ಮನೆ ಅಪರಾಧ ವೇಶ್ಯಾವಾಟಿಕೆ  ಜಾಲ ಭೇದಿಸಿದ ಪೊಲೀಸರು: ಮೂವರ ಬಂಧನ

ವೇಶ್ಯಾವಾಟಿಕೆ  ಜಾಲ ಭೇದಿಸಿದ ಪೊಲೀಸರು: ಮೂವರ ಬಂಧನ

0

ಬೆಂಗಳೂರು: ಹೊರ ರಾಜ್ಯಗಳಿಂದ ಮಹಿಳೆಯರನ್ನು ಕರೆತಂದು ನಗರದಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಜಾಲ ಭೇದಿಸಿರುವ ವಿದ್ಯಾರಣ್ಯಪುರ ಠಾಣೆ ಪೊಲೀಸರು, ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.

ಬ್ಯಾಟರಾಯನಪುರದ ಮಧು (43), ಅಸ್ಸಾಂನ ರಫಿಕುಲ್‌ ಇಸ್ಲಾಂ (21) ಹಾಗೂ ಪಶ್ಚಿಮ ಬಂಗಾಳದ ರುಬೇಲ್‌ ಮಂಡಲ್‌ (28) ಬಂಧಿತರು.

ಆರೋಪಿ ಮಧು ಠಾಣೆ ವ್ಯಾಪ್ತಿಯ ಜಯಕೃಷ್ಣ ಬಡಾವಣೆಯಲ್ಲಿರುವ ಮನೆಯಲ್ಲಿ ಹೈಟೆಕ್‌ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ. ಇತರ ಆರೋಪಿಗಳು ಈಶಾನ್ಯ ರಾಜ್ಯಗಳಿಂದ ಯುವತಿಯರನ್ನು ಕರೆತಂದು ಈತನಿಗೆ ಒಪ್ಪಿಸುತ್ತಿದ್ದರು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಖಚಿತ ಮಾಹಿತಿ ಆಧಾರದಲ್ಲಿ ದಾಳಿ ನಡೆಸಿದಾಗ ಮಧು ಸಿಕ್ಕಿಬಿದ್ದಿದ್ದ. ವಿಚಾರಣೆ ವೇಳೆ ಆತ ಇತರರ ಹೆಸರು ತಿಳಿಸಿದ್ದ. ಆತ ನೀಡಿದ ಮಾಹಿತಿಯನ್ನು ಆಧರಿಸಿ ಅವರನ್ನೂ ಬಂಧಿಸಲಾಗಿದೆ. ಪಶ್ಚಿಮ ಬಂಗಾಳದ 35 ವರ್ಷದ ಮಹಿಳೆಯನ್ನು ರಕ್ಷಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಹಿಂದಿನ ಲೇಖನಗರ್ಭಿಣಿ ಪತ್ನಿ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಕುಡುಕ ಪತಿ
ಮುಂದಿನ ಲೇಖನಹೈಕೋರ್ಟ್ ನಲ್ಲಿ  ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ