ಮನೆ ರಾಜ್ಯ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಿದ್ಧತೆ ಮಾಡಿಕೊಳ್ಳಿ : ಸಿಎಂ ಸಿದ್ದರಾಮಯ್ಯ

ಕೊರೊನಾ ಸೋಂಕು ನಿಯಂತ್ರಣಕ್ಕೆ ಸಿದ್ಧತೆ ಮಾಡಿಕೊಳ್ಳಿ : ಸಿಎಂ ಸಿದ್ದರಾಮಯ್ಯ

0

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತೆ ತಲೆದೋರುವ ಆತಂಕದ ನಡುವೆಯೇ, ಬೆಂಗಳೂರಿನಲ್ಲಿ ಒಂದೇ ಕಡೆ ಸುಮಾರು 71 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ತುರ್ತು ಸಭೆ ನಡೆಸಿ, ಕೊರೊನಾ ತಡೆಗೆ ತಕ್ಷಣ ಸಿದ್ಧತೆ ಆರಂಭಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಸಭೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಿಎಂ ಸಿದ್ದರಾಮಯ್ಯ, “ಕಳೆದ ಬಾರಿ ಅನುಭವಿಸಿದಂತೆಯೇ ಈ ಬಾರಿ ಸಮಸ್ಯೆ ಉಂಟಾಗಬಾರದು. ಕೊರೊನಾ ನಿಯಂತ್ರಣಕ್ಕೆ ಶಕ್ತಿಯುತ ಕ್ರಮ ಕೈಗೊಳ್ಳಿ” ಎಂದು ತಿಳಿಸಿದರು.

ಕೊರೋನಾ ನಿಯಂತ್ರಣಕ್ಕೆ ತಕ್ಷಣ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಬೇಕು. ಕೋವಿಡ್ ಹೆಲ್ಪ್ ಲೈನ್ ಪುನಃ ತೆರೆಯಬೇಕು. ಇದರಿಂದ ಸಾರ್ವಜನಿಕರಿಗೆ ಸರಳವಾಗಿ ಮಾಹಿತಿ ಒದಗಿಸಲು ಸಹಾಯವಾಗಲಿದೆ. ಜ್ವರ, ನೆಗಡಿ, ಉಸಿರಾಟದ ಸಮಸ್ಯೆ ಹೊಂದಿರುವ ಮಕ್ಕಳಿಗೆ ಶಾಲೆಯಲ್ಲಿ ರಜೆ ನೀಡುವ ಬಗ್ಗೆ ಸ್ಪಷ್ಟ ಮಾರ್ಗಸೂಚಿ ನೀಡಬೇಕು. ಆಸ್ಪತ್ರೆಗಳ ಸಿದ್ಧತೆ, ಚಿಕಿತ್ಸೆ, ಅಗತ್ಯವಿರುವ ಔಷಧೋಪಚಾರ ವ್ಯವಸ್ಥೆಯ ಮೇಲೆ ನಿಗಾ ಇರಿಸಬೇಕು.