ಮನೆ ಸುದ್ದಿ ಜಾಲ ರೀಪ್ ಬೆನಿಫಿಟ್ ಫೌಂಡೇಶನ್ ಜೊತೆ ಮೈಸೂರು ವಿವಿ ಒಪ್ಪಂದ

ರೀಪ್ ಬೆನಿಫಿಟ್ ಫೌಂಡೇಶನ್ ಜೊತೆ ಮೈಸೂರು ವಿವಿ ಒಪ್ಪಂದ

0

ಮೈಸೂರು(Mysuru): ಮೈಸೂರು ವಿಶ್ವವಿದ್ಯಾಲಯವು ರೀಪ್ ಬೆನಿಫಿಟ್ ಫೌಂಡೇಶನ್‌ನೊಂದಿಗೆ ಗುರುವಾರ ಔಪಚಾರಿಕವಾಗಿ ಒಪ್ಪಂದಕ್ಕೆ ಸಹಿ ಹಾಕಿತು.

ನಂತರ ಮಾತನಾಡಿದ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಎಂಬಿಎ ಹಾಗೂ ಎಂಎಸ್‌ಡಬ್ಲ್ಯೂ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿಯಲು ಹಾಗೂ ಹೊಸ ಬಗೆಯ ಚಿಂತನೆಗೆ ರೂಪ ನೀಡಲು ಈ ಒಪ್ಪಂದ ಸಹಕಾರಿಯಾಗಲಿದೆ. ಸಮಾಜದಲ್ಲಿ ನಾನಾ ಸಮಸ್ಯೆಗಳು ಇವೆ. ವಿದ್ಯಾರ್ಥಿಗಳು ಆ ಸಮಸ್ಯೆಗಳನ್ನು ಅಧ್ಯಯನ ನಡೆಸಿ, ದತ್ತಾಂಶ ಸಂಗ್ರಹಿಸಿ ಪರಿಹಾರ ನೀಡುವ ವಿನೂತನ ಕೆಲಸ ಮಾಡಲಿದ್ದಾರೆ. ಇದಕ್ಕೆ ರೀಪ್ ಬೆನಿಫಿಟ್ ಸಂಸ್ಥೆ ನಮ್ಮ ವಿವಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಜೊತೆಗೆ ಮಾಸಿಕ ಪ್ರೋತ್ಸಾಹ ಧನವನ್ನೂ ನೀಡುತ್ತದೆ.

ಯುವಕರಿಗೆ ಧನಾತ್ಮಕತೆಯನ್ನು ತುಂಬುವುದು ಈ ಯೋಜನೆ ಉದ್ದೇಶವಾಗಿದೆ. ಸೃಜನಾತ್ಮಕ ಚಿಂತನೆಯಂತಹ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಇದು ಸಹಕಾರಿಯಾಗಲಿದೆ. ಅಲ್ಲದೆ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲಾಗುತ್ತದೆ. ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ವಿವಿಯ ಇತರೆ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಲಭ್ಯವಾಗಲಿದೆ ಎಂದು ತಿಳಿಸಿದರು.

ಹಿಂದಿನ ಲೇಖನಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಕ್ಷೇತ್ರಗಳನ್ನು ಪುನರ್ ವಿಂಗಡಣೆಗೊಳಿಸುವ ಅಂತಿಮ ಆದೇಶಕ್ಕೆ ಡಿಲಿಮಿಟೇಶನ್ ಪ್ಯಾನೆಲ್ ಸಹಿ
ಮುಂದಿನ ಲೇಖನಲೋಕಾಯುಕ್ತವನ್ನು ಬುಡಮೇಲು ಮಾಡಿದವರು ಸಿದ್ದರಾಮಯ್ಯ: ಸಚಿವ ಕೋಟ ಶ್ರೀನಿವಾಸ ಪೂಜಾರಿ