Saval TV on YouTube
ಮೈಸೂರು: ನಾಟಕ, ನೃತ್ಯ, ಸಂಗೀತಗಳು ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸುತ್ತವೆ. ಅವರಲ್ಲಿ ವೈಚಾರಿಕ ಶಕ್ತಿ ಜಾಗೃತಗೊಳಿಸುತ್ತವೆ ಎಂದು ಸಾಹಿತಿ ಡಾ.ಲತಾ ರಾಜಶೇಖರ್ ಹೇಳಿದರು.
ಇಲ್ಲಿನ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಜೆಎಸ್ಎಸ್ ರಂಗೋತ್ಸವ–2022’ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ರಂಗ ಚಟುವಟಿಕೆಗಳು ಮನರಂಜನೆಯ ಜೊತೆಗೆ ಮನೋವಿಕಾಸಕ್ಕೂ ಸಹಕಾರಿಯಾಗಿವೆ ಸಮೂಹ ಮಾಧ್ಯಮಗಳು ಮಕ್ಕಳ ಮೇಲೆ ಬಹಳ ವೇಗವಾಗಿ ಪ್ರಭಾವ ಬೀರುತ್ತವೆ ಎಂದರು.
ರಂಗಕರ್ಮಿ ಡಾ.ಸುಜಾತಾ ಅಕ್ಕಿ ಮಾತನಾಡಿ, ಮೈಸೂರು ಸೀಮೆಯು ಕನ್ನಡ ಸಂಸ್ಕೃತಿ, ಕಲೆ, ಪರಂಪರೆಗಳಿಗೆ ವಿಶಿಷ್ಟವಾದ ನೆಲೆಯನ್ನು ಹೊಂದಿದೆ. ಉತ್ತರದಿಂದ ಬಂದ ಮಹದೇಶ್ವರರು, ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಕತ್ತಲೆಯ ರಾಜ್ಯದಲ್ಲಿ ಜ್ಞಾನದ ಬೆಳಕನ್ನು ಪಸರಿಸಿದರು ಎಂದು ಸ್ಮರಿಸಿದರು.