ಮನೆ ಶಿಕ್ಷಣ ರಾಷ್ಟ್ರದ 2022ನೇ ಸಾಲಿನ 7ನೇ ಶ್ರೇಷ್ಠ ವಾಸ್ತುಶಿಲ್ಪ ಕಾಲೇಜು ಸ್ಥಾನ ಪಡೆದ ಮೈಸೂರು ವಿವಿಯ ಸ್ಕೂಲ್...

ರಾಷ್ಟ್ರದ 2022ನೇ ಸಾಲಿನ 7ನೇ ಶ್ರೇಷ್ಠ ವಾಸ್ತುಶಿಲ್ಪ ಕಾಲೇಜು ಸ್ಥಾನ ಪಡೆದ ಮೈಸೂರು ವಿವಿಯ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಟರ್ ಸಂಸ್ಥೆ

0

ಮೈಸೂರು(Mysuru): ಇಂಡಿಯಾ ಟುಡೇ ಸರ್ವೆ ಪ್ರಕಾರ, ಮೈಸೂರು ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಟರ್ ಸಂಸ್ಥೆಯು ರಾಷ್ಟ್ರಮಟ್ಟದ 2022ನೇ 7ನೇ ಶ್ರೇಷ್ಠ ವಾಸ್ತುಶಿಲ್ಪ ಕಾಲೇಜು ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿರುವ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಕರ್ನಾಟಕ ರಾಜ್ಯದಲ್ಲಿ ಸಂಸ್ಥೆಯು ಅತೀ ಶ್ರೇಷ್ಠ ವಾಸ್ತುಶಿಲ್ಪ ಕಾಲೇಜು ಎಂಬ ಮೊದಲನೇಯ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.

ಇಂಡಿಯಾ ಟುಡೇ ಇವರು ಎಂಡಿರ್‌ಎ (ಮಾರ್ಕೆಟಿಂಗ್‌ ಅಂಡ್ ಡೆವೆಲಪ್ಟೆಂಟ್ ರಿಸರ್ಚ್ ಅಸೋಸಿಯೇಟ್ಸ್) ರವರ ಸಹಯೋಗದೊಂದಿಗೆ “ಇಂಡಿಯಾ ಟುಡೇ ಗ್ರೂಪ್ ಎಂಡಿಆ‌ಎ ಬೆಸ್ಟ್ ಕಾಲೇಜಸ್ ಬ್ಯಾಂಕಿಂಗ್ 20227. ಅನ್ನು ನಡೆಸಿರುತ್ತಾರೆ. ಈ ಸರ್ವೇಯು ಮಾನದಂಡವನ್ನು ಹೊಂದಿಸಿ ಅತ್ಯುತ್ತಮ ಶಿಕ್ಷಣವನ್ನು ನೀಡುವ ಸಂಸ್ಥೆಯನ್ನು ಗುರುತಿಸುವ ಪ್ರಯತ್ನವಾಗಿದ್ದು ಇಂಡಿಯಾ ಟುಡೇ ಶ್ರೇಯಾಂಕದ ಪ್ರಕಾರ ಐಐಟಿ ರೂರ್ಕೀ ಸಂಸ್ಥೆಯು ಮೊದಲನೇಯದಾಗಿದ್ದು, ಎಸ್‌ಪಿಎ, ನವದೆಹಲಿ ಸಂಸ್ಥೆಯು 2ನೇ ಸ್ಥಾನ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ ಸಂಸ್ಥೆಗೆ 7ನೇ ಶ್ರೇಯಾಂಕ ನೀಡಿದೆ. ಮೈಸೂರು ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ ಸಂಸ್ಥೆಗೆ 2021- 22 ನೇ ಸಾಲಿನಲ್ಲಿಯೂ ಸಹ 7ನೇ ಶ್ರೇಯಾಂಕ ನೀಡಿದ್ದಾರೆ.

ಗ್ಲೋಬಲ್ ಹ್ಯೂಮನ್ ರಿಸೋರ್ಸ್ ಡೆವೆಲಪ್ಮೆಂಟ್ ಸೆಂಟರ್ (ಜಿ.ಎಚ್.ಆರ್.ಡಿ.ಸಿ), ನವದೆಹಲಿ ರವರಿಂದ ಮೈಸೂರು ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಟರ್ ಸಂಸ್ಥೆಯು 2022ನೇ ವರ್ಷದ ಸೂಪರ್ ಎಕ್ಸಲೆನ್ಸ್ ಇನ್ ಇಂಡಿಯಾದಡಿಯಲ್ಲಿ 6ನೇ ಉನ್ನತ ವಾಸ್ತುಶಿಲ್ಪ ಕಾಲೇಜು ಮತ್ತು ದಕ್ಷಿಣ ಪ್ರಾದೇಶಿಕ ವಲಯದಲ್ಲಿ 3ನೇ ಉನ್ನತ ವಾಸ್ತುಶಿಲ್ಪ ಕಾಲೇಜು ಎಂಬ ಸ್ಥಾನಗಳನ್ನು ಪಡೆದಿದೆ.

ಮೈಸೂರು ವಿಶ್ವವಿದ್ಯಾನಿಲಯವು ಬಿ.ಆರ್ಕ್ ಮತ್ತು ಎಂ.ಆರ್ಕ್ (ಅರ್ಬನ್ ಡಿಸೈನ್) ಕೋರ್ಸುಗಳನ್ನು 2002 ರಲ್ಲಿ ಪ್ರಾರಂಭಿಸಿದ್ದು, 2022-23ರಲ್ಲಿ ಪಿ.ಎಚ್‌ಡಿ ಪದವಿಯನ್ನು ಆರ್ಕಿಟೆಕ್ಟರ್‌ ನಲ್ಲಿ ಪ್ರಾರಂಭಿಸಿದೆ. ಇಲ್ಲಿನ ವಿದ್ಯಾರ್ಥಿಗಳು ನವದೆಹಲಿಯ ಕೌನ್ಸಿಲ್ ಆಫ್ ಆರ್ಕಿಟೆಕ್ಟರ್ ಸ್ಥಾಪಿಸಿರುವ ನ್ಯಾಷನಲ್ ಬೆಸ್ಟ್ ಥೀಸೀಸ್ ಅವಾರ್ಡ್ಸ್ ಮತ್ತು ಐಟಿಪಿಐ, ನವದೆಹಲಿರವರು ಸ್ಥಾಪಿಸಿರುವ ಪ್ರೊ. ವಿ. ಎನ್ ಪ್ರಸಾದ ಬೆಸ್ಟ್ ಥೀಸೀಸ್ ಅವಾರ್ಡ್‌ ಗಳನ್ನು ಗಳಿಸಿದ್ದಾರೆ.

ಹಿಂದಿನ ಲೇಖನಕೇಂದ್ರ ಸಚಿವ ಸ್ಥಾನಕ್ಕೆ ಅಬ್ಬಾಸ್ ನಖ್ವಿ ರಾಜೀನಾಮೆ: ಉಪರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆ ಸಾಧ್ಯತೆ
ಮುಂದಿನ ಲೇಖನಯುಎಪಿಎ ಅಡಿ ಯಾವುದೇ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಬಹುದು: ಹೈಕೋರ್ಟ್