ಮನೆ ಆರೋಗ್ಯ ಪಪ್ಪಾಯಿ: ಸಕತ್ ಆರೋಗ್ಯಕಾರಿ ಹಣ್ಣಿದು!

ಪಪ್ಪಾಯಿ: ಸಕತ್ ಆರೋಗ್ಯಕಾರಿ ಹಣ್ಣಿದು!

0

ಪರಂಗಿ ಹಣ್ಣು ಅಥವಾ ಪಪ್ಪಾಯಿ ಹಣ್ಣು, ವರ್ಷ ಪೂರ್ತಿ ಸಿಗುವ ಹಣ್ಣುಗಳ ಲೀಸ್ಟ್ಗೆ ಸೇರುತ್ತದೆ. ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ನೈಸರ್ಗಿಕವಾದ ಸಿಹಿ ಅಂಶವನ್ನು ಒಳಗೊಂಡಿರುವ ಈ ಹಣ್ಣನ್ನು ನೆನೆಸಿಕೊಂಡಾಗಲೇ ಬಾಯಿಯಲ್ಲಿ ನೀರು ಬರಲು ಶುರುವಾಗುತ್ತದೆ! ಯಾಕೆಂದರೆ ಈ ಅದ್ಭುತ ರುಚಿ ಅಷ್ಟರ ಮಟ್ಟಿಗೆ ನಮಗೆ ಹಿಡಿಸಿರುತ್ತದೆ

ಇನ್ನು ತನ್ನಲ್ಲಿ ಅಧಿಕ ಪ್ರಮಾಣದಲ್ಲಿ, ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ಈ ಹಣ್ಣು ಆರೋಗ್ಯದ ಹಲವಾರು ಸಮಸ್ಯೆಗಳನ್ನು ದೂರ ಮಾಡುವ ಎಲ್ಲಾ ಗುಣಲಕ್ಷಣಗಳು, ಕೂಡ ಈ ಹಣ್ಣಿ ನಲ್ಲಿ ಕಂಡು ಬರುತ್ತದೆ.

ಉದಾಹರಣೆಗೆ ಹೃದಯದ ಕಾಯಿಲೆಯನ್ನು ದೂರ ಮಾಡುವುದು, ಕ್ಯಾನ್ಸರ್ ಸಮಸ್ಯೆ ನಮ್ಮ ಹತ್ತಿರನೂ ಬರದೇ ಇರುವ ಹಾಗೆ ನೋಡಿಕೊಳ್ಳುವುದು, ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುವುದು, ಅದೇರೀತಿಯಾಗಿ, ಮಿತವಾಗಿ ಸೇವನೆ ಮಾಡಿದರೆ, ಸಕ್ಕರೆ ಕಾಯಿಲೆಯನ್ನು ಕೂಡ ನಿಯಂತ್ರಣ ಮಾಡಲು ಸಹಾಯ ಮಾಡುವುದು.

ಪ್ರಯೋಜನಗಳು

ಹೊಟ್ಟೆ ಉಬ್ಬರದ ಸಮಸ್ಯೆ

•       ಹೊಟ್ಟೆ ತುಂಬಾ ಊಟ ಮಾಡಿದ ಬಳಿಕ, ಸಾಮಾನ್ಯವಾಗಿ ಹೆಚ್ಚಿನವರುಗೆ ಎದುರಾಗುವ ಸಮಸ್ಯೆ ಎಂದರೆ, ಅದು ಹೊಟ್ಟೆ ಉಬ್ಬರ! ಯಾಕೆಂದ್ರೆ ಹೊಟ್ಟೆ ತುಂಬಾ ಊಟದ ನಂತರ ಹೊಟ್ಟೆಯಲ್ಲಿ ಅತೀವವಾದ ಅನಿಲ ಉತ್ಪಾದನೆ ಸಮಸ್ಯೆ ಎದುರಾಗುವುದರಿಂದ, ಈ ಸಮಸ್ಯೆ ಕಂಡು ಬರುತ್ತದೆ.

•       ಇಂತಹ ಸಂದರ್ಭದಲ್ಲಿ, ಮಿತವಾಗಿ ಪಪ್ಪಾಯಿ ಹಣ್ಣನ್ನು ಸೇವನೆ ಮಾಡುವುದರಿಂದ, ಈ ಸಮಸ್ಯೆ ಯಿಂದ ಪರಿಹಾರ ಕಾರಣಬಹುದು.

•       ಇದಕ್ಕೆ ಪ್ರಮುಖ ಕಾರಣ ಈ ಹಣ್ಣಿನಲ್ಲಿ ನೀರಿನಾಂಶ ಹಾಗೂ ನಾರಿನಾಂಶ ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ, ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಉತ್ತಮಗೊಳಿಸಿ,ಹೊಟ್ಟೆ ಉಬ್ಬರದ ಸಮಸ್ಯೆಯನ್ನು ದೂರ ಮಾಡುತ್ತದೆ.

ತ್ವಚೆಯ ಕಾಂತಿಗೆ

•       ಇನ್ನು ಈ ಹಣ್ಣಿನಲ್ಲಿ ವಿಟಮಿನ್ ಎ ಅಂಶ ಹೆಚ್ಚಾಗಿ ಕಂಡುಬರುತ್ತದೆ. ಇವು ನೈಸರ್ಗಿಕವಾಗಿ ಚರ್ಮದ ಕಾಂತಿಯನ್ನು ಹೆಚ್ಚು ಮಾಡುವಲ್ಲಿ ಸಹಾಯಕ್ಕೆ ಬರುತ್ತದೆ. ಇನ್ನು ಈ ಹಣ್ಣಿನಲ್ಲಿ ಆಂಟಿ-ಆಕ್ಸಿಡೆಂಟ್ ಪ್ರಮಾಣ ಕೂಡ ಅಧಿಕ ಪ್ರಮಾಣದಲ್ಲಿ ಸಿಗುವುದರಿಂದ ತ್ವಚೆಯ ಕಾಂತಿಯನ್ನು ಹೆಚ್ಚಿ ಸುವಲ್ಲಿ ಸಹಾಯಕ್ಕೆ ಬರುತ್ತದೆ.

•       ಬಹುಮುಖ್ಯವಾಗಿ ಈ ಹಣ್ಣಿನಲ್ಲಿ ಸಿಗುವ ಲೈಕೋಪಿನ್ ಎನ್ನುವ ಸಂಯುಕ್ತ ಅಂಶ, ಸಣ್ಣ ವಯಸ್ಸಿ ನಲ್ಲಿ ಮುಖದ ಮೇಲೆ ಕಂಡು ಬರುವ ಸುಕ್ಕು, ನೆರಿಗೆ, ಗೆರೆಗಳು ದೂರ ಮಾಡುವುದರ ಜೊತೆಗೆ ಸದಾ ಯೌವ್ವನವನ್ನು ಕಾಯ್ದುಕೊಳ್ಳುವ ಹಾಗೆ ಮಾಡುತ್ತದೆ.

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ಮೂಸಂಬಿ ಹಾಗೂ ನಿಂಬೆ ಹಣ್ಣಿನಲ್ಲಿ ಸಿಗುವಷ್ಟೇ ವಿಟಮಿನ್ ಸಿ ಅಂಶ ಪಪ್ಪಾಯಿ ಹಣ್ಣಿನಲ್ಲಿಯೂ ಕೂಡ ಕಂಡು ಬರುತ್ತದೆ. ಹೀಗಾಗಿ ಈ ಹಣ್ಣನ್ನು ಮಿತವಾಗಿ ಸೇವನೆ ಮಾಡು ವುದರಿಂದ, ದೇಹದ ರೋಗ ನಿರೋಧಕಶಕ್ತಿ ಹೆಚ್ಚಾಗುವುದು ಮಾತ್ರವಲ್ಲದೆ, ದೇಹಕ್ಕೆ ಎದುರಾಗುವ ಬಹುತೇಕ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು.

ಸಂಧಿವಾತದ ಸಮಸ್ಯೆ ದೂರವಾಗುತ್ತದೆ

•       ಈಗಾಗಲೇ ಹೇಳಿದ ಹಾಗೆ ಈ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಆಂಟಿ ಇನ್ಫಾಮೇಟರಿ ಗುಣ ಲಕ್ಷಣ ಗಳು ಹೆಚ್ಚಾಗಿ ಕಂಡುಬರುತ್ತದೆ. ಹೇಗಾಗಿ ಈ ಹಣ್ಣನ್ನು ಮಿತವಾಗಿ ಸೇವನೆ ಮಾಡುವುದರಿಂದ, ಸಂಧಿವಾತದ ಸಮಸ್ಯೆ ಬಹುಬೇಗನೇ ಕಡಿಮೆ ಆಗುತ್ತಾ ಬರುತ್ತದೆ.

•       ಒಂದು ಅಧ್ಯಯನದಲ್ಲಿ ಹೇಳಿರುವ ಪ್ರಕಾರ, ಯಾರು ವಿಟಮಿನ್ ಸಿ ಅಂಶ ಕಡಿಮೆ ಇರುವ ಹಣ್ಣು-ತರಕಾರಿಗಳನ್ನು ಸೇವನೆ ಮಾಡುತ್ತಾರೆಯೋ, ಅವರಿಗೆ ಮುಂಬರುವ ದಿನಗಳಲ್ಲಿ ಮೂಳೆಗಳಿಗೆ ಸಂಬಂಧ ಪಟ್ಟ ಸಮಸ್ಯೆಗಳು ಅಂದರೆ ಸಂಧಿವಾತದಂತಹ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಹೇಳಿದ್ದಾರೆ.

ಸಣ್ಣ ಆಗಲು..

ದಪ್ಪ ಇರುವವರು ಸಣ್ಣ ಆಗಲು, ಪ್ರತಿದಿನ ಮಧ್ಯಾಹ್ನ ಊಟ ಆದ ಮೇಲೆ, ಮಿತವಾಗಿ ಈ ಹಣ್ಣನ್ನು ಸೇವನೆ ಮಾಡುವುದರಿಂದ, ದೇಹದ ತೂಕವನ್ನು ಇಳಿಸಿಕೊಳ್ಳಬಹುದು. ಪ್ರಮುಖವಾಗಿ ಈ ಹಣ್ಣಿನಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಅಂಶಗಳು ಸಿಗುವುದರ ಜೊತೆಗೆ ನಾರಿನ ಅಂಶ ಹೆಚ್ಚು ಸಿಗುವುದ ರಿಂದ, ದೇಹದ ತೂಕ ಇಳಿಸುವವರಿಗೆ ನೆರವು ನೀಡುತ್ತದೆ.

ಹಿಂದಿನ ಲೇಖನಜಮ್ಮು-ಕಾಶ್ಮೀರ ಕ್ಷೇತ್ರಗಳ ಮರುವಿನ್ಯಾಸ ವಿರೋಧಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಜಾಗೊಳಿಸಿದ ಸುಪ್ರೀಂಕೋರ್ಟ್
ಮುಂದಿನ ಲೇಖನಮೈಸೂರು-ಕುಶಾಲನಗರ ಹೆದ್ದಾರಿ: ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ