ಮನೆ ತಂತ್ರಜ್ಞಾನ ಉತ್ತಮ ಮೈಲೇಜ್, ಸುರಕ್ಷತೆಯೊಂದಿಗೆ ಬರುತ್ತಿದೆ ಹೊಸ ಹ್ಯುಂಡೈ ಕಾರು

ಉತ್ತಮ ಮೈಲೇಜ್, ಸುರಕ್ಷತೆಯೊಂದಿಗೆ ಬರುತ್ತಿದೆ ಹೊಸ ಹ್ಯುಂಡೈ ಕಾರು

0

ಹೊಸದಾಗಿ ಬಿಡುಗಡೆ ಆಗುತ್ತಿರುವ ತನ್ನ ಮುಂಬರುವ ಎಕ್ಸ್ಟರ್ ಎಸ್ ಯುವಿಯಲ್ಲಿ 6 ಏರ್ಬ್ಯಾಗ್ ಗಳನ್ನು ಎಲ್ಲಾ ರೂಪಾಂತರಗಳಲ್ಲಿ ಸ್ಟ್ಯಾಂಡರ್ಡ್ ಆಗಿ 25 ಇತರ ಸುರಕ್ಷತಾ ಪೀಚರ್ಸ್ ಗಳೊಂದಿಗೆ ಬರಲಿದೆ ಎಂದು ಬಹಿರಂಗಪಡಿಸಿದೆ.

Join Our Whatsapp Group

ಹ್ಯುಂಡೈ ಇಂಡಿಯಾ ಈ ಹೊಸ ಎಕ್ಸ್ಟರ್ ಎಸ್ ಯು ವಿಯಲ್ಲಿ ಲೋ-ಸ್ಪೆಕ್ ರೂಪಾಂತರಗಳಲ್ಲಿ ಹೆಚ್ಚುವರಿ ಸುರಕ್ಷತಾ ಫೀಚರ್ಸ್ ಗಳ ಆಯ್ಕೆಯನ್ನು ನೀಡುತ್ತದೆ.  ಅಪಘಾತಗಳ ಸಂದರ್ಭದಲ್ಲಿ ಡ್ಯುಯಲ್-ಕ್ಯಾಮೆರಾ ಡ್ಯಾಶ್ ಕ್ಯಾಮ್ ನೊಂದಿಗೆ ನಿಡಲಾಗಿದೆ. 

ಹ್ಯುಂಡೈ ಎಕ್ಸ್ಟರ್ ಎಸ್ ಯು ವಿ ಯಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ಸಿ), ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ ಮೆಂಟ್ (ವಿ ಎಸ್ ಎಂ), ಹಿಲ್-ಸ್ಟಾರ್ಟ್ ಅಸಿಸ್ಟ್, ಎಬಿಎಸ್, ಇಬಿಡಿ, ಐ ಎಸ್ ಒಫಿಕ್ಸ್ ಆಂಕರಿಂಗ್ ಪಾಯಿಂಟ್ ಗಳು, ರಿಮೈಂಡರ್ ನೊಂದಿಗೆ 3-ಪಾಯಿಂಟ್ ಸೀಟ್ ಬೆಲ್ಟ್ಗಳು (ಎಲ್ಲಾ ಸೀಟ್ ಗಳು) ಒಳಗೊಂಡಿವೆ. ESS, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ರಿವರ್ಸ್ ಪಾರ್ಕಿಂಗ್ ಸೆನ್ಸರ್ ಗಳು ಮತ್ತು ಇನ್ನಷ್ಟು ಫೀಚರ್ಸ್ ಗಳನ್ನು ಹೊಂದಿದೆ.

ಹುಂಡೈ ಇಂಡಿಯಾ ತನ್ನ ಮುಂಬರುವ ಮೈಕ್ರೋ ಎಸ್ ಯು ವಿ ಎಕ್ಸ್ಟರ್ ಗಾಗಿ ಬುಕ್ಕಿಂಗ್ಗಳನ್ನು ಪ್ರಾರಂಭಿಸಿದೆ. ಈ ಹೊಸ ಹುಂಡೈ ಎಕ್ಸ್ಟರ್ ಕಾರು EX, S, SX, SX (O) ಮತ್ತು SX (O) ಕನೆಕ್ಟ್ ಎಂಬ 5 ಟ್ರಿಮ್ ಗಳಲ್ಲಿ ಬರುತ್ತದೆ. ಹ್ಯುಂಡೈ ಎಕ್ಸ್ಟರ್ ಮಿನಿ ಎಸ್ಯುವಿಯ ಪವರ್ಟೈನ್ ಸೆಟಪ್ 1.2 ಲೀಟರ್ ಕಪ್ಪಾ ಪೆಟ್ರೋಲ್ ಮತ್ತು 1.2 ಲೀಟರ್ ಕಪ್ಪಾ ಪೆಟ್ರೋಲ್ ಅನ್ನು ಫ್ಯಾಕ್ಟರಿ-ಫಿಟ್ ಮಾಡಿದ ಸಿಎನ್ ಜಿ ಕಿಟ್ ನೊಂದಿಗೆ ಒಳಗೊಂಡಿರುತ್ತದೆ.

ಹ್ಯುಂಡೈ ಕಾರಿನ ಎಕ್ಸ್ಟರ್ ಎಂಟ್ರಿ ಲೆವೆಲ್ ಎಂಜಿನ್ ಆಯ್ಕೆಯು ವೆನ್ಯೂ , ಗ್ರ್ಯಾಂಡ್ ಐ10 ನಿಯೋಸ್ ಮತ್ತು ಔರಾ ನಂತಹ ಅದೇ .1.2-ಲೀಟರ್ ನ್ಯಾಚುರಲ್ ಆಸ್ಪರರ್ಡ್ ಪೆಟ್ರೋಲ್ ಆಗಿರುತ್ತದೆ .ಹುಂಡೈ ನಂತರದ ಹಂತದಲ್ಲಿ 1.0-ಲೀಟರ್ ಟರ್ಬೊ-ಪೆಟ್ರೋಲ್ ಅನ್ನು ಸೇರಿಸಬಹುದು. ಎಕ್ಸ್ಟರ್ ಫ್ಯಾಕ್ಟರಿ ಸಿಎನ್ಜಿ ಆಯ್ಕೆಯನ್ನು ಸಹ ಪಡೆಯುತ್ತದೆ. ಇದು ಹುಂಡೈನ ಅತ್ಯಂತ ಚಿಕ್ಕ ಎಸ್ ಯು ವಿ ಆಗಿರುತ್ತದೆ.

ಹ್ಯುಂಡೈ ಎಕ್ಸ್ಟರ್ ಕೆಲವು ವಿನ್ಯಾಸ ಅಂಶಗಳನ್ನು Grand i10 Nios ನೊಂದಿಗೆ ಹಂಚಿಕೊಂಡಾಗ , ಮೂರು ಹಂತದ ವಿನ್ಯಾಸದೊಂದಿಗೆ ಫ್ಲಾಟ್ ಬಾನೆಟ್ ಮತ್ತು ಸ್ಟೈಲಿಂಗ್ ಸಂಪೂರ್ಣವಾಗಿ ವಿಭಿನ್ನವಾಗಿದೆ. ಮೇಲ್ಭಾಗದಲ್ಲಿ, ಇರಿಸಲಾದ ಇಂಡಿಕೇಟರ್ ಲ್ಯಾಂಪ್ ಗಳನ್ನು ಬ್ಲ್ಯಾಕ್ ಪಟ್ಟಿಯೊಂದಿಗೆ ಸಂಪರ್ಕಿಸಿದೆ. ಇನ್ನು ಕೆಲವು ರೂಪಾಂತರಗಳಲ್ಲಿ ಸಂಪರ್ಕಿತ ಎ ಲ್ಇ ಡಿಯನ್ನು ಹೊಂದಿರಬಹುದು. ಈ ಲ್ಯಾಂಪ್ ಗಳು ತಮ್ಮ ಎಲ್ ಇ ಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ ಗಳಿಗಾಗಿ H- ಮಾದರಿಯ ನೋಟವನ್ನು ಪಡೆಯುತ್ತವೆ, ಇದು ಭವಿಷ್ಯದಲ್ಲಿ ಸಾಂಟಾ ಫೆ ಮತ್ತು ಕ್ರೆಟಾ ಫೇಸ್ಲಿಫ್ಟ್ ನಂತಹ ಹೆಚ್ಚಿನ ಹ್ಯುಂಡೈ ಎಸ್ ಯುವಿ ಗಳಲ್ಲಿ ಕಂಡುಬರುತ್ತದೆ. ಈ ಹೊಸ ಹ್ಯುಂಡೈ ಎಕ್ಸ್ಟರ್ ಮೈಕ್ರೋ ಎಸ್ ಯು ವಿ ಯಲ್ಲಿ ಬ್ಲ್ಯಾಕ್ ಗ್ರಿಲ್ ಅಗಲವಾಗಿದೆ ಮತ್ತು ಮಧ್ಯದಲ್ಲಿ ಸರಿಯಾಗಿ ಇರುತ್ತದೆ. ಹ್ಯುಂಡೈ ಎಕ್ಸ್ಟರ್ ಮೈಕ್ರೋ ಎಸ್ ಯು ವಿ ಗ್ರಿಲ್ ಆವರಣದ ಒಳಗೆ ಚದರ ಹೆಡ್ಲ್ಯಾಂಪ್ ಗಳನ್ನು ಬಳಸಲಾಗಿದೆ . ಈ ಕಾರಿನ ಹೆಡ್ಲ್ಯಾಂಪ್ ಗಳು ಪ್ರೊಜೆಕ್ಟರ್ ಯುನಿಟ್ ಗಳು ಹೊಂದಿರುವಂತೆ ಕಾಣುತ್ತದೆ ಮತ್ತು ಹೆಚ್ಚಿನ ರೂಪಾಂತರಗಳಿಗೆ ಎಲ್ ಇ ಡಿ ಲ್ಯಾಂಪ್ ಗಳನ್ನು ಪಡೆಯಬಹುದು.

ಹೆಡ್ಲ್ಯಾಂಪ್ ಗಳು ಪ್ರೊಜೆಕ್ಟರ್ ಯುನಿಟ್ ಗಳನ್ನು ಹೊಂದಿರುವಂತೆ ತೋರುತ್ತಿದೆ ಮತ್ತು ಹೆಚ್ಚಿನ ರೂಪಾಂತರಗಳಿಗೆ ಎಲ್ ಇ ಡಿ ಲ್ಯಾಂಪ್ ಗಳನ್ನು ಪಡೆಯಬಹುದು. ಈ ಹೊಸ ಹ್ಯುಂಡೈ ಎಕ್ಸ್ಟರ್ ದುಂಡಗಿನ ಮತ್ತು ಸ್ವಲ್ಪ ವ್ಹೀಲ್ ಆರ್ಚ್ ಗಳನ್ನು ಪಡೆಯುತ್ತದೆ, ಈ ಹೊಸ ಎಸ್ ಯು ವಿಯನ್ನು ಸ್ಕ್ವಾರಿಶ್ ನೋಟವನ್ನು ಸೇರಿಸುತ್ತದೆ. ಮುಂಭಾಗ ಮತ್ತು ಹಿಂಭಾಗದ ಡೋರುಗಳನ್ನು ಸುಲಭವಾಗಿ ಪ್ರವೇಶಿಸಲು ಮತ್ತು ಹೊರಬರಲು ಅನುಕೂಲವಾಗುವಂತೆ ದೊಡ್ಡದಾಗಿದೆ ಎಂದು ತೋರುತ್ತದೆ, ದೊಡ್ಡ ವಿಂಡೋಗಳೊಂದಿಗೆ ಸರಳವಾಗಿದೆ.

ಹಿಂದಿನ ಲೇಖನಪುನೀತ್ ಕೆರೆಹಳ್ಳಿ ಸೇರಿ ಐವರಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್
ಮುಂದಿನ ಲೇಖನರೈತರಿಗೆ ಕಳಪೆ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಕೇಂದ್ರದ ಮೇಲೆ ದಾಳಿ, ಪರಿಶೀಲನೆ