ಮನೆ ರಾಜ್ಯ ಅಂಬಿಗರನಹಳ್ಳಿ ಕುಂಭ ಮೇಳಕ್ಕೆ ಸಿದ್ಧತೆ ಪೂರ್ಣ: ಸಚಿವ ಕೆ.ಗೋಪಾಲಯ್ಯ

ಅಂಬಿಗರನಹಳ್ಳಿ ಕುಂಭ ಮೇಳಕ್ಕೆ ಸಿದ್ಧತೆ ಪೂರ್ಣ: ಸಚಿವ ಕೆ.ಗೋಪಾಲಯ್ಯ

0

ಬೆಂಗಳೂರು(Bengaluru): ಇದೇ 13ರಿಂದ ಕೆ.ಆರ್ ಪೇಟೆಯ ಅಂಬಿಗರ ಹಳ್ಳಿ, ಸಂಗಾಪುರ ಜಾಗದಲ್ಲಿ ಕುಂಬಮೇಳವನ್ನು ಆಯೋಜಿಸಲಾಗಿದ್ದು, ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಕೆ.ಸಿ.ನಾರಾಯಣ ಗೌಡರು ಮೊದಲಬಾರಿ ಶಾಸಕರಾದಾಗ ಅಲ್ಲಿ ಕುಂಬಮೇಳ ನಡೆದಿತ್ತು.ಇದೀಗ ಮತ್ತೆ ಆಯೋಜಿಸಲಾಗಿದೆ. ಮೇಳಕ್ಕೆ ಆಡಳಿತ, ವಿಪಕ್ಷದ ಎಲ್ಲರಿಗೂ ಆಹ್ವಾನ ನೀಡಲಾಗಿದೆ ಎಂದರು.

ಇದು ಧಾರ್ಮಿಕ ಕಾರ್ಯಕ್ರಮವಾಗಿದ್ದು, ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ. 40 ಜನ ಸಾಧು ಸಂತರು ಭಾಗಿಯಾಗಲಿದ್ದಾರೆ. ಬರುವವರಿಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.ಸಂಗಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ನುರಿತ ಈಜುಪಟುಗಳು, ಪೊಲೀಸರನ್ನ ನೇಮಕ ಮಾಡಲಾಗಿದೆ‌. ಬರುವವರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಆದಿ ಚುಂಚನಗಿರಿ ಮಠದ ಡಾ.ನಿರ್ಮಲಾನಂದ ನಾಥ ಸ್ವಾಮೀಜಿ, ಸಿಎಂ ಬೊಮ್ಮಾಯಿ, ಉತ್ತರ ಪ್ರದೇಶ ಸಿಎಂಯೋಗಿ ಆದಿತ್ಯನಾಥ್ ಭಾಗಿಯಾಗಲಿದ್ದಾರೆ ಎಂದರು.

13ರಂದು ಮಾದೇಶ್ವರ ದೇವಸ್ಥಾನದಲ್ಲಿ ಉದ್ಘಾಟನೆ ಆಗಲಿದೆ.ಅದು ಸದಾ ಕಾಲ ತೆರೆದಿರಬೇಕು ಅಂತ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.ರಾಜ್ಯ

ಸರ್ಕಾರದಿಂದ ಸಿಎಂ 2 ಕೋಟಿ‌ ಹಣ ಬಿಡುಗಡೆ ಮಾಡಿದ್ದಾರೆ.ಊಟ, ಪ್ರಸಾದಕ್ಕಾಗಿ ದಾನಿಗಳು ವ್ಯವಸ್ಥೆ ಮಾಡಿದ್ದಾರೆ.ಉಳಿದ ಸಣ್ಣ ಪುಟ್ಟ ಖರೀದಿ ಮಾಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ಸಚಿವ ಡಾ.ಕೆ.ಸಿ.ನಾರಾಯಣಗೌಡ ಉಪಸ್ಥಿತರಿದ್ದರು.