ಮನೆ ಸ್ಥಳೀಯ ಮೈಸೂರು: ಮಾರಾಟ ಮಳಿಗೆಗಳಿಗೆ ಅಧಿಕಾರಿಗಳ ದಿಢೀರ್ ಭೇಟಿ

ಮೈಸೂರು: ಮಾರಾಟ ಮಳಿಗೆಗಳಿಗೆ ಅಧಿಕಾರಿಗಳ ದಿಢೀರ್ ಭೇಟಿ

0

ಮೈಸೂರು:  ಸಹಾಯಕ ಕೃಷಿ ನಿರ್ದೇಶಕರು/ಕೃಷಿ ಅಧಿಕಾರಿ ಹಾಗೂ ರಸಗೊಬ್ಬರ, ಬಿತ್ತನೆ ಬೀಜ ಮತ್ತು ಪೀಡೆನಾಶಕ ಪರಿವೀಕ್ಷಕರು  ಇಂದು ತಾಲ್ಲೂಕಿನಾದ್ಯಂತ ವಿವಿಧ ಪರಿಕರ ಮಾರಾಟಗಾರರ ಮಳಿಗೆಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದರು.

Join Our Whatsapp Group

ಇದೇ ಸಂದರ್ಭದಲ್ಲಿ ಆಯ್ದ ರಸಗೊಬ್ಬರ, ಪೀಡೆನಾಶಕ ಮತ್ತು ಬಿತ್ತನೆ ಬೀಜಗಳ ಮಾದರಿಗಳನ್ನು ತೆಗೆದು ಪ್ರಯೋಗಾಲಯಕ್ಕೆ ವಿಶ್ಲೇಷಣೆಗಾಗಿ ಕಳುಹಿಸಿದರು. ಪರಿಕರ ಮಾರಾಟಗಾರಿಗೆ ಈ ಸಂಬoಧ ಕ್ರಮಬದ್ಧವಾಗಿ ವ್ಯವಹರಿಸಲು ನಿರ್ದೇಶಿಸಿದ್ದು, ತಪ್ಪಿದ್ದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದೆಂಬ ಎಚ್ಚರಿಕೆಯನ್ನು ನೀದಿದರು.

 ರೈತರು ಯಾವುದೇ ಕೃಷಿ ಪರಿಕರಗಳನ್ನು ಖರೀದಿಸಿದಾಗ ರಶೀದಿಯನ್ನು ತಪ್ಪದೇ ಪಡೆಯಬೇಕೆಂದು ತಿಳಿಸಿದರು. ಹೆಚ್ಚಿನ ಮಾಹಿತಿಗೆ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಅಥವಾ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಬಹುದು ಎಂದು ಸಹಾಯಕ ಕೃಷಿ ನಿರ್ದೇಶಕರಾದ ಜಯರಾಮ.ಬಿ.ಡಿ ಅವರು ತಿಳಿಸಿದರು.

ಹಿಂದಿನ ಲೇಖನಅತಿಯಾದ ಮದ್ಯ ಸೇವನೆ: ಆದಿವಾಸಿ ಯುವಕ ಸಾವು
ಮುಂದಿನ ಲೇಖನನಾಗರಹೊಳೆಯಲ್ಲಿ ಗುಂಡಿಕ್ಕಿ ಅಪರೂಪದ ಕೂರ ಬೇಟೆಯಾಡಿದ್ದ ಇಬ್ಬರ ಬಂಧನ; ಓರ್ವ ಪರಾರಿ