ಮನೆ ದೇವರನಾಮ ಉಸಿರಿರುವ ತನಕ

ಉಸಿರಿರುವ ತನಕ

0

Join Our Whatsapp Group

ಉಸಿರಿರುವ ತನಕ ನಾನು ನನ್ನದು |
ಕುಸಿದು ಬಿದ್ದಾಗ ಹೆಣವಹುವುದು || ಪ
ಪಾಪ , ಪುಣ್ಯಾದ ಲೆಕ್ಕ |
ಹೋಗುವಾಗ ಪಕ್ಕಾ |
ಇರುವಾಗ ಮೆರೆದರೆ ಕಾಣುವೆ ನರಕ |
ಮೆರೆಯದೆ ನೆನೆ ಹರಿಯ ಕೊನೆತನಕ || 1
ಏಸು ಜನುಮದ ಪುಣ್ಯಾದ ಫಲ |
ಮಾನವನಾಗಿ ಹುಟ್ಟಿದ ಫಲ |
ಸಾರ್ಥಕ ಮಾಡಿಕೊ ಬದುಕಿರುವಾಗ |
ಪರಮಾರ್ಥ ಹೊಂದುವೆ ನಿನಾಗ || 2
ಖಡ , ಖಡ ಬರುವರು ಯಮನ ದೂತರು |
ಬಿಡದೆ ಸೆಳೆದೊಯ್ಯುವರು |
ವ್ಯರ್ಥ ಮಾಡದೆ ವೇಳೆಯನು |
ನೆನೆ ಜಾಹ್ನವಿ ವಿಠ್ಠಲನನು ||

ಹಿಂದಿನ ಲೇಖನರಾಜ್ಯದಲ್ಲಿ ಸಾಕಷ್ಟು ನೀರಿಲ್ಲ, ಆದರೂ ತಮಿಳುನಾಡಿಗೆ 10 ಟಿಎಂಸಿ ನೀರು ಬಿಡುಗಡೆ: ಡಿ.ಕೆ ಶಿವಕುಮಾರ್
ಮುಂದಿನ ಲೇಖನಪ್ರಾಣಾಯಾಮ