Saval TV on YouTube
ಮೈಸೂರು(Mysuru): ಹೊಸ ವರ್ಷದ ಸ್ವಾಗತಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದ್ದು, ಮೈಸೂರಿನಲ್ಲಿ ರಾತ್ರಿ 1 ಗಂಟೆಯವರೆಗೆ ಮಾತ್ರ ಹೊಸ ವರ್ಷ ಆಚರಣೆಗೆ ಅವಕಾಶ ನೀಡಲಾಗಿದೆ.
ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಈ ಕುರಿತು ಮಾಹಿತಿ ನೀಡಿದ್ದು, ಹೊಸ ವರ್ಷಾಚರಣೆಗೆ ರಾತ್ರಿ 1 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿದ್ದು, ಅನಾವಶ್ಯಕವಾಗಿ ಓಡಾಡಿದರೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಾತ್ರಿ 12.30ರೊಳಗೆ ಎಲ್ಲಾ ಪಾರ್ಟಿಗಳು ಮುಗಿಯಬೇಕು. ಮಧ್ಯರಾತ್ರಿ ಒಂದು ಗಂಟೆ ನಂತರ ಅನಾವಶ್ಯಕವಾಗಿ ಓಡಾಡಿದರೇ ಕ್ರಮ ಕೈಗೊಳ್ಳಲಾಗುತ್ತದೆ. 1 ಗಂಟೆ ನಂತರ ನಗರದಲ್ಲಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡಲಾಗುತ್ತದೆ. ಅನುಮತಿ ಪಡೆದ ಹೋಟೆಲ್’ಗಳಿಗೆ 1ರವರೆಗೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.
ಹಾಗೆಯೇ ಸೆಲೆಬ್ರೇಷನ್ ನೆಪದಲ್ಲಿ ಗಲಾಟೆ ಮಾಡಿದರೇ ಕ್ರಮ ಕೈಗೊಳ್ಳುತ್ತೇವೆ. ಚಾಮುಂಡಿಬೆಟ್ಟಕ್ಕೂ ಇಂದು ನಿರ್ಬಂಧ ವಿಧಿಸಲಾಗಿದೆ ಎಂದು ಹೇಳಿದರು.