ಮನೆ ಸುದ್ದಿ ಜಾಲ ಸರಕು ಸಾಗಿಸುವ ಲಘು ವಾಹನಗಳಲ್ಲಿ ಜನರನ್ನು ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ:  ಆರ್ಷದೀಪ್

ಸರಕು ಸಾಗಿಸುವ ಲಘು ವಾಹನಗಳಲ್ಲಿ ಜನರನ್ನು ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ:  ಆರ್ಷದೀಪ್

0

ಮೈಸೂರು: ಲಘು ಸರಕು ವಾಹನಗಳಲ್ಲಿ ಜನರನ್ನು ಚುನಾವಣಾ ಪ್ರಚಾರಕ್ಕಾಗಿ, ರ್ಯಾಲಿಯ ಉದ್ದೇಶಕ್ಕಾಗಿ ಬಳಸುವಂತಿಲ್ಲ. ಒಂದು ವೇಳೆ ಬಳಸಿದ್ದಲ್ಲಿ ಇಂಡಿಯನ್ ಮೋಟರ್ ವೆಹಿಕಲ್ ಆಕ್ಟ್ ಅಡಿಯಲ್ಲಿ ಕಾನೂನಿನ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕರಾದ ಆರ್ಷದೀಪ್ ಸಿಂಗ್ ತಿಳಿಸಿದರು.

Join Our Whatsapp Group

ಕರ್ನಾಟಕ ವಿಧಾನಸಭಾ ಸವರ್ತಿಕ ಚುನಾವಣೆ 2023 ರ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಎರಡನೇ ಹಂತದ ಇವಿಎಂ ಮತ್ತು ವಿವಿಪ್ಯಾಟ್ಗಳ ರ್ಯಾಂಡಮೈಜೇಶನ್ ಬಗ್ಗೆ ಏ.28 ರಂದು ಸಭೆಯನ್ನ ಏರ್ಪಡಿಸಲಾಗಿತ್ತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 337 ಮತಗಟ್ಟೆಗಳಿದ್ದು ಬಿ ಯು – 405, ಸಿ ಯು-405 ಹಾಗೂ ವಿವಿಪ್ಯಾಟ್-439 ಲಭ್ಯವಿರುತ್ತದೆ ಎಂದು ತಿಳಿಸಿದರು.

ಉಪವಿಭಾಗಾಧಿಕಾರಿಯಾದ ಕಮಲಾಭಾಯಿ ಅವರು ಮಾತನಾಡಿ ಅಂಚೆ ಮತದಾನದಲ್ಲಿ ಅಂಗವಿಕಲರು ಮತ್ತು 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕ ಮತದಾರರಲ್ಲಿ ಒಟ್ಟು 242 ಮತದಾರರನ್ನು ಗುರುತಿಸಲಾಗಿದ್ದು ಅವರಿಗೆ ಏ.29 ಮತ್ತು ಏ.30 ರಂದು ಮನೆಯಿಂದಲೇ ಮತದಾನ ಮಾಡಲಿದ್ದಾರೆ. ಈ ಕಾರ್ಯಕ್ಕೆ ಅಗತ್ಯ ತಂಡಗಳನ್ನು ರಚಿಸಿ ಗುಪ್ತ ಮತದಾನ ನಡೆಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಇಟಿಪಿಬಿಎಸ್ ನಲ್ಲಿ ಒಟ್ಟು 82 ಸೇವಾ ಮತದಾರರಿದ್ದು ಇವರಿಗೆ ಈಗಾಗಲೇ ಆನ್ಲೈನ್ ನಲ್ಲಿ ಸಂಬಂಧಪಟ್ಟ ಕಚೇರಿಗೆ ಮತಪತ್ರಗಳನ್ನು ಕಳುಹಿಸಲಾಗಿರುತ್ತದೆ ಎಂಬ ಮಾಹಿತಿಯನ್ನು ನೀಡಿದರು.

 ಚುನಾವಣೆಗೆ ಸಂಬಂಧಪಟ್ಟಂತೆ ಸಾರ್ವಜನಿಕರು ತಮ್ಮ ಕುಂದು ಕೊರತೆಗಳು ಇದ್ದಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕರಾದ ಅರ್ಶದೀಪ್ ಸಿಂಗ್ (ಮೊ.ನಂ. 6361268244) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಸಭೆಯಲ್ಲಿ ಮೈಸೂರು ತಾಲ್ಲೂಕಿನ ತಹಶೀಲ್ದಾರ್ ಆದ ಗಿರೀಶ್ ಅವರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಪಕ್ಷದ ಅಭ್ಯರ್ಥಿ ಮತ್ತು ಪಕ್ಷೇತರ ಅಭ್ಯರ್ಥಿಗಳು ಹಾಗೂ ಏಜೆಂಟ್ ಗಳು ಉಪಸ್ಥಿತರಿದ್ದರು.

ಹಿಂದಿನ ಲೇಖನಹುಬ್ಬಳ್ಳಿ ಗಲಭೆ: 40 ಆರೋಪಿಗಳಿಗೆ ಜಾಮೀನು ನಿರಾಕರಣೆ; ಬೆಳಗಾವಿ, ಕಲಬುರಗಿ, ಮೈಸೂರಲ್ಲಿ ಎನ್’ಐಎ ಕೋರ್ಟ್’ಗೆ ಶಿಫಾರಸು
ಮುಂದಿನ ಲೇಖನತಪ್ಪು ಮಾಡಿಲ್ಲ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ಬ್ರಿಜ್ ಭೂಷಣ್