ಮನೆ ರಾಜ್ಯ ಪ್ರಜ್ವಲ್ ರೇವಣ್ಣ ಪ್ರಕರಣ: ಎಸ್ಐಟಿ ತನ್ನ ಕೆಲಸವನ್ನು ದಕ್ಷತೆಯಿಂದ ಮಾಡುತ್ತಿದೆ- ಜಿ ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣ: ಎಸ್ಐಟಿ ತನ್ನ ಕೆಲಸವನ್ನು ದಕ್ಷತೆಯಿಂದ ಮಾಡುತ್ತಿದೆ- ಜಿ ಪರಮೇಶ್ವರ್

0

ಬೆಂಗಳೂರು: ವಿರೋಧ ಪಕ್ಷಗಳ ನಾಯಕರು ಅದರಲ್ಲೂ ನಿರ್ದಿಷ್ಟವಾಗಿ ಹೆಚ್ ಡಿ ಕುಮಾರಸ್ವಾಮಿಯರು ಎತ್ತುವ ಪ್ರಶ್ನೆಗಳಿಗೆ ಪ್ರತಿದಿನ ಉತ್ತರ ಕೊಡುತ್ತಾ ಕೂರಲಾಗಲ್ಲ, ಸರ್ಕಾರ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಮತ್ತು ಎಸ್ಐಟಿ ತನ್ನ ಕೆಲಸವನ್ನು ದಕ್ಷತೆಯಿಂದ ಮಾಡುತ್ತಿದೆ ಎಂದು ಪ್ರಜ್ವಲ್ ರೇವಣ್ಣ ಪ್ರಕರಣ ಮತ್ತು ಎಸ್ಐಟಿ ತನಿಖೆ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಗೃಹ ಸಚಿವ ಜಿ ಪರಮೇಶ್ವರ್ ಈ ರೀತಿಯಾಗಿ ಪ್ರತಿಕ್ರಿಯಿಸಿದರು.

Join Our Whatsapp Group

ವಕೀಲ ದೇವರಾಜೇಗೌಡ ಸಹ ಎಸ್ಐಟಿ ತನಿಖೆಯ ಬಗ್ಗೆ ಅಪಸ್ವರ ಎತ್ತಿದ್ದಾರೆ ಮತ್ತು ಅದರ ವಿರುದ್ಧ ದೂರು ಸಲ್ಲಿಸುವ ಯೋಚನೆ ಮಾಡಿದ್ದಾರೆ ಅಂತ ಹೇಳಿದ್ದಕ್ಕೆ ಅವರು, ಅವರು ದೂರು ಸಲ್ಲಿಸಲು ಮುಕ್ತರು, ಯಾರಿಗೆ ಬೇಕಾದರೂ ಸಲ್ಲಿಸಲಿ ಎಂದರು.

ಬೇರೆ ಸಂತ್ರಸ್ತೆಯರು ಯಾರಾದರು ದೂರು ನೀಡಿದ್ದಾರಾ? ಅಂತ ಕೇಳಿದ್ದಕ್ಕೆ ಗೃಹ ಸಚಿವ, ಅದು ಎಸ್ಐಟಿ ಅಧಿಕಾರಿಗಳಿಗೆ ಗೊತ್ತಿರಬಹುದಾದ ವಿಚಾರ ಮತ್ತು ಯಾರಾದರೂ ಸಂತ್ರಸ್ತೆಯರನ್ನು ಬ್ಲ್ಯಾಕ್ ಮೇಲ್ ಮಾಡಲು ಪ್ರಯತ್ನಿಸಿದರೆ ಅದನ್ನು ಸಹ ತನಿಖಾಧಿಕಾರಿಗಳು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

ಹಿಂದಿನ ಲೇಖನಶಾಸಕ ಇಕ್ಬಾಲ್ ಹುಸೇನ್ ವಿಡಿಯೋ ವೈರಲ್ ಕೇಸ್: ಇಬ್ಬರ ಬಂಧನ
ಮುಂದಿನ ಲೇಖನಕೇರಳ: ಫೋನಿನಲ್ಲಿ ಮಾತಾಡುತ್ತಾ ಕಣಗಿಲೆ ಹೂ ತಿಂದ ಯುವತಿ ಸಾವು