ಮನೆ ರಾಜಕೀಯ ನನ್ನ ಪಾಲಿಸಿ ನನ್ನ ಕೈಯಲ್ಲಿ: ಎಂಬ ಬೆಳೆ ವಿಮೆ ಪಾಲಿಸಿ ವಿತರಣಾ ಅಭಿಯಾನ

ನನ್ನ ಪಾಲಿಸಿ ನನ್ನ ಕೈಯಲ್ಲಿ: ಎಂಬ ಬೆಳೆ ವಿಮೆ ಪಾಲಿಸಿ ವಿತರಣಾ ಅಭಿಯಾನ

0

ಬೆಂಗಳೂರು:ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ  ವ್ಯಾಪ್ತಿಯನ್ನು ಹೆಚ್ಚಿಸುವ ಜೊತೆಗೆ ಯೋಜನೆಯನಗನು  ರೈತರ ಮನೆ ಬಾಗಿಲಿಗೆ ತಲುಪಿಸಲು ನಾವು ” ನನ್ನ ಪಾಲಿಸಿ ನನ್ನ ಕೈಯಲ್ಲಿ ” ಎಂಬ ಬೆಳೆ ವಿಮೆ ಪಾಲಿಸಿ ವಿತರಣಾ ಅಭಿಯಾನ ಪ್ರಾರಂಭಿಸಲಾಗುವುದು ಎಂದು ಕೃಷಿ ಸಚಿವ ಬಿ‌.ಸಿ.ಪಾಟೀಲ್ ಹೇಳಿದ್ದಾರೆ.

ಬೆಂಗಳೂರಿನ ಜಿಕೆವಿಕೆಯ ಬಿ.ಹೆಚ್.ಎಸ್ ಕಾಲೇಜಿನ ಆಡಿಟೋರಿಯಂ‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಸಚಿವರು ಮಾತನಾಡಿದರು.

ಪ್ರಾಕೃತಿಕ ವಿಕೋಪಗಳಿಂದ ಬೆಳೆಗಳಿಗೆ ವಿಮಾ ಭದ್ರತಾ ಕವಚ ಒದಗಿಸುವುದು ನಮ್ಮ ಸಂಕಲ್ಪವಾಗಿದೆ.ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಉಂಟಾದಾಗ ರೈತರ ನೆರವಿಗೆ ಬರುವ ಯೋಜನೆ ಇದಾಗಿದೆ . ಹಿಂಗಾರು 2021-22ರ ಹಂಗಾಮಿನಲಿ , ನೋಂದಣಿ ಮಾಡಿದಂತಹ ರೈತರಿಗೆ ತಮ್ಮ ಪಾಲಿಸಿ ವಿವರವನ್ನು Inland Letter ನಮೂನೆಯಲ್ಲಿ ವಿತರಿಸುವ ಕಾರ್ಯಕ್ರಮ , ES ಈಗ ರಾಜ್ಯದ ಲಕ್ಷಾಂತರ ರೈತರು “ ನನ್ನ ಪಾಲಿಸಿ ನನ್ನ ಕೈಯಲಿ … ” ಹೇಳಿಕೊಳ್ಳಬಹುದು. 2021 ರ ಮುಂಗಾರು ಹಂಗಾಮಿನಲ್ಲಿ  ರೂ .113.49 ಕೋಟಿಗಳ ಬೆಳೆ ವಿಮಾ ಪರಿಹಾರ ಮೊತ್ತವು ಸ್ಥಳೀಯ ಪ್ರಕೃತಿ ವಿಕೋಪಗಳಡಿ ಇತ್ಯರ್ಥವಾಗಿದ್ದು, 2016-17 ಹಾಗೂ 2017-18ರ ಮುಂಗಾರು , ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ವಿಮಾ ಪರಿಹಾರ ಮೊತ್ತವು ರೈತರ ಬ್ಯಾಂಕ್ ಖಾತೆ ಹಾಗೂ ಆಧಾರ್ ಸಂಖ್ಯೆ ಲಭ್ಯವಿಲ್ಲದ ಕಾರಣ ತಿರಸ್ಕೃತಗೊಂಡ ರೂ . 100.24 ಕೋಟಿಗಳನ್ನು ESCROW ಖಾತೆಯ ಮೂಲಕ 1.27 ಲಕ್ಷ ಅರ್ಹ ರತ ಫಲಾನುಭವಿಗಳಿಗೆ ಇತ್ಯಾರ್ಥಪಡಿಸಲಾಗಿದೆ.

 ಕಳೆದ ಬಾರಿ ನಡೆದ ಸಭೆಯಲ್ಲಿ  ವಿಮಾ ಸಂಸ್ಥೆಯವರಿಗೆ ಕಟ್ಟುನಿಟ್ಟಿನ ಸೂಚನೆ  ನೀಡಿದ್ದರ ಫಲವಾಗಿ  ಒಂದೇ ತಿಂಗಳಿನಲ್ಲಿ , ರೂ .43,89 ಕೋಟಿ ಪರಿಹಾರ ಮೊತ್ತವನ್ನು 33,160 ರೈತರಿಗೆ ಇತ್ಯರ್ಥಪಡಿಸಿದ್ದಾರೆ.

 NPCI Validation ವೈಫಲ್ಯದಿಂದಾಗಿ ಹಲವಾರು ರೈತರಿಗೆ ಬೆಳೆವಿಮಾ ಪರಿಹಾರ ಮೊತ್ತ ಇತ್ಯರ್ಥವಾಗದ ಕಾರಣ ಎಲ್ಲಾ ರೈತರು ಕಡ್ಡಾಯವಾಗಿ ಆಧಾರನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡಿಕೊಳ್ಳಲೇಬೇಕೆಂದು ಮತ್ತೊಮ್ಮೆ ಸಚಿವರು ಪುನರುಚ್ಚರಿಸಿದರು.

ಕಾರ್ಯಕ್ರಮದಲ್ಲಿ ಜಿಕೆವಿಕೆ ಕುಲಪತಿ ರಾಜೇಂದ್ರ ಪ್ರಸಾದ್, ಕೃಷಿ ಇಲಾಖಾ ನಿರ್ದೇಶಕಿ ನಂದಿನಿಕುಮಾರಿ,ಕೃಷಿ ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷಿತ್, ಅಧಿಕಾರಿಗಳಾದ ಶಿವರಾಜ್,ವೆಂಕಟರಮಣ ರೆಡ್ಡಿ ಉಪಸ್ಥಿತರಿದ್ದರು.

ಹಿಂದಿನ ಲೇಖನಉಕ್ರೇನ್ ನಲ್ಲಿ ಮಂಡ್ಯ ವಿದ್ಯಾರ್ಥಿಗಳನ್ನು ಕರೆ ತರಲು ಅಗತ್ಯ ಕ್ರಮ: ಸಚಿವ ಕೆ.ಗೋಪಾಲಯ್ಯ
ಮುಂದಿನ ಲೇಖನರಣಜಿ ಟ್ರೋಫಿ: ಮಗಳ ಸಾವಿನ ನೋವಿನ ನಡುವೆ ಶತಕ ಸಿಡಿಸಿದ ಸೋಲಂಕಿ