ಮನೆ ಕ್ರೀಡೆ ಐಪಿಎಲ್​ 2022 : ತಂಡದ ಅಧಿಕೃತ ಹೆಸರನ್ನು ಖಚಿತಪಡಿಸಿದ ಅಹ್ಮದಾಬಾದ್​ ಫ್ರಾಂಚೈಸಿ

ಐಪಿಎಲ್​ 2022 : ತಂಡದ ಅಧಿಕೃತ ಹೆಸರನ್ನು ಖಚಿತಪಡಿಸಿದ ಅಹ್ಮದಾಬಾದ್​ ಫ್ರಾಂಚೈಸಿ

0

ಮುಂಬೈ: 2022ರ ಐಪಿಎಲ್​ಗೆ ನೂತನವಾಗಿ ಸೇರಿಕೊಂಡಿರುವ ಅಹ್ಮದಾಬಾದ್​ ಫ್ರಾಂಚೈಸಿ ಸೋಮವಾರ ತಮ್ಮ ತಂಡಕ್ಕೆ ‘ಅಹ್ಮದಾಬಾದ್​ ಟೈಟನ್ಸ್’​ ಎಂದು ಅಧಿಕೃತ ಹೆಸರನ್ನು ಖಚಿತಪಡಿಸಿದೆ.

ಕಳೆದ ಅಕ್ಟೋಬರ್​ನಲ್ಲಿ ನಡೆದ ಬಿಡ್​​ನಲ್ಲಿ ಸಿವಿಸಿ ಕ್ಯಾಪಿಟಲ್ಸ್ ಅಹ್ಮದಾಬಾದ್​ ಫ್ರಾಂಚೈಸಿಯನ್ನು ಬರೋಬರಿ 5625 ಕೋಟಿ ರೂ. ನೀಡಿ ಅಹ್ಮದಾಬಾದ್​ ತಂಡವನ್ನು ಖರೀದಿಸಿತ್ತು. ಈಗಾಗಲೇ ಭಾರತದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯರನ್ನು ನಾಯಕನಾಗಿ ನೇಮಿಸಿರುವ ಫ್ರಾಂಚೈಸಿ, ಆಫ್ಘಾನಿಸ್ತಾನ ಸ್ಪಿನ್ನರ್​ ಮತ್ತು ಭಾರತದ ಉದಯೋನ್ಮುಖ ಬ್ಯಾಟರ್​ ಶುಬ್ಮನ್​ ಗಿಲ್​ರನ್ನು ನೇರ ಡ್ರಾಫ್ಟ್​ ಮೂಲಕ ತಂಡಕ್ಕೆ ಸೇರಿಸಿಕೊಂಡಿದೆ.

ತಂಡ ಖರೀದಿಸಿದ 4 ತಿಂಗಳ ಬಳಿಕ ಫ್ರಾಂಚೈಸಿ ತನ್ನ ಅಹ್ಮದಾಬಾದ್​ ಟೈಟನ್ಸ್​ ಎಂಬ ಅಧಿಕೃತ ಹೆಸರನ್ನು ಪ್ರಕಟಿಸಿದೆ. ಈಗಾಗಲೇ ಲಖನೌ ತಂಡ ಕೂಡ ಲಖನೌ ಸೂಪರ್ ಜೈಂಟ್ಸ್​ ಎಂದು ನಾಮಕರಣ ಮಾಡಿತ್ತು.ಆರ್​ಪಿಎಸ್​ಜಿ ಗ್ರೂಫ್​ 7090 ಕೋಟಿ ರೂ.ಗಳಿಗೆ ತಂಡವನ್ನು ಖರೀದಿ ಮಾಡಿದೆ. ಕನ್ನಡಿಗ ರಾಹುಲ್​(17 ಕೋಟಿ) ನಾಯಕನನ್ನಾಗಿ ನೇಮಕ ಮಾಡಿದ್ದಾರೆ. ಆಸ್ಟ್ರೇಲಿಯಾದ ಮಾರ್ಕಸ್​ ಸ್ಟೋಯ್ನಿಸ್​ ಮತ್ತು ಯುವ ಸ್ಪಿನ್ನರ್​ ರವಿ ಬಿಷ್ಣೋಯ್​ರನ್ನು ಡ್ರಾಫ್ಟ್​ ಮಾಡಿಕೊಂಡಿದೆ.

ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಹರಾಜಿನಲ್ಲಿರುವ 590 ಆಟಗಾರರಲ್ಲಿ 10 ಫ್ರಾಂಚೈಸಿಗಳು ತಲಾ 217 ಆಟಗಾರರನ್ನು ಖರೀದಿಸಲಿದ್ದಾರೆ.

ಹಿಂದಿನ ಲೇಖನಸಿದ್ದರಾಮಯ್ಯರಿಂದ ಸಿ.ಎಂ.ಇಬ್ರಾಹಿಂ ಮನವೊಲಿಕೆ ಯತ್ನ
ಮುಂದಿನ ಲೇಖನಜೆಡಿಎಸ್ ಬಿಜೆಪಿಯನ್ನು ಸ್ಪಷ್ಟವಾಗಿ ವಿರೋಧಿಸುತ್ತಿಲ್ಲ: ವೈಎಸ್ ವಿ ದತ್ತ