ಮನೆ ಸುದ್ದಿ ಜಾಲ ಕಾಶ್ಮೀರದಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಪತ್ತೆ – ಡಿಜಿಎಂಓ‌ಗಳ ಸಭೆಯಲ್ಲಿ ಪಾಕ್‌ಗೆ ಖಡಕ್ ಎಚ್ಚರಿಕೆ..!

ಕಾಶ್ಮೀರದಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಪತ್ತೆ – ಡಿಜಿಎಂಓ‌ಗಳ ಸಭೆಯಲ್ಲಿ ಪಾಕ್‌ಗೆ ಖಡಕ್ ಎಚ್ಚರಿಕೆ..!

0

ನವದೆಹಲಿ : ಕಾಶ್ಮೀರದ ನೌಶೇರಾ-ರಾಜೌರಿ ವಲಯದಲ್ಲಿ ಇತ್ತಿಚೇಗೆ ಪಾಕಿಸ್ತಾನದ ಡ್ರೋನ್‌ಗಳು ಪತ್ತೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಡಿಜಿಎಂಓ‌ಗಳ ಮಟ್ಟದಲ್ಲಿನ ಸಭೆಯಲ್ಲಿ ಭಾರತ ಆಕ್ಷೇಪ ವ್ಯಕ್ತಪಸಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ದ್ವಿವೇದಿ, ಪಾಕಿಸ್ತಾನದಿಂದ ಬರುತ್ತಿರುವ ಡ್ರೋನ್ ಚಟುವಟಿಕೆಗಳ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದರು. ಇತ್ತೀಚಿಗೆ ಜಮ್ಮು-ಕಾಶ್ಮೀರದ ನೌಶೇರಾ-ರಾಜೌರಿ ಸೆಕ್ಟರ್‌ನಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಕಂಡುಬಂದಿದ್ದಕ್ಕೆ ಸಂಬಂಧಿಸಿದಂತೆ ಡಿಜಿಎಂಓಗಳ ಸಭೆಯಲ್ಲಿ ಆಕ್ಷೇಪಗಳನ್ನು ತಿಳಿಸಲಾಯಿತು ಎಂದು ಹೇಳಿದರು.

ಭಾರತೀಯ ಸೇನೆಯು ಕ್ಷಿಪಣಿ ಮತ್ತು ರಾಕೆಟ್ ಪಡೆಯನ್ನು ಸಿದ್ಧಪಡಿಸುತ್ತಿದೆ. ನಮ್ಮ ಭದ್ರತಾ ಪಡೆಗಳು ಮೇ 10 ರಿಂದ 31 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿರುವುದರಿಂದ ಪಶ್ಚಿಮ ಫ್ರಂಟ್ ಮತ್ತು ಜಮ್ಮು ಮತ್ತು ಕಾಶ್ಮೀರ ಸೂಕ್ಷ್ಮವಾಗಿದ್ದರೂ ಸಂಪೂರ್ಣವಾಗಿ ನಿಯಂತ್ರಿಸಲ್ಪಟ್ಟಿವೆ ಎಂದು ಹೇಳಿದರು. 2025 ರಲ್ಲಿ ಭದ್ರತಾ ಪಡೆಗಳು 31 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿವೆ. ಅವರಲ್ಲಿ ಶೇ. 65 ರಷ್ಟು ಜನರು ಪಾಕಿಸ್ತಾನದಿಂದ ಬಂದವರು. ಇದರಲ್ಲಿ ಆಪರೇಷನ್ ಮಹಾದೇವ್‌ನಲ್ಲಿ ಪಹಲ್ಗಾಮ್ ದಾಳಿಯ ಮೂವರು ಅಪರಾಧಿಗಳನ್ನು ತಟಸ್ಥಗೊಳಿಸಲಾಗಿದೆ ಎಂದು ತಿಳಿಸಿದರು.

ಈ ಸ್ಥಳೀಯ ಭಯೋತ್ಪಾದಕರ ಸಂಖ್ಯೆ ಒಂದೇ ಅಂಕೆಗೆ ಇಳಿದಿದೆ. ನೇಮಕಾತಿ ಬಹುತೇಕ ಕಣ್ಮರೆಯಾಗಿದೆ. 2025 ರಲ್ಲಿ ಕೇವಲ ಎರಡು ಪ್ರಕರಣಗಳು ವರದಿಯಾಗಿವೆ. ಎಂಟು ಭಯೋತ್ಪಾದಕ ಶಿಬಿರಗಳು ಇನ್ನೂ ಸಕ್ರಿಯವಾಗಿವೆ. ಆರು ಎಲ್‌ಒಸಿಯತ್ತ ಮುಖ ಮಾಡಿವೆ. ಎರಡು ಅಂತರರಾಷ್ಟ್ರೀಯ ಗಡಿಯಲ್ಲಿವೆ. ಅವರು (ಪಾಕಿಸ್ತಾನಿ ಪಡೆಗಳು) ಏನಾದರೂ ಪ್ರಯತ್ನಿಸಿದರೆ, ಅದರ ಆಧಾರದ ಮೇಲೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಸೇನಾ ಮುಖ್ಯಸ್ಥರು ಹೇಳಿದರು.

ತ್ವರಿತ ಅಭಿವೃದ್ಧಿ, ಪ್ರವಾಸೋದ್ಯಮದ ಪುನರುಜ್ಜೀವನ ಮತ್ತು ನಾಲ್ಕು ಲಕ್ಷಕ್ಕೂ ಹೆಚ್ಚು ಯಾತ್ರಿಕರನ್ನು ಸ್ವಾಗತಿಸಿದ ಶಾಂತಿಯುತ ಶ್ರೀ ಅಮರನಾಥ ಯಾತ್ರೆಯೊಂದಿಗೆ ಈ ಪ್ರದೇಶದಲ್ಲಿ ಸಕಾರಾತ್ಮಕ ಬದಲಾವಣೆ ಗೋಚರಿಸುತ್ತಿದೆ. ಇದು ಐದು ವರ್ಷಗಳ ಸರಾಸರಿಯನ್ನು ಮೀರಿದೆ ಎಂದು ಅವರು ಹೇಳಿದರು. ‘ಭಯೋತ್ಪಾದನೆಯಿಂದ ಪ್ರವಾಸೋದ್ಯಮ’ಕ್ಕೆ ಬದಲಾವಣೆ ಸ್ಥಿರವಾಗಿ ಕಾರ್ಯರೂಪಕ್ಕೆ ಬರುತ್ತಿದೆ ಎಂದು ಹೇಳಿದರು.