ಮನೆ ಕವನ ಕಣ್ಣಾಮುಚ್ಚಾಲೆ – ಕವನ

ಕಣ್ಣಾಮುಚ್ಚಾಲೆ – ಕವನ

0

ಅವನು ಹಿಂಬಾಲಿಸಿ

ಬರುತಿಹನೆಂದು

ಅವಳಿಗೆ ಗೊತ್ತು

ಅವಳಿಗೆ ಗೊತ್ತೆಂದು

ಅವನಿಗೂ ಗೊತ್ತು

ಆದರೂ ಅವಳ

ನಡಿಗೆ ನಿಲ್ಲುವುದಿಲ್ಲ

ಅವನ ನಡಿಗೆ

ಜೋರಾಗುವುದಿಲ್ಲ.

ಹೃನ್ಮನದಿ ಝೇಂಕಾರ

ಪ್ರೇಮದ ಓಂಕಾರ

ಅಂತರ ನಿರಂತರ

ನಿತ್ಯ ಸಮಾನಂತರ.

  • ಎ.ಎನ್. ಆರ್