ಮನೆ ರಾಜಕೀಯ ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿಗೆ ಸೇರಿಸಬೇಕೆಂಬ ಹೋರಾಟಕ್ಕೆ ಜಯ ಸಿಗಲಿದೆ: ಸಿಸಿ ಪಾಟೀಲ್

ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿಗೆ ಸೇರಿಸಬೇಕೆಂಬ ಹೋರಾಟಕ್ಕೆ ಜಯ ಸಿಗಲಿದೆ: ಸಿಸಿ ಪಾಟೀಲ್

0

ಬೆಂಗಳೂರು(Bengaluru): ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿಗೆ ಸೇರಿಸಬೇಕೆಂದು ಜಯಬಸವ ಮೃತ್ಯುಂಜಯ ಸ್ವಾಮೀಜಿ ನಡೆಸುತ್ತಿರುವ ಹೋರಾಟಕ್ಕೆ ಜಯ ಸಿಗಲಿದೆ ಎಂಬ ವಿಶ್ವಾಸವನ್ನು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯದ ಬೇಡಿಕೆ ಬಗ್ಗೆ ಮುಖ್ಯಮಂತ್ರಿ ಸಕಾರಾತ್ಮಕ ನಿಲುವು ಹೊಂದಿದ್ದು, ಹಂತ ಹಂತವಾಗಿ ಪೂರಕ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ವಿಚಾರದಲ್ಲಿ ಸಿಎಂ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಪಂಚಮಸಾಲಿಯಲ್ಲೂ ಸಾಕಷ್ಟು ಬಡವರಿದ್ದಾರೆ. ಹೀಗಾಗಿ 2ಎ ಮೀಸಲಾತಿ ನೀಡುವ ಬಗ್ಗೆ ಪೂರಕ ವಾತಾವರಣ ನಿರ್ಮಾಣವಾಗುತ್ತಿದೆ ಎಂದರು.
ಒಂದು ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಲಾಗುತ್ತಿದೆ, ಇನ್ನೊಂದು ಸಮುದಾಯವನ್ನು ಕಡೆಗಣಿಸಲಾಗುತ್ತದೆ ಎಂಬ ಮನೋಭಾವನೆ ಬೇಡ. ಆ ಸಮುದಾಯಕ್ಕೆ ನೀಡಿರುವುದನ್ನು ಸ್ವಾಗತಿಸೋಣ, ನಮ್ಮ ಬೇಡಿಕೆಯನ್ನು ಇಡೋಣ. ಹೀಗಾಗಿ ಸರ್ಕಾರದ ಜೊತೆ ಸಹಾನುಭೂತಿಯಿಂದ ವರ್ತಿಸಬೇಕು ಎಂದು ಮನವಿ ಮಾಡಿದರು.
ಶ್ರೀಗಳು ಹಾಗೂ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಸರ್ಕಾರದ ತೆರೆದ ಮನಸ್ಸಿನಿಂದ ಹೆಜ್ಜೆ ಇಡುತ್ತಿರುವ ಶ್ರೀಗಳ ಬಾಯಿಯಿಂದ ಅಂತಹ ಹೇಳಿಕೆ ಬರಬಾರದಿತ್ತು ಎಂದು ಹೇಳಿದರು.

ಹಿಂದಿನ ಲೇಖನಮದುವೆಯಾದ ನಂತರ ಪುರುಷರು ತಮ್ಮ ಈ ಅಭ್ಯಾಸಗಳನ್ನೆಲ್ಲಾ ಬದಲಾಯಿಸಲೇ ಬೇಕು
ಮುಂದಿನ ಲೇಖನಸದೃಢ ಪತಿಯು ದೈಹಿಕ ದುಡಿಮೆಯನ್ನು ಮಾಡಿಯಾದರೂ ಪತ್ನಿ, ಮಗು ಸಲಹುವುದು ಕರ್ತವ್ಯ: ಸುಪ್ರೀಂ ಕೋರ್ಟ್