ಸ್ಟ್ರೋಕ್ ( ಪಾರ್ಶ್ವವಾಯು)ಉಂಟಾಗುವ ರೀತಿ
★ ಪಾರ್ಶ್ವವಾಯು ಈ ಕೆಳಗಿನ ಪರಿಸ್ಥಿತಿಗಳಲ್ಲಿ ಉಂಟಾಗುತ್ತದೆ.
★ ಸೆರೆಬ್ರಲ್ ಥ್ರಾಂಬಾಸಿಸ್
★ಮೆದುಳಿಗೆ ಹೋಗುವ ರಕ್ತನಾಳಗಳಲ್ಲಿ ಎಲ್ಲೋ ಒಂದು ಕಡೆ ರಕ್ತ ಗರಣೆಗಟ್ಟುತ್ತದೆ ಥ್ರಾಂಬಸಿಸ್ ಎನ್ನುತ್ತಾರೆ. ಕ್ರಮೇಣ ಈ ಗರಣೆಗಟ್ಟುವಿಕೆ ದೊಡ್ಡದಾಗಿ ರಕ್ತನಾಳವನ್ನು ಪೂರ್ಣವಾಗಿ ಮುಚ್ಚಿ ಬಿಡುತ್ತದೆ.
★ರಕ್ತನಾಳದಲ್ಲಿ ಉಂಟಾಗುವ ಈ ತೊಂದರೆಯನ್ನು ಪ್ರಾರಂಭದಲ್ಲಿಯೇ ಗುರುತಿಸಿದರೆ.ವೈದ್ಯರು ಅದು ಮತ್ತಷ್ಟು ದೊಡ್ಡದಾಗಿ ರಕ್ತನಾಳವನ್ನು ಪೂರ್ತಿಯಾಗಿ ಮುಚ್ಚದಂತಿರಲು ಸೂಕ್ತ ಔಷಧಗಳ ಮೂಲಕ ಪ್ರಯತ್ನಿಸುತ್ತಾರೆ.
ಸೆರೆಬ್ರಲ್ ಎಂಬಾಲಿಸಮ್
ಮತ್ತಾವುದೋ ಶರೀರದ ಭಾಗದಿಂದ ತೇಲಿ ಬಂದ ರಕ್ತದ ಗಡ್ಡೆಯಾಗಲಿ ಮುಂತ್ತಾವುದಾದರೂ ತುಣುಕಾಗಲಿ ಅದನ್ನು ಎನ್ನುತ್ತಾರೆ.ಮೆದುಳಿಗೆ ರಕ್ತ ಸಾಗಿಸುವ ಧಮನಿಯಲ್ಲಿ ಇದು ಸಿಕ್ಕಿಕೊಂಡು ರಕ್ತಪೂರೈಕೆಗೆ ಅಡ್ಡಿಯುಂಟಾಗುತ್ತದೆ.
ಸೆರೆಬ್ರಲ್ ಹೇಮರೇಜ್ ರಕ್ತಸ್ರಾವ
ಮೆದುಳಿಗೆ ರಕ್ತವನ್ನು ಕೊಂಡೊಯ್ಯುವ ರಕ್ತನಾಳ ವೇನಾದರೂ ಬಿರುಕುಬಿಟ್ಟಾಗ. ರಕ್ತ ಮಿದುಳಿಗೆ ಹೋಗದೆ ಬಿರುಕಿನಿಂದ ಹೊರಕ್ಕೆ ಸೋರಿಕೆ ಆಗುತ್ತದೆ.
ಯಾವುದಾದರೂ ಟ್ಯೂಮರ್ ನಂಥದು ಮಿದುಳಿಗೆ ರಕ್ತಪೂರೈಕೆ ಮಾಡುವ ರಕ್ತನಾಳವನ್ನು ಒತ್ತಿ ಹಿಡಿದಾಗ,ಆ ನಾಳ ಮುಚ್ಚಿಹೋಗಿ ಮಿದುಳಿಗೆ ಹೋಗುವ ರಕ್ತ ನಿಂತು ಹೋಗುತ್ತದೆ.
ಈ ನಾಲ್ಕು ಸಂದರ್ಭಗಳಲ್ಲೂ ಪಾರ್ಶ್ವ ವಾಯು ಆಗುವ ಸಂಭವವಿದೆ.