ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಮೇಷ್ಟ್ರು :- ತಿಮ್ಮ, ಸಮಾನ ಅರ್ಥಗಳ ಶಬ್ದಗಳಿಂದ ಏನು ಲಾಭ ಅನ್ನೋದು ಸ್ವಲ್ಪ ಹೇಳ್ತೀಯಾ ?

ತಿಮ್ಮ :- ಒಂದು ವೇಳೆ ಒಂದು ಶಬ್ದದ ಅರ್ಥ ಗೊತ್ತಾಗದೆ ಹೋದ್ರೆ ಆ ಸ್ಥಾನದಲ್ಲಿ ಇನ್ನೊಂದು ಶಬ್ದಾನ ಬರೆಯೋದಕ್ಕೆ ಸಾರ್.

****

ಜುಗ್ಗೇಶಿಯ ಜೂನಿಯರ್ ಮಲ್ಲೇಶಿ ತನ್ನ ಸ್ಕೂಲಿನಲ್ಲಿ ಸಹಪಾಠಿಗಳೊಂದಿಗೆ ಜಂಬ ಕೊಚ್ಚಿಕೊಳ್ಳುತ್ತಿದ್ದನು. “ನೀವ್ಯಾರಾದ್ರು ಕಡ್ತೀರಾ ಚಾಲೆಂಜು….. ಇಡೀ ಸ್ಕೂಲಲ್ಲಿ ಯಾರೂ ಮಾಡದ ಕೆಲಸ ನಾನು ಮಾಡ್ತೀನಿ?”  

“ಏನಪ್ಪಾ ಅಂತ ಕೆಲಸ ?” ಗೆಳೆಯರೆಲ್ಲ ಕೇಳಿದರು.

“ನನ್ ಹ್ಯಾಂಡ್ ರೈಟಿಂಗ್ ನ ಓದೋದು”

***

ವೈಯ್ಯಾರಿ ವಿಮಲಾ ಸಿಟ್ಟಿನಿಂದ ಸೀರೆ ಅಂಗಡಿಗ ನುಗ್ಗಿ, “ ರೀ, ಮಿಸ್ಟರ್, ನೀವು ಕೊಟ್ಟ ರವಿಕೆ ಬಟ್ಟೆ ಬಣ್ಣ ಹೋಗಲ್ಲ ಅಂದಿದ್ರಿ. ಆದರೆ ಬೆವರಿಗೆ ಬಣ್ಣ ಬೇರೆಯಾಗಿ ಮೈಗೆ ಅಂಟಿದೆ ಎಂದು ದಬಾಯಿಸಿದಳು.   

“ಅದೇ ಮೇಡಂ, ನಾನು ಹೇಳಿದ್ದು. ಬಣ್ಣ ನಿಮ್ಮನ್ನು ಬಿಟ್ಟು ಹೋಗಲ್ಲ ಅಂತ” ಎಂದು ಅಂಗಡಿಯವ ನಕ್ಕ.

ಹಿಂದಿನ ಲೇಖನಯೋಗ ಎಂದರೇನು?
ಮುಂದಿನ ಲೇಖನಇಂದಿನ ರಾಶಿ ಭವಿಷ್ಯ