ಮನೆ ಅಪರಾಧ ಅತ್ಯಾಚಾರ ಆರೋಪ: ಮಲಯಾಳಂ ಚಿತ್ರ ನಿರ್ದೇಶಕ ಲಿಜು ಕೃಷ್ಣ ಬಂಧನ

ಅತ್ಯಾಚಾರ ಆರೋಪ: ಮಲಯಾಳಂ ಚಿತ್ರ ನಿರ್ದೇಶಕ ಲಿಜು ಕೃಷ್ಣ ಬಂಧನ

0

ತಿರುವನಂತಪುರಂ: ಮಲಯಾಳಂ ಚಿತ್ರ ನಿರ್ದೇಶಕ ಲಿಜು ಕೃಷ್ಣ ಅವರ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಕೇರಳದ ಕಣ್ಣೂರಿನಲ್ಲಿ ಪೊಲೀಸರು ಭಾನುವಾರ ಅವರನ್ನು ಬಂಧಿಸಿದ್ದಾರೆ.

ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಲಿಜು ಕೃಷ್ಣ ಅವರನ್ನು ಬಂಧಿಸಲಾಗಿದೆ.

ದೂರುದಾರರ ಯಾವುದೇ ವಿವರಗಳನ್ನು ನೀಡಲು ಸಾಧ್ಯವಿಲ್ಲ. ಆದರೆ ಅವರು ಚಿತ್ರರಂಗದಿಂದ ಬಂದವರಲ್ಲ. ಬದಲಾಗಿ ಲಿಜು ಅವರಿಗೆ ಚೆನ್ನಾಗಿ ತಿಳಿದಿರುವವರು ಎಂದು ಪೊಲೀಸ್ ಅಧಿಕಾರಿ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಚೊಚ್ಚಲ ಸಿನಿಮಾವನ್ನು ನಿರ್ದೇಶಿಸುತ್ತಿರುವ ಲಿಜು ಅವರನ್ನು ಇಂದು ಕೊಚ್ಚಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮಲಯಾಳಂ ತಾರೆಯರಾದ ಮಂಜು ವಾರಿಯರ್ ಮತ್ತು ನಿವಿನ್ ಪೌಲಿ ಅಭಿನಯದ ಲಿಜು ಅವರ ಚಿತ್ರ ‘ಪಡವೆಟ್ಟು’ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.