ನೈಸರ್ಗಿಕ ಅನಿಲದ ದರವನ್ನು ನಿಗದಿಪಡಿಸಲು ಹೂಸ ಸೂತ್ರವನ್ನು ಅನುಸರಿಸಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಈ ಪರಿಣಾಮ ಸಿ.ಎನ್.ಜಿ ಮತ್ತು ಪೈಪ್ ಮೂಲಕ ಮನೆಗಳಿಗೆ ನೀಡುವ ಅನಿಲದ (ಪಿ.ಎನ್.ಜಿ) ದರಗಳು ಶೇ.10 ರಷ್ಟು ಇಳಿಕೆಯಾಗಲಿದೆ.
ಬೆಲೆ ಏರಿಕೆಯ ಕಾಲದಲ್ಲಿ ಗ್ರಾಹಕರ ಪಾಲಿಗೆ ಇದು ಶುಭಸುದ್ದಿಯಾಗಿದ್ದು ಜನರು ತುಸು ನಿರಾಳಗೂಂಡಿದ್ದಾರೆ. ಹೂಸ ಸೂತ್ರ ಜಾರಿಗೆ ಕೇಂದ್ರ ಸಂಪುಟ ಸಮ್ಮತಿಸಿದ್ದು, ಈ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ.
ʼʼಪಾರಂಪರಿಕ ಹಳೆಯ ಕ್ಷೇತ್ರಗಳಲ್ಲಿ ಉತ್ಪಾದನೆಯಾಗುವ ನೈಸರ್ಗಿಕ ಅನಿಲವನ್ನು ಇನ್ನುಮುಂದೆ ಕಚ್ಚಾ ತೈಲ ದರ ಸೂಚ್ಯಂಕಕ್ಕೆ ಸೇರಿಸಲಾಗುತ್ತದೆ. ಈ ಮೊದಲು ಅನಿಲ ದರದ ಸೂಚ್ಯಂಕಕ್ಕೆ ಸೇರಿಸಲಾಗುತಿತ್ತು. ಅಮೇರಿಕ, ಕೆನಡಾ ಮತ್ತು ರಷ್ಯಾದಂತಹ ದೇಶಗಳಲ್ಲಿನ ಕ್ರಮದಂತೆ ದರ ನಿಗದಿಗೆ ಕೇಂದ್ರ ಸರಕಾರವು ಹೂಸ ಸೂತ್ರವನ್ನು ಬಳಸಲಿದೆ. ಈ ಪರಿಣಾಮ ಸಿ.ಎನ್.ಜಿ ಮತ್ತು ಪಿ.ಎನ್.ಜಿ ದರಗಳು ಇಳಿಕೆಯಾಗಲಿದೆ. ʼʼ ಎಂದು ಹೇಳಿದ್ದಾರೆ.
ಪೆಟ್ರೋಲ್-ಡೀಸೆಲ್ ಬೆಲೆಯ ಸತತ ಏರಿಕೆಯ ನಂತರ ಹಲವಾರು ಸಿ.ಎನ್.ಜಿ ವಾಹನಗಳ ಖರೀದಿಗೆ ಆಸಕ್ತಿ ತೋರಿಸಿದ್ದಾರೆ.