ಮನೆ ಯೋಗಾಸನ ಪ್ರಾಣಾಯಾಮ

ಪ್ರಾಣಾಯಾಮ

0

ಉಸಿರಾಟದ ಕ್ರಮಬದ್ಧ ಅಭ್ಯಾಸವೇ ಪ್ರಾಣಯಾಮ.

ಹಾಗಾದ್ರೆ ನಾವು ಸದಾ ಉಸಿರಾಡುತ್ತಿರುವುದು ಸರಿಯಾದ ಕ್ರಮ ಅಲ್ಲವೇ ಎಂಬ ಪ್ರಶ್ನೆ ಇರುತ್ತದೆ. ಇದಕ್ಕೆ ಉತ್ತರ ಹೌದು, ಎಂದರೆ ನಮಗೆ ಆಶ್ಚರ್ಯವಾಗುವುದು ಸಾಮಾನ್ಯವಾಗಿ ನಾವು ಉಸಿರಾಡುವಾಗ ಸ್ವಾಭಾವಿಕವಾಗಿ ನಮ್ಮ ಶ್ವಾಸಕೋಶಗಳು ಸಂಪೂರ್ಣ ತುಂಬಿಕೊಳ್ಳುವಷ್ಟು ಉಸಿರು ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಅಲ್ಲಿನ ಎಲ್ಲಾ ಶ್ವಾಸಕೋಶಗಳು ಪ್ರಾಣಶಕ್ತಿ ತಲುಪುವುದಿಲ್ಲ. ಅಲ್ಲದೆ ನಮ್ಮ ಉಸಿರಾಟದ ವೇಗವು ಹೆಚ್ಚು (ಸುಮಾರು ನಿಮಿಷಕ್ಕೆ 14 ರಿಂದ 15 ಸಲ ಆದರಿಂದಾಗಿ ಮನುಷ್ಯ ಜೀವಿತಾವಧಿಗೂ ಪರಿಣಾಮವಾಗುತ್ತದೆ).

ಆದರೆ ಅದೇ ಪ್ರಾಣಾಯಾಮ ಮಾಡುವಾಗ ಸಾಮಾನ್ಯವಾಗಿ ಉಸಿರಾಟದಲ್ಲಿ ಒಳಗೆಳೆದುಕೊಳ್ಳುವ ವಾಯುಗಿಂತಲೂ ಸುಮಾರು ಆರು ಪಟ್ಟು ಹೆಚ್ಚು ವಾಯುವು ಅಂದರೆ ಶ್ವಾಸಕೋಶಗಳು ಪೂರ್ತಿಯ ತುಂಬವಷ್ಟು ಉಸಿರನ್ನು ಒಳಗೆ ತೆಗೆದುಕೊಳ್ಳುತ್ತೇವೆ ಮತ್ತು ಪ್ರಾಣಯಾಮದಿಂದ ಉಸಿರಾಟದ ವೇಗವು ಕಡಿಮೆಯಾಗುತ್ತದೆ. ಅಂದರೆ ನಿಮಿಷಕ್ಕೆ 14 ರಿಂದ 15 ಸಾಲದ ಬದಲು ನಿಮಿಷಕ್ಕೆ 5 ರಿಂದ 6 ಸಲ ಸಾಧನೆ ಮಾಡುತ್ತಾ ಹೋದಂತೆ ಅದು ನಿಮಿಷಕ್ಕೆ ಒಂದರಿಂದ ಎರಡು ಸಲಕ್ಕೂ ಇರಬಹುದು. ಅರ್ಥ ಆಯುರ್ವೃಧ್ಧಿ ತಂತಾನೆ . ಅಲ್ಲದೆ ಪ್ರಾಣಾಯಾಮವು ಸರ್ವ ರೋಗಗಳಿಗೆ ರಾಮಬಾಣವಾಗಿದೆ.

ಆದ್ದರಿಂದ ಅದು… ನಮ್ಮ ಆರೋಗ್ಯಕ್ಕೆ ಅತ್ಯಂತ ಅವಶ್ಯಕತೆಯಾಗಿದೆ. ನಮ್ಮ ಮತ್ತು ಸಮಸ್ತ ನಾಡಿಗಳು ಮತ್ತು ಚಕ್ರಗಳಿಗೆ ಅತಿ ಹೆಚ್ಚು ಪ್ರಾಣಶಕ್ತಿಯು ಪ್ರಾಣಮಯವಾದ ಮೂಲಕ ದೊರೆಯುವುದು ಅಷ್ಟೇ ಸತ್ಯ. ಅವುಗಳ ಸಂಕ್ಷಿಪ್ತ ವಿವರಣೆ ಈ ಕೆಳಗಿನಂತಿದೆ.

ಇಲ್ಲಿ ಚಿತ್ತದ ಹಾಗೂ ಗಮನದ ಕೆಲಸ ತುಂಬಾ ಮಹತ್ವದ್ದು ಪ್ರಾಣ ಚೇತನ್ಯವಾದ ವಾಯು ನಮ್ಮ ಶರೀರವನ್ನು ಪ್ರವೇಶಿಸುತ್ತಿದ್ದಂತೆ, ಅದು ಹಂತ ಹಂತವಾಗಿ ಶ್ವಾಸಕೋಶಗಳನ್ನು ಪ್ರವೇಶಿಸಿ ಅಲ್ಲಿನ ಜೀವಕಣಗೊಳಗೆ ಒಂದಾಗುವಂತೆ ಮಾಡುವಲ್ಲಿ ಚಿತ್ತವು ಅದನ್ನು ತಾಯಿ ಮತ್ತು ತನ್ನ ಮಗುವನ್ನು ಸದಾ ಗಮನಿಸುತ್ತಾ ಮಾರ್ಗದರ್ಶನ ಮಾಡುವಂತೆ ಅಂದರೆ ಚಿತ್ತ ಮತ್ತು ಪ್ರಾಣಿಗಳ ಸಂಬಂಧವು ತಾಯಿ ಮಗುವಿನಂತೆ ಇರಬೇಕು. ಮಗುವಿನ ಉನ್ನತಿಗಾಗಿ ಆಕೆ ತನ್ನ ಜೀವನವನ್ನೇ ಮುಡುಪಾಗಿ ಇಡುವಂತೆ ಎಚ್ಚರಿಕೆಯಿಂದ ಪ್ರೀತಿಯಿಂದ ಕಾಪಾಡಿಕೊಳ್ಳಬೇಕು ಗಮನಿಸುತ್ತಿರಬೇಕು. ಈ ಕ್ರಿಯೆಯಲ್ಲಿ ಚಿತ್ತವು ತನ್ನನ್ನು ದೇಹ ಆತ್ಮಗಳೊಡನೆ ವಿಲೀನಗೊಳಿಸಿಕೊಳ್ಳುತ್ತದೆ.

ವಿಶೇಷ ಸೂಚನೆ :- ಉಸಿರನ್ನು ಒಳ ತೆಗೆದುಕೊಳ್ಳುವಾಗ ಹೊಟ್ಟೆಯನ್ನು ಉಬ್ಬಿಸಕೂಡದು ಅದರಿಂದ ಶ್ವಾಸಕೋಶಗಳು ಹಿಗ್ಗುವಿಕೆ ಕುಂಠಿತವಾಗುತ್ತದೆ. ಮತ್ತು ಇನ್ನೊಂದು ಮಹತ್ವದ ವಿಷಯವೇನೆಂದರೆ ಒತ್ತಾಯದಿಂದ ಅವಸರವಾಗಿ ಶ್ವಾಸೋಚ್ಛಾಸ  ಮಾಡಬಾರದು. ಇದರಿಂದ ಹೃದಯ ಮತ್ತು ಮೆದುಳಿಗೆ ಅಪಾಯ ತಟ್ಟುವ ಸಂಭವವಿದೆ. ರೇಚಕವೆಂದರೆ ಅದು ಗಾಳಿ ಹೊರ ಹೋಗುವ ಕ್ರಿಯೆ ಅದು ಕೆಟ್ಟ ಗಾಳಿ ಅಥವಾ ಇಂಗಾಲಾಮ್ಲವನ್ನು ಹೊರ ಹಾಕುವ ಕೆಲಸ ಇದುವೇ ವೈಯುಕ್ತಿಕ ಚೈತನ್ಯ ಅಥವಾ ಜೀವಾತ್ಮವು ಪ್ರಕೃತಿ ಚೈತನ್ಯ ಅಥವಾ ಪರಮಾತ್ಮ ನೋಡನೇ ಒಂದಾಗಲು ಹೊರಬೀಳುವ ಪ್ರಕ್ರಿಯೆ ಈ ಕ್ರಿಯೆಯಿಂದ ಮೆದುಳು ಶಾಂತಗೊಳ್ಳುತ್ತದೆ.

ಇದು ಸಾಧಕನು ತನ್ನ ʼಅಹಂʼ ಅನ್ನು ಆತ್ಮನಿಗೆ ಸಮರ್ಪಿಸಿ ಅದರಲ್ಲಿ ಒಂದಾಗುವ ಪ್ರಕ್ರಿಯೆ ಅದಕ್ಕಾಗಿ ಎದೆಯನ್ನು ಜಾಗೃತ ಸ್ಥಿತಿಯಲ್ಲಿ ಮೇಲೆತುತ್ತ ಹೊರ ಹೋಗುವ ಉಸಿರನ್ನು ದೃಢವಾಗಿ ಶಾಂತವಾಗಿ ಬಿಟ್ಟು ಕೊಡಬೇಕು. ಉಸಿರಾಟವನ್ನು ಅನುಭವಿಸುತ್ತಾ ಆನಂದಿಸುತ್ತ ಒತ್ತಡ ರಹಿತವಾಗಿ ಸರಳ ಸುಲಭವಾಗಿ ಸಂಪೂರ್ಣ ಪ್ರಜ್ಞೆ ಮತ್ತು ಅರಿವಿನಿಂದ ಅದರಲ್ಲಿ ಮಗ್ನರಾಗಿ ಮಾಡಬೇಕು ಈ ಮೇಲೆ ತಿಳಿಸಿದ ಮತ್ತು ಮುಂದೆ ತಿಳಿಸುವ ಅದರ ಎಲ್ಲಾ ವಿವರಣೆಗಳ ಪ್ರಕಾರ ಪ್ರಾಣಾಯಾಮ ಒಂದು ಅದ್ಭುತವಾದ ಕಲೆ ಎಂದರೆ ತಪ್ಪಲ್ಲ.

ಉಸಿರನ್ನು ಹಂತ ಹಂತವಾಗಿ ತಾಳಕ್ಕೆ ತಕ್ಕಂತೆ ಗಮನವಿಟ್ಟು ಒಳಗೆ ಸ್ವೀಕರಿಸಿ ಹಾಗೂ ಹೊರಕ್ಕೆ ಬಿಡಬೇಕು ಶ್ವಾಸಕೋಶ, ವಪೆ (ಇದು ಶ್ವಾಸಕೋಶಗಳು ಮತ್ತು ಹೊಟ್ಟೆಯ ಅಂಗಾಂಗಗಳ ನಡುವಿನ ಒಂದು ಪರದೆ) ಮತ್ತು ಹೊಟ್ಟೆ ಇತರ ಅಂಗಗಳನ್ನು ನಿಯಂತ್ರಣದಲ್ಲಿಟ್ಟು ಉಸಿರು ಹಂತ ಹಂತವಾಗಿ ಶರೀರದಲ್ಲಿ ಹರಿಯುವಂತೆ ಮಾಡುವುದೇ ಪ್ರಾಣಾಯಾಮ ಉಸಿರು ಒಳ ಹೋಗುವ ಸಮಯದಲ್ಲಿ ಎದೆಯನ್ನು ವಿಸ್ತರಿಸಿ ಮೇಲೆ ಹೊತ್ತು ಹೊರಕ್ಕೆ ಚಾಚಬೇಕು. ಹಿಂದೆ ಮುಂದೆ ಪಕ್ಕಕ್ಕೆ ವಾಲಬಾರದು ಹೊಟ್ಟೆಯನ್ನು ಸರಕನೆ ಜರುಗಿಸಕೂಡದು ಅದನ್ನು ಶಾಂತವಾಗಿ ಇರಿಸಬೇಕು. ವಪೆ ಮೂಲದಿಂದ ಉಸಿರನ್ನು ಎಳೆದುಕೊಳ್ಳಬೇಕು. ಎರಡು ಪಕ್ಕೆಲಬುಗಳ ಕೆಳಗಿನ ಹೊಕ್ಕಳು ಪ್ರದೇಶವೇ ದೀರ್ಘ ಶ್ವಾಸ ಆರಂಭಿಸಲು ಸರಿಯಾದ ಪ್ರದೇಶ ಶ್ವಾಸಕೋಶಗಳನ್ನು ಸಂಪೂರ್ಣ ಹಿಗ್ಗಿಸಿ ಭರ್ತಿಯಾಗುವಷ್ಟು ವಾಯುವನ್ನು ಗಮನಪೂರ್ವಕವಾಗಿ ತುಂಬಿ ಕೊಳ್ಳಬೇಕು (ಕಂಕುಳಿನಿಂದ ಕಾಲರ್ ʼಬೋನ್ʼ ನ ವರೆಗೆ).

ಅದಕ್ಕಾಗಿ ದೀರ್ಘ ಮತ್ತು ಶಾಂತಶ್ವಾಸ ಮಾಡಬೇಕು. ನೆಲವು ನೀರನ್ನು ಇರುವಂತೆ ದೇಹದ ಜೀವಕೋಶಗಳು ಒಳಬಂದ ಗಾಳಿಯನ್ನು ಇರುತ್ತದೆ. ಈ ಹೀರಿಕೆಯನ್ನು ಮತ್ತು ಅದು ಸುತ್ತೆಲ್ಲ ಹರಡುವ ಪ್ರಾಣಶಕ್ತಿಯ ಹರಿದಾಟವನ್ನು ನಿಮ್ಮ ಚಿತ್ತವು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು ಕ್ರಿಯೆ ನಡೆದಿರುವಾಗ ಗಂಟಲು ಸಡಿಲವಾಗಿರಲಿ ಕಣ್ಣು ಮುಚ್ಚಿರಲಿ ಆದರೆ ಒಳನೋಟ ಚುರುಕಾಗಿರಲಿ ಉಸಿರು ತೆಗೆದುಕೊಳ್ಳುವಾಗ ಕಣ್ಣಿನ ದೃಷ್ಟಿ ಮೇಲೆ ಹೋಗದಿರಲಿ ಕಿವಿ ಮೂಗು ಹಾಗೂ ಹಣೆಯ ಮಾಂಸ ಖಂಡಗಳು ವಿಶ್ರಾಂತ ಸ್ಥಿತಿಯಲ್ಲಿ ಸರಿಯಾದ ಶ್ವಾಸದಿಂದ ಸೋಮಾರಿತನ ದೂರವಾಗಿ ದೇಹ ಮನಸ್ಸುಗಳಲ್ಲಿ ಚೈತನ್ಯ ಪುಟಿದೇಳುತ್ತದೆ.

ರೇಚಕ ಉಸಿರು ನಿಧಾನವಾಗಿ ಹೊರಹೋಗುವಂತೆ ದೇಹವು ಎಚ್ಚರ ವಹಿಸಬೇಕು. ಈ ಕ್ರಿಯೆಯು ಎದೆ ಮೇಲ್ಭಾಗದಿಂದ ಪ್ರಾರಂಭವಾಗುತ್ತದೆ (ಆಗ ಮೇಲ್-ಮೈ ಮಾಂಸ ಖಂಡಗಳ ಮತ್ತು ಪಕ್ಕೆಲುಬುಗಳ ಹಿಡಿತ ಸಡಿಲಗೊಳ್ಳಬಾರದು. ಏಕೆಂದರೆ ದೃಢ ಮತ್ತು ಶಾಂತ ರೇಚಕ ಕ್ರಿಯೆ ಈ ಹಿಡಿತವೇ ಆಧಾರ). ನಿಧಾನವಾಗಿ ಹೊಕ್ಕಳಿನ ಎಳೆದಾಗ ಜಾಗ ಖಾಲಿ ಆಗುವವರೆಗೂ ರೇಚಕ ನಡೆಯಲಿ ಯಾಗ ಮುಂಡಬಾಗ ಭದ್ರವಾಗಿರಲಿ ಬೆನ್ನು ಹುರಿಯ ಮಧ್ಯಭಾಗದ ಜೊತೆಗೆ ಎಡಬಲ ಭಾಗಗಳ ಹಿಡಿತ ಬಲವಾಗಿರಲಿ ಎದೆ ಮತ್ತು ತೋಳುಗಳು ಚರ್ಮವು ಕಂಕುಳಿಗೆ ತಗುಲಿರಬಾರದು ಅಲ್ಲಿ ಸಾಕಷ್ಟು ಜಾಗ ಇರಬೇಕು.