ಮನೆ ರಾಜ್ಯ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗಾಗಿ ಸತ್ಯಾಗ್ರಹ: ನಾನು ಪಾಲ್ಗೊಳ್ಳುತ್ತೇನೆಂದ ಶ್ರೀಸುಬುಧೇಂದ್ರ ತೀರ್ಥರು

ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗಾಗಿ ಸತ್ಯಾಗ್ರಹ: ನಾನು ಪಾಲ್ಗೊಳ್ಳುತ್ತೇನೆಂದ ಶ್ರೀಸುಬುಧೇಂದ್ರ ತೀರ್ಥರು

0

ರಾಯಚೂರು: ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಬೇಕು ಎಂಬ ಬೇಡಿಕೆಯನ್ನು ಇಟ್ಟುಕೊಂಡು ನಡೆಯುತ್ತಿರುವ ಸತ್ಯಾಗ್ರಹದಲ್ಲಿ ನಾನು ಪಾಲ್ಗೊಳ್ಳುತ್ತೇನೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಹೇಳಿದರು.

ರಾಯರ ಪಟ್ಟಾಭಿಷೇಕ ನಿಮಿತ್ತ ಬುಧವಾರ ಮಂತ್ರಾಲಯದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.

ಉತ್ತರ ಕರ್ನಾಟಕದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆಯಾಗಿರುವ  ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಬೇಕೆಂಬ ಬೇಡಿಕೆಯನ್ನಿಟ್ಟುಕೊಂಡು 284 ದಿನಗಳಿಂದ ನಡೆಸುತ್ತಿರುವ ಧರಣಿಗೆ ಈಗಾಗಲೇ ಬೆಂಬಲ ಸೂಚಿಸಲಾಗಿತ್ತು. ಆದರೆ ಸರ್ಕಾರ ಏಮ್ಸ್ ಮಾದರಿ ಮಾಡುತ್ತೇವೆ ಎಂದು ಹೇಳಿರುವುದನ್ನು ಒಪ್ಪಲಾಗದು. ಈಗಾಗಲೇ ಐಐಟಿ ಬೇರೆ ಜಿಲ್ಲೆಗೆ ಕೊಡಲಾಗಿದೆ. ಈಗ ಆ ರೀತಿ ಸರ್ಕಾರ ಮಾಡಬಾರದು. ಕಡು ಬಡವರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಯಚೂರು ಜಿಲ್ಲೆಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಹೇಳಿದರು.

ಏಮ್ಸ್ ಬೇಡಿಕೆಗೆ ಸಂಬಂಧಿಸಿ ಕರ್ನಾಟಕ ಮುಖ್ಯಮಂತ್ರಿ ಅವರಿಗೆ ಒತ್ತಾಯಿಸುವ ಕೆಲಸ ಮಾಡಲಾಗುವುದು ಎಂದರು.

ಹಿಂದಿನ ಲೇಖನಮಾಂಸದೂಟ ಸೇವಿಸಿ ನಾಗಬನಕ್ಕೆ ಭೇಟಿ: ಸಿಟಿ ರವಿ ವಿರುದ್ಧ ಆಕ್ರೋಶ
ಮುಂದಿನ ಲೇಖನನೇಪಾಳದಲ್ಲಿ 4.8 ತೀವ್ರತೆ ಭೂಕಂಪ