ಮನೆ ಅಪರಾಧ ಬೆಂಗಳೂರು: ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಬೆಂಗಳೂರು: ಒಂದೇ ಕುಟುಂಬದ ಮೂವರು ಆತ್ಮಹತ್ಯೆ

0

ಬೆಂಗಳೂರು(Bengaluru): ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾಲಕ್ಷ್ಮೀ ಲೇಔಟ್’ನ  ಮನೆಯೊಂದರಲ್ಲಿ ನಡೆದಿದೆ.

ಯಶೋಧಾ(70), ಸುಮನ್(41), ನರೇಶ್ ಗುಪ್ತಾ(36) ಎಂಬ ತಾಯಿ, ಮಗಳು ಹಾಗೂ ಮಗ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತ ತಾಯಿ ಯಶೋಧಾರಿಗೆ ಮೂವರು ಮಕ್ಕಳಿದ್ದಾರೆ. ಈ ಪೈಕಿ ಒಬ್ಬ ಮಗಳು ಮದುವೆ ಆಗಿ ರಾಜಾಜಿನಗರದಲ್ಲಿ ನೆಲೆಸಿದ್ದಾಳೆ. ಮಗ ನರೇಶ್, ಮತ್ತೋರ್ವ ಪುತ್ರಿ ಸುಮನ್ ತಾಯಿ ಯಶೋಧಾ ಜತೆ ನೆಲೆಸಿದ್ದರು. ಆದ್ರೆ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತ ನರೇಶ್ ವೃತ್ತಿಯಲ್ಲಿ ಕಾಂಟ್ರಾಕ್ಟರ್ ಆಗಿದ್ದ.

ಯಶೋಧರಿಗೆ ಸಂಬಂಧಿಕರು ಹಲವು ಬಾರಿ ಕರೆ ಮಾಡಿದ್ದು, ಅವರು ಸ್ವೀಕರಿಸಿಲ್ಲ. ಈ ಹಿನ್ನಲೆ ಸಂಬಂಧಿಕರು ರಾಜಾಜಿನಗರದಲ್ಲಿರುವ 2ನೇ ಮಗಳಿಗೆ ಕರೆ ಮಾಡಿ ತಿಳಿಸಿದ್ದಾರೆ. ನಂತರ ಮನೆ ಬಳಿ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ.

ಸ್ಥಳಕ್ಕೆ ಮಹಾಲಕ್ಷ್ಮಿ ಲೇಔಟ್ ಠಾಣಾ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಹಿಂದಿನ ಲೇಖನಶ್ರೀನಗರ: ಮೂವರು ಉಗ್ರರನ್ನು ಹೊಡೆದುರುಳಿಸಿದ ರಕ್ಷಣಾ ಪಡೆ
ಮುಂದಿನ ಲೇಖನಸರ್ಕಾರಿ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಬಂದ ತಕ್ಷಣ ವರ್ಗಾವಣೆ ಪರಿಹಾರವಲ್ಲ: ಹೈಕೋರ್ಟ್