆವರೆಗೆ ಸುಮಾರು 12 ಕ್ಕೂ ಹೆಚ್ಚು ಬಾರಿ ರೇಣುಕಾಚಾರ್ಯ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ಈ ಅನಾಮಧೇಯ ವ್ಯಕ್ತಿ ಮೂರು ದಿನದೊಳಗೆ ಕೊಚ್ಚಿ ಕೊಲೆ ಮಾಡುವ ಬೆದರಿಕೆಯೊಡಿದ್ದಾನೆ.

ಈ ಕುರಿತು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿರುವ ರೇಣುಕಾಚಾರ್ಯ ಅವರು,  ಮೊಬೈಲ್ ಗೆ ಕರೆ ಮಾಡಿದ ವ್ಯಕ್ತಿ, ನಿನ್ನನ್ನು ಕೊಲ್ಲುತ್ತೇನೆ, ಸುಮ್ಮನೆ ಬಿಡಲ್ಲ ಎಂದು ಬೆದರಿಕೆ ಹಾಕಿದ್ದುಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

ಮುಸ್ಲಿಂ ಸಮುದಾಯ ಹಿಜಾಬ್ , ಹಲಾಲ್ ವಿರುದ್ದ ಮಾತನಾಡುತ್ತಿರುವ ನಿಮಗೆ ತಕ್ಕ ಶಾಸ್ತಿ ಮಾಡಲಾಗುವುದು.ಹಿಂದೂಗಳಿಗೆ ಅಂಗಡಿ ನಡೆಸಲು ಆರ್ಥಿಕ ನೆರವು ನೀಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಹಾಗೂ ಸಿ.ಟಿ.ರವಿ ಅವರ ಬಗ್ಗೆಯೂ ಲಘುವಾಗಿ ಮಾತನಾಡಿದ್ದಾನೆ. ನನ್ನ ಕುಟುಂಬ ವರ್ಗದವರಿಗೆ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

ಬೆಳಗ್ಗೆ ಶಾಸಕರಿಗೆ ಅಪರಿಚಿತನಿಂದ ಮೂರ್ನಾಲ್ಕು ಬಾರಿ ಕರೆ ಬಂದಿದ್ದು, ಅಧಿವೇಶನದಲ್ಲಿದ್ದಿದ್ದರಿದ ಕರೆ ಸ್ವೀಕರಿಸಿರಲಿಲ್ಲ.ಸಂಜೆ 4 ಗಂಟೆ ಸುಮಾರಿಗೆ ಮತ್ತೆ ಅದೇ ನಂಬರಿನಿಂದ ಬಂದ ಕರೆ ಸ್ವೀಕರಿಸಿದಾಗ, ಅವಾಚ್ಯ ಪದಗಳಿಂದ ನಿಂದಿಸುತ್ತಲೇ ಮಾತನ್ನಾರಂಭಿಸಿರುವ ಅನಾಮಧೇಯ ವ್ಯಕ್ತಿ, ‘ಹಿಜಾಬ್, ಹಲಾಲ್ ಬಗ್ಗೆ ಮಾತನಾಡುತ್ತೀರಾ? ಇಷ್ಟು ದಿನ ಇಲ್ಲದಿರುವುದು ಈಗ್ಯಾಕೆ? ಇನ್ನೊಮ್ಮೆ ಮಾತನಾಡಿದ್ರೆ ಕೊಚ್ಚಿ ಕೊಲೆಗೈಯ್ತೀನಿ’ ಅಂತಾ ಬೆದರಿಕೆ ಹಾಕಿದ್ದನೆ ಎಂದು ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಎಂ.ಪಿ. ರೇಣಕಾಚಾರ್ಯ, ನನಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದೆ. ಹೀಗಾಗಿ ತನಿಖೆ ನಡೆಸುವಂತೆ ಸದಾಶಿವನಗರ ಪೊಲೀಸರಿಗೆ ದೂರು ನೀಡಿದ್ದೇನೆ. ಅಪರಿಚಿತನ ಕರೆಗೆ ಸಂಬಂಧಿಸಿದ ವಿವರಗಳನ್ನು ಪೊಲೀಸರಿಗೆ ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಇಂದು ಬೆಳಗ್ಗೆಯಿಂದ ಸುಮಾರು ಹನ್ನೊಂದು ಬಾರಿ ಒಂದು ನಂಬರ್ ನಿಂದ ಕರೆ ಬಂದಿದೆ. ಅಪರಿಚಿತ ನಂಬರ್ ಎಂದು  ನಾನು ರಿಸಿವ್ ಮಾಡಿರಲಿಲ್ಲ. ಆದರೆ ಹೊನ್ನಾಳಿಗೆ ಹೋಗುತ್ತಿದ್ದ , ಈ ವೇಳೆ ಮತ್ತೆ ಕರೆ ಬಂತು.ರಿಸಿವ್ ಮಾಡಿದ ವೇಳೆ ಆ ಕಡೆಯಿಂದ ಮಾತಾಡಿದ ವ್ಯಕ್ತಿ ಏಕವಚನದಲ್ಲಿ ನಿಂದಿಸಿದ್ದಾನೆ ಎಂದು ಹೇಳಿದ್ದಾರೆ. ಅವಾಚ್ಯ ಪದಗಳಿಂದ ಬೈದು ನಾಲ್ಕೈದು ದಿನಗಳಲ್ಲಿ ಕೊಲೆ ಮಾಡೋದಾಗಿ ಬೆದರಿಸಿದ್ದಾನೆ. ಹಲಾಲ್ ಕಟ್,ಹಿಬಾಬ್, ಮುಸ್ಲಿಂ ವಿರೋಧಿ ಹೇಳಿಕೆ ನೀಡ್ತಿದ್ದೀಯ ಎಂದು ಬೆದರಿಕೆ ಹಾಕಿದ್ದಾನೆ..

ನನಗೆ ಅಲ್ಲ, ಸಿಟಿ ರವಿ, ಯತ್ನಾಳ್ ಮತ್ತು ಬಿಜೆಪಿ ಪಕ್ಷವನ್ನು ನಿಂದಿಸಿದ್ದಾರೆ‌.ತುಂಬಾ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ.ನೀನು ಯಾರು ಎಂದು ಕೇಳದೇ .ನನ್ನ ಹೆಸರು ಬೇಡ.ಇನ್ನು ಮೂರು ದಿನದಲ್ಲಿ ನಿನ್ನ ಕೊಚ್ಚಿ ಹಾಕ್ತೀನಿ ಎಂದು ಬೆದರಿಕೆ ಹಾಕಿದ್ದಾನೆ.ಅಪರಿಚಿತ ವ್ಯಕ್ತಿಯ ಕರೆಯನ್ನು ರೆಕಾರ್ಡ್ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಮದರಸಾಗಳಲ್ಲಿ ದೇಶ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ. ಕರ್ನಾಟಕದಲ್ಲಿ ಎಲ್ಲ ಮದರಸಾಗಳನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದ್ದರು. ಮಕ್ಕಳಿಗೆ ಬೇಕಾದ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ನೀಡಲಾಗುತ್ತಿದೆ. ಮತ್ತೆ ಅವರಿಗೆ ಯಾಕೆ ಮದರಸಾ ಶಾಲೆಗಳು ಎಂದು ರೇಣುಕಾಚಾರ್ಯ ಪ್ರಶ್ನಿಸಿದ್ದರು.

ಮದರಸಾಗಳಲ್ಲಿ ದೇಶದ ಬಗ್ಗೆ ಬೋಧನೆ ಮಾಡಲ್ಲ. ದೇಶಕ್ಕಾಗಿ ತ್ಯಾಗ ಮಾಡಿದ ಮಹಾನ್ ತ್ಯಾಗಿಗಳ ಬಗ್ಗೆಯೂ ಹೇಳಲ್ಲ. ಕೇವಲ ಇಸ್ಲಾಮಿಕ್ ಧರ್ಮ ಬೋಧನೆ ಮಾಡಲಾಗುತ್ತಿದೆ. ಇದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀಳುತ್ತಿದೆ. ಹೀಗಾಗಿ ಮದರಸಾಗಳನ್ನು ಬ್ಯಾನ್ ಮಾಡಬೇಕು. ಅದನ್ನು ಮಾಡಿ ತೀರುತ್ತೇವೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದ ಹಣವನ್ನು ಮದರಸಾಗಳಿಗೆ ಸುರಿದಿದ್ದಾರೆ. ಹೀಗಾಗಿ ಹಿಂದೂ ದೇವಾಲಯಗಳಿಗೆ ಅನುದಾನ ಕೊಡಲು ಹಣವಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಇದೇ ವಿಚಾರವಾಗಿ ಬೆದರಿಕೆ ಹಾಕಲಾಗಿದೆ ಎಂದು ಶಂಕಿಸಲಾಗಿದೆ ಎನ್ನಲಾಗುತ್ತದೆ.

ಹಿಂದಿನ ಲೇಖನಅವಿವಾಹಿತ ಮಗಳು ತನ್ನ ಮದುವೆ ವೆಚ್ಚವನ್ನು ಪೋಷಕರಿಂದ ಪಡೆಯಬಹುದು: ಛತ್ತೀಸ್‌ಗಢ ಹೈಕೋರ್ಟ್
ಮುಂದಿನ ಲೇಖನತಿಪ್ಪಯ್ಯನ  ಕೆರೆ ನೀರು ಕಲುಷಿತಗೊಂಡು ಮೀನು, ಪಕ್ಷಿಗಳು ಸಾವು