ಮನೆ ಕಾನೂನು ಆರ್ ಟಿಐ ಅಡಿ ಕೇಳಿದ ಮಾಹಿತಿ ನೀಡದ ತಹಶೀಲ್ದಾರ್ ಗೆ ದಂಡ

ಆರ್ ಟಿಐ ಅಡಿ ಕೇಳಿದ ಮಾಹಿತಿ ನೀಡದ ತಹಶೀಲ್ದಾರ್ ಗೆ ದಂಡ

0

ಮಂಡ್ಯ(Mandya): ಆರ್​ಟಿಐ ಅಡಿ ಮಾಹಿತಿ ಕೋರಿದ ಅರ್ಜಿದಾರನಿಗೆ ಮಾಹಿತಿ ನೀಡದ ಮದ್ದೂರು ತಹಸೀಲ್ದಾರ್ ನರಸಿಂಹಮೂರ್ತಿಗೆ 7,500 ರೂಪಾಯಿ ದಂಡ ವಿಧಿಸಲಾಗಿದೆ.

ಮಾಹಿತಿ ಕೇಳಿ ಆರ್​ಟಿಐ ಮೂಲಕ ನಾರಾಯಣಸ್ವಾಮಿ ಎಂಬುವವರು ಅರ್ಜಿ ಸಲ್ಲಿಸಿದ್ದರು. ನಿಯಮದ ಪ್ರಕಾರ 30 ದಿನದೊಳಗೆ ಅಧಿಕಾರಿಗಳು ಮಾಹಿತಿ ಕೊಟ್ಟಿರಲಿಲ್ಲ.

ಇದರಿಂದ ಬೇಸತ್ತ ಅರ್ಜಿದಾರ ಕರ್ನಾಟಕ ಮಾಹಿತಿ ಆಯೋಗದ‌ ಮೊರೆ ಹೋಗಿದ್ದರು. ಕೊನೆಗೆ ವರ್ಷದ ಬಳಿಕ ಇದು ಹಳೇ ಮಾಹಿತಿ, ಕಡತ ಇಲ್ಲ ಎಂದು ಉತ್ತರ ಬಂದಿತ್ತು. ಈ ಕಡತ ಶಾಶ್ವತ ದಾಖಲೆ ಆಗಿದ್ದರಿಂದ ಮಾಹಿತಿ ನೀಡಬೇಕಿತ್ತು. ಕಡತ ನಿರ್ವಹಣೆ ಮಾಡದ್ದಕ್ಕೆ ಆಯೋಗ ನೋಟಿಸ್ ನೀಡಿತ್ತು. ನೋಟಿಸ್​ಗೆ ಲಿಖಿತ ಉತ್ತರ‌ವನ್ನೂ ಸಲ್ಲಿಸಿರಲಿಲ್ಲ. ಈ ತಪ್ಪಿಗೆ 7,500 ರೂ. ದಂಡ ವಿಧಿಸಿದೆ. ಮಾಸಿಕ‌ ಸಂಬಳದಲ್ಲೇ ದಂಡ ಕಡಿತಗೊಳಿಸುವಂತೆ ಆದೇಶಿಸಿದೆ.

ಹಿಂದಿನ ಲೇಖನಮೇ 25 ರಂದು  ನಂಜನಗೂಡು ಶೀ ಕಂಠೇಶ್ವರ ಸನ್ನಿಧಿಯಲ್ಲಿ ಸಪ್ತಪದಿ ಸಾಮೂಹಿಕ ಸರಳ ವಿವಾಹ
ಮುಂದಿನ ಲೇಖನವಾಚ್‌ ಪ್ರಕರಣವೇನು 300 ಕೋಟಿ ಅವ್ಯವಹಾರವೇ?: ಸಿದ್ದರಾಮಯ್ಯ