ಮನೆ ಸುದ್ದಿ ಜಾಲ ರೈಲಿನ ಕಳಪೆ ಆಹಾರಕ್ಕೆ ಪ್ರಯಾಣಿಕರ ಆಕ್ರೋಶ; ಉಳಿದಿದ್ದನ್ನು ಟ್ರ್ಯಾಕ್ ಮೇಲೆ ಎಸೆದ ಸಿಬ್ಬಂದಿ

ರೈಲಿನ ಕಳಪೆ ಆಹಾರಕ್ಕೆ ಪ್ರಯಾಣಿಕರ ಆಕ್ರೋಶ; ಉಳಿದಿದ್ದನ್ನು ಟ್ರ್ಯಾಕ್ ಮೇಲೆ ಎಸೆದ ಸಿಬ್ಬಂದಿ

0

ಭಾರತೀಯ ರೈಲ್ವೆಯ ಆಹಾರ ಸೇವೆಯ ಗುಣಮಟ್ಟದ ಕುರಿತು ಮತ್ತೊಮ್ಮೆ ಗೊಂದಲ ಸೃಷ್ಟಿಯಾಗಿದೆ. ಇತ್ತೀಚೆಗೆ ರೈಲಿನ್ ಟಾಯ್ಲೆಟ್ ಮೇಲಿಟ್ಟ ಆಹಾರ ಪಾತ್ರೆ ಬಗ್ಗೆ ಸುದ್ದಿಯಾದ ಬೆನ್ನಲ್ಲೇ, ಇದೀಗ ಮತ್ತೊಂದು ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ರೈಲಲ್ಲಿ ಕೊಡುವ ಆಹಾರದ ಜೊತೆ, ರೈಲು ಟ್ರ್ಯಾಕ್ ಸ್ವಚ್ಛವಾಗಿಡಬೇಕಾದ ಸಿಬ್ಬಂದಿಯ ನಡೆ ಬಗ್ಗೆ ಭಾರತೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣ X ನಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಪ್ರಯಾಣಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆಹಾರ ವಾಸನೆ ಬರುತ್ತಿದೆ ಹಾಗೂ ಕಳೆಪೆ ಗುಣಮಟ್ಟದಿಂದ ಕೂಡಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ಉಳಿದ ಆಹಾರ ಪೊಟ್ಟಣಗಳನ್ನು ಐಆರ್‌ಸಿಟಿಸಿ (IRCTC) ಸಿಬ್ಬಂದಿ ಚಲಿಸುತ್ತಿದ್ದ ರೈಲಿನಿಂದ ಹೊರಗೆ ಎಸೆಯುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದ್ದು ಮಾಹಿತಿ ಪ್ರಕಾರ, ರೈಲಿನಲ್ಲಿ ಮಾರಾಟಕ್ಕೆ ಇಡಲಾಗಿದ್ದ ಆಹಾರದಿಂದ ದುರ್ವಾಸನೆ ಬರುತ್ತಿತ್ತು ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಆಹಾರದ ಗುಣಮಟ್ಟ ಕಳಪೆಯಾಗಿದ್ದ ಕಾರಣ ಅನೇಕರು ಊಟ ಖರೀದಿಸಲು ನಿರಾಕರಿಸಿದ್ದದ್ದರಿಂದ, ತಯಾರಿಸಿದ ಆಹಾರ ಹಾಗೆಯೇ ಉಳಿದಿತ್ತು ಎನ್ನಲಾಗಿದೆ.

ಹಾಗೂ ವೈರಲ್ ಆಗಿರುವ ಈ ವಿಡಿಯೋದಲ್ಲಿ ರೈಲ್ವೆ ಸಿಬ್ಬಂದಿ ಮಾರಾಟವಾಗದೇ ಉಳಿದಿದ್ದ ಪೂರ್ಣ ಊಟದ ಪ್ಲೇಟ್‌ಗಳನ್ನು ಸಿಬ್ಬಂದಿ ರೈಲಿನಿಂದ ಹೊರಗೆ ಎಸೆಯುತ್ತಿದ್ದು, ಸ್ವಚ್ಛ ಭಾರತ ಆಂದೋಲದ ಭಾಗವಾಗಿರುವ ರೈಲ್ವೆ ಟ್ರ್ಯಾಕುಗಳ ಮೇಲೆ ಈ ರೀತಿ ಪ್ಲಾಸ್ಟಿಕ್‌ನಿಂದ ಮುಚ್ಚಲ್ಪಟ್ಟ ಆಹಾರ ಎಸೆಯುತ್ತಿರುವುದಕ್ಕೆ ನೆಟ್ಟಿಗರು ಸಿಟ್ಟಾಗಿದ್ದಾರೆ. ಭಾರತೀಯ ರೈಲಿನಲ್ಲಿ ಕಳಪೆ ಆಹಾರ ಪೂರೈಸುವುದೇ ದೊಡ್ಡು ತಪ್ಪು. ಆಹಾರ ವೇಸ್ಟ್ ಮಾಡಿದ್ದು ಮತ್ತೊಂದು ತಪ್ಪು. ಜೊತೆಗೆ ಉಳಿದದ್ದನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡೋ ಬದಲು ಟ್ರ್ಯಾಕ್ ಮೇಲೆ ಎಸೆದು ಬೇಜವಾಬ್ದಾರಿ ತೋರಿದ್ದು ಮತ್ತೊಂದು ತಪ್ಪೆಂದು ಜನರು ಹೇಳುತ್ತಿದ್ದಾರೆ.

ರೈಲ್ವೆ ಇಲಾಖೆಯ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಪದ್ಧತಿ ಹಾಗೂ ಹಳಿಗಳ ಸುತ್ತಮುತ್ತಲಿರುವ ಪ್ರಾಣಿ-ಪಕ್ಷಿಗಳ ಸುರಕ್ಷತೆಯ ಕುರಿತು ಜನರು ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಈ ಘಟನೆ ಯಾವಾಗ ಮತ್ತು ಎಲ್ಲಿ ನಡೆದಿದೆ ಎಂಬ ನಿಖರವಾದ ಮಾಹಿತಿ ಹಾಗೂ ದಿನಾಂಕ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಆದಾಗ್ಯೂ, ಇಂತಹ ಆಹಾರವನ್ನು ಸೇವಿಸಿದರೆ ಆರೋಗ್ಯ ಹದಗೆಡುವುದು ಗ್ಯಾರಂಟಿ. ರೈಲ್ವೆ ಇಲಾಖೆಯು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.