ಹೈದರಾಬಾದ್ : ಕತ್ರಿನಾ ಕೈಫ್, ಇಶಾನ್ ಖಟ್ಟರ್ ಮತ್ತು ಸಿದ್ಧಾಂತ್ ಚತುರ್ವೇದಿ ಅಭಿನಯಿಸಿರುವ ಫೋನ್ ಭೂತ್ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ.
ಟ್ರೈಲರ್ ಭಯಾನಕ ಹಾಗೂ ಹಾಸ್ಯಭರಿತವೂ ಆಗಿದೆ.
ಮಿರ್ಜಾಪುರ್ ಜನಪ್ರಿಯ ವೆಬ್ಸರಣಿಗೆ ನಿರ್ದೇಶನ ಮಾಡಿದ್ದ ಗುರ್ಮೀತ್ ಸಿಂಗ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಭೂತ್ ಫೋನ್ ಹಾರರ್ ಕಾಮಿಡಿ ಸಿನಿಮಾದಲ್ಲಿ ಇಶಾನ್, ಸಿದ್ಧಾಂತ್ ಹಾಗೂ ಕತ್ರಿನಾ ಅವರು ಕಮಾಲ್ ಮಾಡಿದ್ದಾರೆ. 37 ಹರೆಯದ ಕತ್ರಿನಾ ಇದೇ ಮೊದಲ ಬಾರಿಗೆ 25ರ ಹರೆಯ ಇಶಾನ್ ಹಾಗೂ 27 ಹರೆಯದ ಸಿದ್ಧಾಂತ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.
ಫೋನ್ ಭೂತ್ ಟ್ರೈಲರ್ ನೋಡಿದರೆ ಈ ಚಿತ್ರ ಘೋಸ್ಟ್ಬಸ್ಟರ್ ಭಾರತೀಯ ಆವೃತ್ತಿಗೆ ಟ್ಯಾಗ್ ಮಾಡುವಂತಿದೆ.
ರವಿಶಂಕರನ್ ಮತ್ತು ಜಸ್ವಿಂದರ್ ಸಿಂಗ್ ಬಾತ್ ಚಿತ್ರಕಥೆ ಬರೆದಿರುವ ಈ ಸಿನಿಮಾ, ವಿಕ್ಕಿ ಕೌಶಲ್ ಅವರೊಂದಿಗಿನ ವಿವಾಹದ ನಂತರ ಕತ್ರಿನಾ ಅವರ ಮೊದಲ ಚಿತ್ರವಾಗಿದೆ. ರಿತೇಶ್ ಸಿಧ್ವಾನಿ ಮತ್ತು ಫರ್ಹಾನ್ ಅಖ್ತರ್ ಒಡೆತನದ ಎಕ್ಸೆಲ್ ಎಂಟರ್ಟೈನ್ಮೆಂಟ್ ನಿರ್ಮಾಣದ ಹೊಣೆ ಹೊತ್ತಿದೆ.
ಫೋನ್ ಭೂತ್ ಸಿನಿಮಾ ನವೆಂಬರ್ 4ರಂದು ಬಿಡುಗಡೆಯಾಗಲಿದೆ.