ಮನೆ ರಾಜಕೀಯ ಮುತ್ಸದ್ಧಿ ರಾಜಕಾರಣಿ, ಮಾಜಿ ಶಾಸಕ ಡಾ.ಎಚ್.ಡಿ.ಚೌಡಯ್ಯ ನಿಧನ

ಮುತ್ಸದ್ಧಿ ರಾಜಕಾರಣಿ, ಮಾಜಿ ಶಾಸಕ ಡಾ.ಎಚ್.ಡಿ.ಚೌಡಯ್ಯ ನಿಧನ

0

ಮಂಡ್ಯ: ಹಿರಿಯ ಸಹಕಾರಿ ಧುರೀಣ, ಜನಮುಖಿ ಮುತ್ಸದ್ಧಿ ರಾಜಕಾರಣಿ ಮಾಜಿ  ಶಾಸಕ  ಡಾ.ಹೆಚ್.ಡಿ.ಚೌಡಯ್ಯ ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.

94 ವರ್ಷದ ಹಿರಿಯರಾಗಿದ್ದ ಇವರಿಗೆ ವಯೋ ಸಹಜ ಆರೋಗ್ಯ ಸಮಸ್ಯೆಗಳಿದ್ದವು.
ಪಿಇಎಸ್ ಟ್ರಸ್ಟ್ ನ ಮಾಜಿ ಅಧ್ಯಕ್ಷರಾಗಿ, ಹಿರಿಯ ಸಹಕಾರಿ ಧುರೀಣರಾಗಿ, ಕಾವೇರಿ ಹೋರಾಟದ ಮುಂಚೂಣಿ ನಾಯಕರಾಗಿದ್ದರು. 4 ಬಾರಿ ಕೆರಗೋಡು ಕ್ಷೇತ್ರದ ಶಾಸಕರಾಗಿ, 2 ಬಾರಿ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ನಿತ್ಯ ಸಚಿವ ಕೆ.ವಿ.ಶಂಕರಗೌಡರ ಬಳಿಕ ಮಂಡ್ಯದ ಪ್ರತಿಷ್ಟಿತ ಪಿಇಟಿ ಸಂಸ್ಥೆಯ ಅಧ್ಯಕ್ಷರಾಗಿ 31 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ್ದರು.
ಚೌಡಯ್ಯ ಅವರ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ
ನನ್ನ ಆತ್ಮೀಯರೂ, ಹಿತೈಶಿಗಳೂ ಆಗಿದ್ದ ಮಂಡ್ಯದ ಹಿರಿಯ ಮುತ್ಸದ್ದಿ ಎಚ್.ಡಿ.ಚೌಡಯ್ಯ ಅವರ ನಿಧನ ಅತೀವ ದುಃಖದ ಸಂಗತಿ. ಪತ್ನಿಯವರ ಅಗಲಿಕೆ ಬಳಿಕ ಬಹಳ ನೊಂದಿದ್ದರು. ಈ ನೋವು ಇವರ ಆರೋಗ್ಯವನ್ನು ಹದಗೆಡಿಸಿತ್ತು. ಶತಾಯುಶಿ ಆಗುತ್ತಾರೆನ್ನುವ ನನ್ನ ನಿರೀಕ್ಷೆಯನ್ನು ನಿರಾಸೆಗೊಳಿಸಿ ನಮ್ಮನ್ನು ಅಗಲಿದ್ದಾರೆ.
ಇವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕುಟುಂಬ ವರ್ಗ ಮತ್ತು ಬಂಧುಗಳಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಚೌಡಯ್ಯನವರು ಮಂಡ್ಯದ ಸ್ವಾಭಿಮಾನಿ ರಾಜಕಾರಣದ ಪ್ರತೀಕವಾಗಿದ್ದರು. ಇವರ ಅಗಲಿಕೆಯಿಂದ ನನ್ನ ಸಹೃದಯಿ ಹಿತೈಶಿಯೊಬ್ಬರನ್ನು ಕಳೆದುಕೊಂಡಿದ್ದೀನಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಿಂದಿನ ಲೇಖನಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ನಿಧನ
ಮುಂದಿನ ಲೇಖನಬಾಲಿವುಡ್ ನ ಹಿರಿಯ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ನಿಧನ