ಮುಂಬೈ: 2022ರ ಐಪಿಎಲ್ಗೆ ನೂತನವಾಗಿ ಸೇರಿಕೊಂಡಿರುವ ಅಹ್ಮದಾಬಾದ್ ಫ್ರಾಂಚೈಸಿ ಸೋಮವಾರ ತಮ್ಮ ತಂಡಕ್ಕೆ ‘ಅಹ್ಮದಾಬಾದ್ ಟೈಟನ್ಸ್’ ಎಂದು ಅಧಿಕೃತ ಹೆಸರನ್ನು ಖಚಿತಪಡಿಸಿದೆ.
ಕಳೆದ ಅಕ್ಟೋಬರ್ನಲ್ಲಿ ನಡೆದ ಬಿಡ್ನಲ್ಲಿ ಸಿವಿಸಿ ಕ್ಯಾಪಿಟಲ್ಸ್ ಅಹ್ಮದಾಬಾದ್ ಫ್ರಾಂಚೈಸಿಯನ್ನು ಬರೋಬರಿ 5625 ಕೋಟಿ ರೂ. ನೀಡಿ ಅಹ್ಮದಾಬಾದ್ ತಂಡವನ್ನು ಖರೀದಿಸಿತ್ತು. ಈಗಾಗಲೇ ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯರನ್ನು ನಾಯಕನಾಗಿ ನೇಮಿಸಿರುವ ಫ್ರಾಂಚೈಸಿ, ಆಫ್ಘಾನಿಸ್ತಾನ ಸ್ಪಿನ್ನರ್ ಮತ್ತು ಭಾರತದ ಉದಯೋನ್ಮುಖ ಬ್ಯಾಟರ್ ಶುಬ್ಮನ್ ಗಿಲ್ರನ್ನು ನೇರ ಡ್ರಾಫ್ಟ್ ಮೂಲಕ ತಂಡಕ್ಕೆ ಸೇರಿಸಿಕೊಂಡಿದೆ.
ತಂಡ ಖರೀದಿಸಿದ 4 ತಿಂಗಳ ಬಳಿಕ ಫ್ರಾಂಚೈಸಿ ತನ್ನ ಅಹ್ಮದಾಬಾದ್ ಟೈಟನ್ಸ್ ಎಂಬ ಅಧಿಕೃತ ಹೆಸರನ್ನು ಪ್ರಕಟಿಸಿದೆ. ಈಗಾಗಲೇ ಲಖನೌ ತಂಡ ಕೂಡ ಲಖನೌ ಸೂಪರ್ ಜೈಂಟ್ಸ್ ಎಂದು ನಾಮಕರಣ ಮಾಡಿತ್ತು.ಆರ್ಪಿಎಸ್ಜಿ ಗ್ರೂಫ್ 7090 ಕೋಟಿ ರೂ.ಗಳಿಗೆ ತಂಡವನ್ನು ಖರೀದಿ ಮಾಡಿದೆ. ಕನ್ನಡಿಗ ರಾಹುಲ್(17 ಕೋಟಿ) ನಾಯಕನನ್ನಾಗಿ ನೇಮಕ ಮಾಡಿದ್ದಾರೆ. ಆಸ್ಟ್ರೇಲಿಯಾದ ಮಾರ್ಕಸ್ ಸ್ಟೋಯ್ನಿಸ್ ಮತ್ತು ಯುವ ಸ್ಪಿನ್ನರ್ ರವಿ ಬಿಷ್ಣೋಯ್ರನ್ನು ಡ್ರಾಫ್ಟ್ ಮಾಡಿಕೊಂಡಿದೆ.
ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಹರಾಜಿನಲ್ಲಿರುವ 590 ಆಟಗಾರರಲ್ಲಿ 10 ಫ್ರಾಂಚೈಸಿಗಳು ತಲಾ 217 ಆಟಗಾರರನ್ನು ಖರೀದಿಸಲಿದ್ದಾರೆ.