ಮನೆ ಕ್ರೀಡೆ ರಣಜಿ ಟ್ರೋಫಿ: ಮಗಳ ಸಾವಿನ ನೋವಿನ ನಡುವೆ ಶತಕ ಸಿಡಿಸಿದ ಸೋಲಂಕಿ

ರಣಜಿ ಟ್ರೋಫಿ: ಮಗಳ ಸಾವಿನ ನೋವಿನ ನಡುವೆ ಶತಕ ಸಿಡಿಸಿದ ಸೋಲಂಕಿ

0

ಚಂಡಿಗಡ್ಬರೋಡಾ ಕ್ರಿಕೆಟಿಗ ವಿಷ್ಣು ಸೋಲಂಕಿ ಅವರು 2022ರ ರಣಜಿ ಟ್ರೋಫಿ ಸೀಸನ್ ನಲ್ಲಿ ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಶತಕದೊಂದಿಗೆ ಮಿಂಚಿದ್ದಾರೆ.

ವಿಷ್ಣು ಸೋಲಂಕಿ ಅವರ ಪುತ್ರಿ ಕೆಲ ದಿನಗಳ ಹಿಂದೆ ಮೃತಪಟ್ಟಿದ್ದರು. ಆರೋಗ್ಯ ಸಮಸ್ಯೆಯಿಂದ ಮಗು ಜನಿಸಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದೆ. ಈ ನೋವಿನಿಂದ ಹೊರಬರಲು ವಿಷ್ಣು ರಣಜಿ ಟ್ರೋಫಿಯಲ್ಲಿ ಬ್ಯುಸಿಯಾಗಿದ್ದಾರೆ.

ಸೋಲಂಕಿ ತನ್ನ ಮಗಳು ಸತ್ತಿದ್ದಾಳೆ ಎಂದು ತಿಳಿಯುತ್ತಿದ್ದಂತೆ ನೋವಿನಿಂದ ಹೊರಟು ಮಗಳ ಅಂತ್ಯಕ್ರಿಯೆಯನ್ನ ಮುಗಿಸಿದ್ದಾರೆ. ನೋವನ್ನ ಮರೆಯುವ ಸಲುವಾಗಿ ಮತ್ತೆ ಕ್ರೀಡಾಂಗಣದೊಳಗೆ ಕಾಲಿಟ್ಟಿದ್ದಾರೆ. ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಸೋಲಂಕಿ ಶತಕ ಸಿಡಿಸಿದ್ದಾರೆ. ಹುಟ್ಟಿದ ಮಗುವನ್ನು ಕಳೆದುಕೊಂಡರೂ ಕೂಡ ಶತಕ ಸಿಡಿಸಿ ಮಿಂಚಿದ್ದಾರೆ. ಈ ವಿಚಾರದಲ್ಲಿ ವಿಷ್ಣು ಸೋಲಂಕಿ ಅವರನ್ನು ಮೆಚ್ಚದೇ ಇರುವಂತಿಲ್ಲ ಎಂದು ಕ್ರಿಕೆಟ್ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಬರೋಡಾ ಆಲ್ ರೌಂಡರ್ 161 ಎಸೆತಗಳಲ್ಲಿ 12 ಬೌಂಡರಿಗಳೊಂದಿಗೆ ಶತಕದ ಸಿಡಿಸಿದ್ದಾರೆ. ಪ್ರಸ್ತುತ ಬರೋಡಾ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 398 ರನ್ ಗಳಿಸಿದೆ.

ಇದಕ್ಕೂ ಮುನ್ನ ಚಂಡೀಗಢ ಮೊದಲ ಇನಿಂಗ್ಸ್‌ನಲ್ಲಿ 168 ರನ್‌ಗಳಿಗೆ ಆಲೌಟ್ ಆಗಿತ್ತು. ಬರೋಡಾ ಮೊದಲ ಇನಿಂಗ್ಸ್‌ನಲ್ಲಿ ಈಗಾಗಲೇ 230 ರನ್‌ಗಳ ಮುನ್ನಡೆ ಸಾಧಿಸಿತ್ತು.

ಹಿಂದಿನ ಲೇಖನನನ್ನ ಪಾಲಿಸಿ ನನ್ನ ಕೈಯಲ್ಲಿ: ಎಂಬ ಬೆಳೆ ವಿಮೆ ಪಾಲಿಸಿ ವಿತರಣಾ ಅಭಿಯಾನ
ಮುಂದಿನ ಲೇಖನಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚನೆ: ಮುಖ್ಯಪೇದೆ ಬಂಧನ