ಮನೆ ಆರೋಗ್ಯ ನ್ಯುಮೋನಿಯಾ

ನ್ಯುಮೋನಿಯಾ

0

ಶ್ವಾಸಕೋಶಕ್ಕೆ ಸೋಂಕು ತಗಲಿ ನೋವು ಉಂಟಾಗುತ್ತದೆ. ಇದೆ ನ್ಯುಮೋನಿಯಾ ಇಂಗ್ಲೆಂಡಿನಲ್ಲಿ ಸುಮಾರು 27 ಸಾವಿರ ಮಂದಿ ನಿಮೋನಿಯಾ ಪೀಡಿತರು ಇರುತ್ತಾರೆಂದು ಅಧಿಕೃತ ವರದಿ.

ಸಾಮಾನ್ಯವಾಗಿ ಶರೀರದಲ್ಲಾದ ಬೇರೆ ತರಹದ ರೋಗ ತೀವ್ರ ಸ್ವರೂಪದ ನ್ಯುಮೋನಿಯಾಗಿ ಪರಿವರ್ತನೆಯಾಗಬಹುದು.

ಬ್ಯಾಕ್ಟೀರಿಯಾ, ವೈರಸ್, ಶಿಲೀಂದ್ರ, ವಿಷ ಪದಾರ್ಥಗಳು ಯಾವುದಾದರೂ ಶ್ವಾಸಕೋಶಗಳಲ್ಲಿ ಒಕ್ಕಾಗ ಸೋಂಕು ಉಂಟಾಗಿ ನಂತರ ನ್ಯೂಮೋನಿಯಾಗೆ ತಿರುಗುತ್ತದೆ.

ನ್ಯೂಮೋನಿಯಾದಲ್ಲಿ ಎರಡು ವಿಧ

1) ಲೋಬರ್ ನ್ಯೂಮೋನಿಯ

2) ಬ್ರಾಂಕ್ ನ್ಯೂಮೋನಿಯ

ಲೋಬರ್ ನ್ಯೂಮೋನಿಯಾದ ಪ್ರಾರಂಭದಲ್ಲಿ ಶ್ವಾಸಕೋಶಗಳಲ್ಲಿರುವ ಯಾವುದಾದರೂ ಒಂದು ಹಾಲಿಗೆ ಸೋಂಕು ತಗಲುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇದು ಅಪರೂಪ.

ಬ್ರಾಂಕೋ ನೀಮೋನಿಯದಲ್ಲಿBronchi ಗಾಗಲಿ, Bronchioles ಎನ್ನುವ ವಾಯುನಾಳಗಳಲ್ಲಾಗಲಿ ಊತ ಉಂಟಾಗಿ ನಿಧಾನವಾಗಿ ಶ್ವಾಸಕೋಶದ ಅಂಗಾಂಶಕ್ಕೆ ಹರಡುತ್ತದೆ.

ಎಷ್ಟು ಸಮಯ ಇರುತ್ತದೆ?

•       ಬ್ಯಾಕ್ಟೀರಿಯಾದಿಂದ ಉಂಟಾಗುವ ನಿಮೋನಿಯಾ ಸರಿಯಾದ ಆಂಟಿಬಯೋಟಿಕ್ಸ್ ಗಳಿಂದ ಉಪಚರಿಸಿದರೇ ಒಂದು ವಾರದಿಂದ ಹತ್ತು ದಿನಗಳೊಳಗೆ ನಿಯಂತ್ರಣಕ್ಕೆ ಬರುತ್ತದೆ.

•       ವೈರಸ್ ನಿಂದ ಬರುವ ನಿಮೋನಿಯಾ ಗಂಭೀರವೇನಲ್ಲ ಔಷಧಿಗಳಿಂದ ಯಾವ ಪ್ರಯೋಜನವು ಇಲ್ಲ ಒಂದು ವಾರದಲ್ಲಿ ಕಡಿಮೆಯಾಗುತ್ತದೆ ಈ ಎರಡು ರೀತಿಯ ನ್ಯೂಮೋನಿಯಾಗಳಲ್ಲೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ವಾರಗಳಾದರೂ ಬೇಕು.

ಕಾರಣಗಳು

• ನ್ಯೂಮೋಕೋಕಸ್ ಸ್ಟೆಫಿಲೋ ಕೋಕಸ್ ಬ್ಯಾಕ್ಟೀರಿಯಗಳು

• ವೈರಸ್ ನಿಂದ ಉಂಟಾಗುವ ನಿಮೋನಿಯಾದ ವೈರಸ್ ನಿಂದ

ತೊಂದರೆಗಳು

ಆಂಟಿ ಬಯೋಟಿಕ್ಸ್ ಬಂದ ನಂತರ ನಿಮೋನಿಯಾ ಗಂಭೀರ ಸ್ಥಿತಿ ತಲುಪುವ ಸಾಧ್ಯತೆಗಳು ಕಡಿಮೆಯಾಗಿವೆ ಎಂದು ಹೇಳಬಹುದು ಇಲ್ಲದಿದ್ದರೆ ನಿಮೋನಿಯಾ ಆಗಾಗಿ ಆಗುವ ಸಾಧ್ಯತೆಗಳು ಇರುತ್ತಿತ್ತು.

ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?

ನ್ಯೂಮೋನಿಯ ಲಕ್ಷಣಗಳು ಕಂಡ ಕೂಡಲೇ ಶ್ವಾಸಕೋಶದ ಸೋಂಕು ತಗಲಿದ ವ್ಯಕ್ತಿ ತಕ್ಷಣ ಹಾಸಿಗೆ ಹಿಡಿದ ಕೂಡಲೇ ವೈದ್ಯರನ್ನು ಭೇಟಿ ಆಗಬೇಕು

ಮನೆಮದ್ದು

ಸಂಪೂರ್ಣ ವಿಶ್ರಾಂತಿ ಮತ್ತು ದ್ರವರೂಪದ ಆಹಾರ ಸೇವನೆ ಅತ್ಯಗತ್ಯ

ರೋಗ ನಿರ್ಧರಿಸುವುದು

ಎದೆಯ ಎಕ್ಸರೇ, ಕಫಪರೀಕ್ಷೆ, ರಕ್ತ ಪರೀಕ್ಷೆಯಿಂದ ಬ್ಯಾಕ್ಟೀರಿಯದಿಂದಲೋ ವೈರಸ್ ನಿಂದಲೋ ಅಥವಾ ಬೇರೆ ಕಾರಣಗಳಿಂದ ಉಂಟಾದ ನಿಮೋನಿಯವೇ ಎಂದು ಪತ್ತೆ ಹಚ್ಚಿದ ನಂತರ ವೈದ್ಯರು ಕಾಯಿಲೆ ಅನುಗುಣವಾಗಿ ಔಷಧಿಗಳನ್ನು ಸೂಚಿಸುತ್ತಾರೆ.

ಚಿಕಿತ್ಸೆ

• ಸಂಪೂರ್ಣ ವಿಶ್ರಾಂತಿ

• ಹಬೆಯನ್ನು ಆಘ್ರಾಣಿಸುವುದು

• ಸಾಕಷ್ಟು ದ್ರವರೂಪದ ಆಹಾರ ಹಣ್ಣಿನ ರಸ ನೀರು ಸೇವನೆ

• ಜ್ವರದ ಭಾದೆ ಕಡಿಮೆಯಾಗಲು ಪ್ಯಾರಾಸಿಟಮಲ್ ಸೇವನೆ ಮುಂತಾದವುಗಳನ್ನು ಮಾಡಬೇಕು

ಯಾರಿಗೆ ಬರಬಹುದು?

•       ವೃದ್ಧರಿಗೆ: ಕಾರಣ ಅವರಲ್ಲಿ ರೋಗ ನಿರೋಧಕ ಶಕ್ತಿ ಕುಂದುತ್ತಿರುತ್ತದೆ.

•       ಬೇರೆ ಕಾರಣಗಳಿಂದ (ರೋಗ) ಆಸ್ಪತ್ರೆಗೆ ದಾಖಲಾದವರಿಗೆ

•       ಧೂಮಪಾನಿಗಳಿಗೆ

•       ಮಧ್ಯ ವ್ಯಸನಿಗಳಿಗೆ

•       ಪೌಷ್ಟಿಕ ಆಹಾರದ ಕೊರತೆ ಇರುವವರಿಗೆ

•       ವೈರಲ್ ಇನ್ಫೆಕ್ಷನ್ ನಿಂದ ಬಳಲುತ್ತಿರುವವರಿಗೆ ಕ್ರಾನಿಕ್ ಬ್ರಾಂಕೈಟಿಸ್ ಅಥವಾ ಎಂಫಿಸಿಯಾ ಇರುವವರಿಗೆ

•       ರಕ್ತಹೀನತೆಯಿಂದ ಬಳಲುವವರಿಗೆ

•       ರೇಡಿಯೋಥೆರಪಿ ಕೆಮೋಥೆರಪಿ ಮುಂತಾದ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿರುವ ಕ್ಯಾನ್ಸರ್ ರೋಗಿಗಳಿಗೆ. ಏಕೆಂದರೆ ಈ ಉಪಚಾರಗಳು ವ್ಯಕ್ತಿಯ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತವೆ.

ಹಾಗಾಗಿ ಮೇಲಿನವರಿಗೆ ನಿಮೋನಿಯಾ ಕಾಯಿಲೆ ಬರುವ ಸಾಧ್ಯತೆ ಹೆಚ್ಚು

ನ್ಯಮೋನಿಯಾ ಲಕ್ಷಣಗಳು

•       ಎಡೆಬಿಡದ ಕೆಮ್ಮು

•       ಹೆಚ್ಚು ಜ್ವರ, ಉಬ್ಬಸ

•       ಎದೆನೋವು, ಎದೆಯ ಮೂಲೆಯಲ್ಲಿ ನೋವಿದ್ದು ಉಸಿರಾಡುವಾಗ ಹೆಚ್ಚಾಗುತ್ತದೆ.

•       ಜ್ವರ ಚಳಿ

•       ಒಣ ಕೆಮ್ಮು, ಕಫ ಇಲ್ಲದಿದ್ದರೂ ಉಗುಳಿದಾಗ ರಕ್ತ ಕಾಣಿಸುವುದು

•       ಉಸಿರಾಟದ ತೊಂದರೆ,

•       ನಿರುತ್ಸಾಹ, ಆಲಸ್ಯ, ತಲೆನೋವು, ಬೆವರುವುದು, ವಾಂತಿಯಾಗುವುದು

•       ಚಿಕ್ಕ ಮಕ್ಕಳಲ್ಲಿ ರೋಗದ ಲಕ್ಷಣಗಳು ಗೋಚರಿಸುವುದು ವಿರಳ ಕೆಮ್ಮು ಅಷ್ಟಾಗಿ ಇರದು ಅತಿಯಾದ ಜ್ವರ ಉಸಿರಾಡುವಾಗ ಎತ್ತಿ ಹಾಕುವಂತಹ ಉಸಿರು ಇರುತ್ತದೆ ಈ ಮೇಲಿನ ಲಕ್ಷಣಗಳಿದ್ದರೆ ನಿಮೋನಿಯಾದ ಲಕ್ಷಣವೆಂದು ದೃಢಪಡುತ್ತದೆ.

ಮಾತ್ರೆಗಳನ್ನು ಕೊಡುವುದು

•       ಬ್ಯಾಕ್ಟೀರಿಯಾ ದಿಂದಾದ ನಿಮೋನಿಯಾವಾದರೆ ವೈದ್ಯರು ಆಂಟಿಬಯೋಟಿಕ್ಸ್ ಔಷಧಿ ಮಾತ್ರೆಗಳನ್ನು ಸೂಚಿಸುತ್ತಾರೆ

•       ಮೂಗು ಕಟ್ಟಿಕೊಂಡರೆ ನೋಸ್ ಡ್ರಾಪ್ಸ್ ಸ್ಪ್ರೇ ಅಥವಾ Oral Decongestants, ಕಫ ಇರುವ ಕೆಮ್ಮಿಗೆ ಕಫ ನಿರ್ಮೂಲನೆ ಮಾಡುವ Expectorant ಗಳನ್ನು ಸೇವಿಸಲು ಸಲಹೆ ನೀಡುತ್ತಾರೆ

ನಿವಾರಣೆ

ಪುಟ್ಟ ಮಕ್ಕಳಿಗೆ ವೃದ್ಧರಿಗೆ ಆಗಾಗ ಬರುವ ಶೀತ ಕೆಮ್ಮುಗಳಿಗೆ ನಿಮೋನಿಯಾ ದೂರವಿಡುವ ಸಲುವಾಗಿ ಮನೆಯಲ್ಲೇ ಮುಂಜಾಗ್ರತ ಕ್ರಮವಾಗಿ ಚಿಕಿತ್ಸೆ ತೆಗೆದುಕೊಳ್ಳಬಹುದು

ಅಪಾಯಕರವೇ?

•       ನಿಮೋನಿಯಾ ರೋಗಿಗಳು ಸುಮಾರು ಎರಡು ವಾರ ನರಳಿದ ನಂತರ ಗುಣಮುಖರಾಗುತ್ತಾರೆ

•       ವೃದ್ಧರು ದುರ್ಬಲರು ಶ್ವಾಸಕೋಶಗಳ ಅಂಗಾಂಶಗಳು ಚಿಕಿತ್ಸೆಗೆ ಸ್ಪಂದಿಸದೆ ರೋಗ ಉಲ್ಭಣಿಸಿ ಉಸಿರಾಟದ ತೊಂದರೆಯಿಂದ ಸಾವನ್ನಬಹುದು.