ಮನೆ ಸುದ್ದಿ ಜಾಲ ಕುಶಾಲನಗರ ಕಸಾಪದಿಂದ ಸಾಹಿತಿ ಚೆನ್ನವೀರಕಣವಿಗೆ ಶ್ರದ್ದಾಂಜಲಿ

ಕುಶಾಲನಗರ ಕಸಾಪದಿಂದ ಸಾಹಿತಿ ಚೆನ್ನವೀರಕಣವಿಗೆ ಶ್ರದ್ದಾಂಜಲಿ

0

ಕುಶಾಲನಗರ: ಬುಧವಾರ ನಿಧನರಾದ ನಾಡೋಜ ಡಾ.ಚೆನ್ನವೀರಕಣವಿ ನಿಧನಕ್ಕೆ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭ ಮಾತನಾಡಿದ ಕುಶಾಲನಗರ  ಕಸಾಪ ತಾಲ್ಲೂಕು ಅಧ್ಯಕ್ಷ ಕೆ.ಎಸ್.ಮೂರ್ತಿ, ನಾಡು ಕಂಡ ದಿಗ್ಗಜ ಕವಿ, ವಿದ್ವಾಂಸ ಹಾಗು ವಿಮರ್ಶಕ ಡಾ. ಚೆನ್ನವೀರಕಣವಿ ನಿಧನದಿಂದಾಗಿ ಸಾಹಿತ್ಯ ಕ್ಷೇತ್ರ ಬಡವಾಗಿದೆ. ಸುಮಾರು ಎಂಟು ದಶಕಗಳ ಕಾಲ ತಮ್ಮ ಸಾಹಿತ್ಯ ಕೃಷಿಯಿಂದಾಗಿ  ಕನ್ನಡ ಸಾರಸ್ವತ ಲೋಕವನ್ನಾಳಿದ ಡಾ.ಕಣವಿ,  ಎಲ್ಲಾ ಭಾಷೆಗಳು ಸರಸ್ವತಿಯ ಅಂಗಗಳಾಗಿವೆ. ಆದರೆ ಕನ್ನಡ ಭಾಷೆ ಮಾತ್ರ ಪೂಜ್ಯನೀಯ ಎಂದು ಸಾರಿದ ಮೇರು ವ್ಯಕ್ತಿತ್ವ ಅವರದ್ದು ಎಂದರು.
ಕಾಂಗ್ರೇಸ್ ಮುಖಂಡ ವಿ.ಪಿ.ಶಶಿಧರ್ ಮಾತನಾಡಿ, ಕನ್ನಡ ಸಾಹಿತ್ಯ ಲೋಕ ಕಂಡ ಸೃಜನಾತ್ಮಕ ಕವಿ, ಜೀವನದುದ್ದಕ್ಕೂ ಯಾವುದೇ ವಿವಾದಗಳಿಗೆ ಸೋಂಕದ ರೀತಿ ಸಾಹಿತ್ಯ ಕ್ಷೇತ್ರವನ್ನು  ಶ್ರೀಮಂತಗೊಳಿಸಿದರು. ಬದುಕಿನುದ್ದಕ್ಕೂ ಕ್ರಿಯಾಶೀಲತೆಯನ್ನು ಕಾಪಾಡಿಕೊಂಡ ಯುಗದ ಕವಿ, ಜಗದ ಕವಿ ಎಂದು ಬಣ್ಣಿಸಿದರು.
ಕಸಾಪ ಜಿಲ್ಲಾ ಸಮಿತಿ ನಿರ್ದೇಶಕ ಎಂ.ಇ.ಮೋಹಿದ್ದೀನ್, ಕಸಾಪ ಸದಸ್ಯ ಎಂ.ಎನ್.ಮೂರ್ತಿ ಮಾತನಾಡಿದರು.
ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ  ಜೈವರ್ಧನ್, ಪ.ಪಂ.ಸದಸ್ಯರಾದ  ಎಂ.ವಿ.ನಾರಾಯಣ,  ವಿ.ಎಸ್.ಆನಂದಕುಮಾರ್, ಬಾರವಿ ಕನ್ನಡ ಸಂಘದ ಬಬೀಂದ್ರಪ್ರಸಾದ್, ವಿಜೇಂದ್ರಪ್ರಸಾದ್, ಹೆಚ್.ಎನ್. ಸುಬ್ರಮಣ್ಯ, ಪಾಣತ್ತಲೆ ಗಿರೀಶ್, ಕಸಾಪ ಕುಶಾಲನಗರ ತಾಲೋಕು ಗೌರವ ಕಾರ್ಯದರ್ಶಿ ಮಂಜುಭಾರ್ಗವಿ,  ಕೋಶಾಧಿಕಾರಿ ಉಮೇಶ್, ನಿರ್ದೇಶಕಿ ಸೂದನ ರತ್ನಾವತಿ,ಸೇರಿದಂತೆ ಇತರರು ಹಾಜರಿದ್ದರು.

ಹಿಂದಿನ ಲೇಖನಮೇಲುಕೋಟೆ ಚಲುವನಾರಾಯಣ ಸ್ವಾಮಿ ವೈರಮುಡಿ ಉತ್ಸವ: ಪೂರ್ವಭಾವಿ ಸಭೆ
ಮುಂದಿನ ಲೇಖನಹಿಂದೂ ಧರ್ಮ ರಕ್ಷಣೆಗೆ ಮೈಸೂರು ಅರಮನೆ ಸದಾ  ಸಿದ್ಧ: ಯದುವೀರ್ ಒಡೆಯರ್