ಮನೆ ಕೃಷಿ ಮಂಡ್ಯ ರೈತರಿಂದ ಪೇ ಫಾರ್ಮರ್ ಅಭಿಯಾನ

ಮಂಡ್ಯ ರೈತರಿಂದ ಪೇ ಫಾರ್ಮರ್ ಅಭಿಯಾನ

0

ಮಂಡ್ಯ(Mandya): ರಾಜ್ಯದಲ್ಲಿ ಕಾಂಗ್ರೆಸ್​ನ ಪೇ ಸಿಎಂ ಪೋಸ್ಟರ್ ಅಭಿಯಾನದ ಬೆನ್ನಲ್ಲೆ, ‘ಮಂಡ್ಯ ರೈತರಿಂದ ಪೇ ಫಾರ್ಮರ್ ಅಭಿಯಾನ’ ಶುರುಮಾಡಲಾಗಿದೆ.

ಜಿಲ್ಲೆಯ ಸಂಜಯ್ ವೃತ್ತದಲ್ಲಿ ರೈತರು ಅಭಿಯಾನ ಕೈಗೊಂಡಿದ್ದು, ಒಂದು ಟನ್ ಕಬ್ಬಿಗೆ 4500 ರೂ‌ ನಿಗದಿ ಮಾಡುವಂತೆ ರೈತರು ಒತ್ತಾಯಿಸಿದರು.

ಯುವ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಅಭಿಯಾನ ಮಾಡುತ್ತಿದ್ದು, ಸಕ್ಕರೆನಾಡಲ್ಲಿ ಅಭಿಯಾನ ತೀವ್ರ ಕಾವು ಪಡೆದುಕೊಂಡಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರೈತರು ಪೋಸ್ಟ್ ಹಿಡಿದು ನಿಂತ್ತಿದ್ದು ಕೆ.ಎಸ್.ಆರ್.ಟಿ.ಸಿ, ಐರಾವತ, ರಾಜಹಂಸ ಬಸ್​ಗಳನ್ನು ತಡೆದು ಪೇ ಫಾರ್ಮರ್ ಪೋಸ್ಟ್ ಅಂಟಿಸಿದರು.

ಜೊತೆಗೆ ಸರ್ಕಾರದ ವಿರುದ್ದ ಘೋಷಣೆ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಮಧುಚಂದನ್, ಪ್ರಸನ್ನಗೌಡ, ಸೇರಿದಂತೆ ಹಲವರು ಭಾಗಿಯಾಗಿದ್ದರು.

ಹಿಂದಿನ ಲೇಖನಅವಧಿ ಪೂರ್ವ ಬಿಡುಗಡೆಗೆ ರಾಜೀವ್ ಹತ್ಯೆ ಅಪರಾಧಿಗಳ ಮನವಿ: ಕೇಂದ್ರ, ತಮಿಳುನಾಡಿನ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್
ಮುಂದಿನ ಲೇಖನಹೃದಯ ಸಮಸ್ಯೆಗಳನ್ನು ದೂರ ಇಡಲು ಡ್ರೈ ಫ್ರೂಟ್ಸ್ ಸೇವಿಸಿ