ಮನೆ ಸ್ಥಳೀಯ ಮೈಸೂರು: “ಸಾಧನಾ ಸಮಾವೇಶಕ್ಕೆ 1 ಲಕ್ಷ ಜನವೇನು, 50 ಸಾವಿರ ಜನರೂ ಸೇರುವುದು ಕಷ್ಟ” :...

ಮೈಸೂರು: “ಸಾಧನಾ ಸಮಾವೇಶಕ್ಕೆ 1 ಲಕ್ಷ ಜನವೇನು, 50 ಸಾವಿರ ಜನರೂ ಸೇರುವುದು ಕಷ್ಟ” : ಎಚ್. ವಿಶ್ವನಾಥ್ ಟೀಕೆ

0

ಮೈಸೂರು: ಮೈಸೂರಿನಲ್ಲಿ ಜು.೧೯ ರಂದು ನಡೆಸುತ್ತಿರುವ ಸಾಧನಾ ಸಮಾವೇಶಕ್ಕೆ ೧ ಲಕ್ಷ ಅಲ್ಲ, ೫೦ ಸಾವಿರ ಜನ ಸೇರುವುದು ಕಷ್ಟ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದರು.

ಸಿದ್ಧರಾಮಯ್ಯ ಆಡಳಿತದಿಂದ ಜನ ಬೇಸತ್ತಿದ್ದಾರೆ. ಇವರ ಮೇಲೆ ಯಾರಿಗೂ ವಿಶ್ವಾಸ ಇಲ್ಲ, ಜನ ಸೇರಿಸುವಂತೆ ಪ್ರತಿ ಶಾಸಕರಿಗೆ ೧೦ ಲಕ್ಷ ರೂ. ಕೊಟ್ಟಿದ್ದಾರೆ. ಆದರೂ ೫೦ ಸಾವಿರ ಜನರೂ ಸೇರುವುದಿಲ್ಲ ಎಂದು ಹೇಳಿದರು.
ಸಾಧನಾ ಸಮಾವೇಶ ಮಾಡುತ್ತಿರುವ ನೀವು ಮೈಸೂರಿಗೆ ಏನು ಕೊಟ್ಟಿದ್ದೀರಿ ಎಂಬುದನ್ನು ಹೇಳಿ? ೨೦೧೩ರಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿಯಾದಾಗ ೧ ರೂ.ಗೆ ಅಕ್ಕಿ, ಮನೆ ಕಟ್ಟಲು ೬೦ ಸಾವಿರ ದಿಂದ ೧.೨೦ ಲಕ್ಷ ಹೆಚ್ಚಳ, ರಾಯಲ್ ಟೂರಿಸಂ ಅಥಾರಿಟಿ, ಹಿಂದುಳಿದ ವರ್ಗ ಎಸ್ಸಿ,ಎಸ್ಟಿ ಡವೆಲಪ್‌ಮೆಂಟ್ ಕಾರ್ಪೋರೇಷನ್ ಸಾಲ ಮನ್ನಾ ಮಾಡುವಂತೆ ನಾನು ಮತ್ತು ರಮೇಶ್ ಕುಮಾರ್ ಬರೆದುಕೊಟ್ಟೆವು. ಅದನ್ನು ಸಿದ್ಧರಾಮಯ್ಯ ಘೋಷಣೆ ಮಾಡಿ ಅನುಷ್ಠಾನಕ್ಕೆ ತಂದರು. ಅದರಲ್ಲಿ ರಾಯಲ್ ಟೂರಿಸಂ ನಿಂತೇ ಹೋಯಿತು ಎಂದು ಹೇಳಿದರು.

ಸಚಿವ ಡಾ.ಎಚ್.ಸಿ.ಮಹದೇವಪ್ಪ ನಮ್ಮ ಸರ್ಕಾರ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು ಕೊಟ್ಟಿದೆ ಎಂದು ಹೇಳಿದ್ದಾರೆ. ೨ ಸಾವಿರ ಸರ್ಕಾರಿ ಶಾಲೆಗಳು ಮುಚ್ವಿ ಹೋಗಿವೆ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ಜನ ಪರದಾಡುತ್ತಿದ್ದಾರೆ. ಯಾವ ಶಿಕ್ಷಣ, ಯಾವ ಆರೋಗ್ಯಕ್ಕೆ ಒತ್ತು ನೀಡಿದ್ದೀರಿ ಎಂದು ಪ್ರಶ್ನಿಸಿದರು. ಒಟ್ಟಿನಲ್ಲಿ ವಿವೇಚನೆ ಇಲ್ಲದ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು.


ಮೈಸೂರಿನ ಹಿರಿಯ ಪತ್ರಕರ್ತ ಕೆ.ಬಿ.ಗಣಪತಿ ಅವರ ಶ್ರದ್ದಾಂಜಲಿಗೆ ಮೈಸೂರಿನವರೇ ಆದ ಸಿಎಂ ಸಿದ್ಧರಾಮಯ್ಯ ಅವರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಬರದಿರುವುದು ನೋವು ತಂದಿದೆ. ಕನಿಷ್ಟ ಪಕ್ಷ ಜಿಲ್ಲಾಧಿಕಾರಿಗಳಾದರೂ ಹೋಗಿ ಶ್ರದ್ಧಾಂಜಲಿ ಸಲ್ಲಿಸಬೇಕಿತ್ತು. ಆದರೆ ಸಿದ್ಧರಾಮಯ್ಯ ಸೇರಿದಂತೆ ಸಚಿವ ಸಂಪುಟದ ಯಾವೊಬ್ಬ ಸದಸ್ಯರು ಬರದಿರುವುದು ದ್ವೇಷ ಸಾಧನೆ ಎಂಬುದು ತಿಳಿಯುತ್ತಿದೆ. ಒಬ್ಬ ಹಿರಿಯ ಪತ್ರಕರ್ತರಿಗೆ ಈ ರೀತಿ ಮಾಡಿದ ಮೇಲೆ ನಾಳಿನ ಸಿಎಂ ಸಿದ್ಧರಾಮಯ್ಯ ಅವರ ಸಾಧನಾ ಸಮಾವೇಶವನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಬಹಿಷ್ಕರಿಸಬೇಕು.

-ಎಚ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ