ಮನೆ ಅಂತಾರಾಷ್ಟ್ರೀಯ ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

0

ಹಿರೋಷಿಮಾ: ಜಪಾನ್‌ ಜಿ7 ಶೃಂಗಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್‌ ನ ಹಿರೋಷಿಮಾದಲ್ಲಿ ಇಂದು ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಅನಾವರಣಗೊಳಿಸಿದರು.

Join Our Whatsapp Group

ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ, ಪ್ರಧಾನಿ ಮೋದಿ ಅವರು ಮಹಾತ್ಮ ಗಾಂಧಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು.

ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಜಿ7 ಶೃಂಗಸಭೆಗೆ ಪ್ರಧಾನಿ ಮೋದಿ ಅವರನ್ನು ಶುಕ್ರವಾರ (ಮೇ19) ಸ್ವಾಗತಿಸಿದರು. ಪ್ರಧಾನಿ ಮೋದಿ ಅವರಿಗೆ ಜಪಾನಿನ ಅಧ್ಯಕ್ಷರು ಉಡುಗೊರೆಯಾಗಿ ಬೋಧಿ ವೃಕ್ಷವನ್ನು ನೀಡಿದರು.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ನನಗೆ ಇದು ಒಂದು ಉತ್ತಮ ಕ್ಷಣವಾಗಿದೆ, ನಾನು ಜಪಾನ್​​ಗೆ ಬಂದಾಗೆಲ್ಲ ಇಲ್ಲಿಯ ಜನರ ಶಾಂತಿ ಮಹತ್ವವನ್ನು ಅರ್ಥಮಾಡಿಕೊಳ್ಳಬಹುದು. ಜಪಾನ್​​​ನ ಲ್ಲಿ ನಾನು ಮಹಾತ್ಮ ಗಾಂಧಿಯವರಿಗೆ ನನ್ನ ಗೌರವವನ್ನು ಸಲ್ಲಿಸಿರುವುದು ಒಂದು ದೊಡ್ಡ ಗೌರವ ಎಂದು ಹೇಳಿದ್ದಾರೆ.

ಮೇ 19-21ರವರೆಗೆ ಹಿರೋಷಿಮಾದಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬೇರೆರ ಬೇರೆ ದೇಶ ನಾಯಕರು ಜಪಾನ್‌ ನಲ್ಲಿದ್ದಾರೆ. ಜಪಾನ್ 2023ರಲ್ಲಿ G7 ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ಶೃಂಗಸಭೆಯು G7 ಸದಸ್ಯ ರಾಷ್ಟ್ರಗಳಾದ ಫ್ರಾನ್ಸ್, ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ ಡಮ್, ಜರ್ಮನಿ, ಜಪಾನ್, ಇಟಲಿ ಮತ್ತು ಕೆನಡಾ ಮತ್ತು ಯುರೋಪಿಯನ್ ಯೂನಿಯನ್ (EU) ನಾಯಕರಿಗೆ ಇದು ವಾರ್ಷಿಕವಾಗಿ ನಡೆಯುವ ಅಂತರರಾಷ್ಟ್ರೀಯ ವೇದಿಕೆಯಾಗಿದೆ.

ಪ್ರಧಾನಿ ಮೋದಿ ಶುಕ್ರವಾರ ನಗರಕ್ಕೆ ಆಗಮಿಸುತ್ತಿದ್ದಂತೆ ಜಪಾನ್‌ ನಲ್ಲಿರುವ ಭಾರತೀಯ ವಲಸೆಗಾರರು ಹಿರೋಷಿಮಾದ ಹೋಟೆಲ್‌ ನಲ್ಲಿ ಜಮಾಯಿಸಿದ್ದು. “ಭಾರತ್ ಮಾತಾ ಕಿ ಜೈ” ಮತ್ತು “ವಂದೇ ಮಾತರಂ” ಎಂದು ಹರ್ಷೋದ್ಗಾರ ಹಾಕಿದರು. ಅಲ್ಲದೇ ಪ್ರಧಾನಿ ಮೋದಿಗೂ ಅಭಿನಂದಿಸಿದರು.

ಜಿ7 ಶೃಂಗಸಭೆಗೆ ಭಾರತವನ್ನು ಅತಿಥಿ ರಾಷ್ಟ್ರವಾಗಿ ಆಹ್ವಾನಿಸಲಾಗಿದೆ. G7 ಶೃಂಗಸಭೆಯ ಪ್ರಾಶಸ್ತ್ಯಗಳ ವಿಶಾಲವಾದ ನಿಯಮಗಳೆಂದರೆ, ಆಹ್ವಾನಿತ ಅತಿಥಿ ರಾಷ್ಟ್ರಗಳೊಂದಿಗಿನ ಸಂಪರ್ಕಕ್ಕೆ ಸಂಬಂಧಿಸಿದಂತೆ ಪರಮಾಣು ನಿಶ್ಯಸ್ತ್ರೀಕರಣ, ಆರ್ಥಿಕ ಸ್ಥಿತಿಸ್ಥಾಪಕತ್ವ ಮತ್ತು ಆರ್ಥಿಕ ಭದ್ರತೆ, ಪ್ರಾದೇಶಿಕ ಸಮಸ್ಯೆಗಳು, ಹವಾಮಾನ ಮತ್ತು ಶಕ್ತಿ, ಆಹಾರ ಮತ್ತು ಆರೋಗ್ಯ ಮತ್ತು ಅಭಿವೃದ್ಧಿ ಬಗ್ಗೆ ಚರ್ಚಿಸಲಾಗುತ್ತದೆ.

ಹಿಂದಿನ ಲೇಖನಖ್ಯಾತ ನೇತ್ರ ತಜ್ಞ ಡಾಕ್ಟರ್ ಭುಜಂಗ ಶೆಟ್ಟಿ ನಿಧನ
ಮುಂದಿನ ಲೇಖನಪತಿ ಹತ್ಯೆಗೈದು ಆತ್ಮಹತ್ಯೆ ಎಂದು ಕತೆ ಕಟ್ಟಿದ್ದ ಪತ್ನಿ, ಆಕೆಯ ಪ್ರಿಯಕರನ ಬಂಧನ